ಉಳೆಪಾಡಿ – ಸಾಮೂಹಿಕ ವಿವಾಹ

ಕಿನ್ನಿಗೋಳಿ: ಜಾತಿ-ಮತ ಬೇಧ ಮರೆತು ಸಮಾನತೆ ಮತ್ತು ಸಾಮರಸ್ಯ ಸಾಧಿಸಲು ಸರಳವಾಗಿ ನಡೆಯುವ ಸಾಮೂಹಿಕ ವಿವಾಹದಿಂದ ಸಾಧ್ಯ. ಸಾಮೂಹಿಕ ವಿವಾಹ ಸರಳ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ಕೆ. ದುಗ್ಗಣ್ಣ ಸಾವಂತರು ಹೇಳಿದರು.
ಭಾನುವಾರ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ನಡೆದ ಆರನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಳ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಶುಭಾಶಂಸನೆಗೈದರು.
ಅಶೋಕ್-ಸೋನಿಯಾ, ಗೋಪಾಲ-ಆಶಾ, ಬಾಲಕೃಷ್ಣ-ಪುಷ್ಪ, ರಮೇಶ್-ಕಮಲ, ಗಣೇಶ್-ಹಿಮಾ, ರಾಜ್-ಲತಾ ಒಟ್ಟು ಆರು ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು.
ಈ ಸಂಧರ್ಭ ಸಾಮೂಹಿಕ ವಿವಾಹದ ಸಂಚಾಲಕ ಬಳ್ಕುಂಜೆಗುತ್ತು ಡಾ. ಕೃಷ್ಣಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೇವಕ ರಾಜು ಹಾಗೂ ಆನಂದ ದಂಪತಿಗಳನ್ನು ಗೌರವಿಸಲಾಯಿತು. ಮೆಲಿಷಾ ರೋಡ್ರಿಗಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದ ಗೌರವಾಧ್ಯಕ್ಷರಾದ ವಿರಾರ್ ಶಂಕರಶೆಟ್ಟಿ ಬಳ್ಕುಂಜೆ, ಎಂ.ಎಸ್. ಕೃಷ್ಣ ಮೋಹನ್ ಮಂಗಳೂರು, ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಾರ್ಯಧ್ಯಕ್ಷರಾದ ನಾರಾಯಣ ಶೆಟ್ಟಿ , ಸುಧಾಕರ್ ಕಿನ್ನಿಗೋಳಿ , ನ್ಯಾಯವಾದಿ ಶಂಭು ಶರ್ಮಾ, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಪುರುಷೋತ್ತಮ ಪೂಜಾರಿ ಉಳೆಪಾಡಿ, ಮೈಕಲ್ ರೊಡ್ರಿಗಸ್, ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು, ಸುಧಾಕರ ಶೆಟ್ಟಿ, ತುಕಾರಾಂ ಬಂಗೇರ, ಮಮತಾ ಪೂಂಜಾ, ಶ್ರೀಮತಿ ಮೋಹನ್‌ದಾಸ್ ಮತ್ತಿತರರು ಉಪಸ್ಥಿತರಿದ್ದರು.
ದೇವಳದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್ ಸ್ವಾಗತಿಸಿದರು. ಶರತ್ ಶೆಟ್ಟಿ ಹಾಗೂ ರಘುನಾಥ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-23051601 Kinnigoli-23051602 Kinnigoli-23051603 Kinnigoli-23051604 Kinnigoli-23051605 Kinnigoli-23051606 Kinnigoli-23051607 Kinnigoli-23051608 Kinnigoli-23051609

Comments

comments

Comments are closed.

Read previous post:
Kinnigoli-210516016
ರಸ್ತೆ ಕಾಮಗಾರಿ ವೀಕ್ಷಣೆ

ಮೂಲ್ಕಿ: ಮೀನುಗಾರಿಕಾ ಇಲಾಖೆಯ ಅನುದಾನದಲ್ಲಿ ಸಸಿಹಿತ್ಲುವಿನಿಂದ ಮುಂಡದವರೆಗೆ 30 ಲಕ್ಷ ವೆಚ್ಚದಲ್ಲಿ 800 ಮೀ ಉದ್ದದ ರಸ್ತೆ ನಿರ್ಮಾಣ, ಫೇವರ್ ಫಿನಿಶ್ ಡಾಮರೀಕರಣ, ಮುಂಡ ಬಳಿ ಜಲ ಸಾಹಸ...

Close