ಸಸಿಹಿತ್ಲು ತಂಡಕ್ಕೆ ಸನ್ನಿ ಟ್ರೋಪಿ-2016

ಹಳೆಯಂಗಡಿ: ಹಳೆಯಂಗಡಿ ಸಮೀಪದ ಪಡುಪಣಂಬೂರಿನಲ್ಲಿ ಸನ್ನಿ ಕ್ರಿಕೆಟರ‍್ಸ್ ಸಂತೆಕಟ್ಟೆ ಆಯೋಜಿಸಿದ್ದ ಸನ್ನಿ ಟ್ರೋಫಿ-2016 ಯನ್ನು ಆಂಜನೇಯ ಸಸಿಹಿತ್ಲು ಗೆದ್ದುಕೊಂಡಿದೆ. ಸುಮಾರು 30 ತಂಡಗಳು ಭಾಗವಹಿಸಿದ್ದ ಸನ್ನಿ ಟ್ರೋಫಿಯ ಉಪಾಂತ್ಯ ಪಂದ್ಯದಲ್ಲಿ ಆಂಜನೇಯ ಸಸಿಹಿತ್ಲು ತಂಡ ಓಂ ಕ್ರಿಕೆಟರ‍್ಸ್ ಪಾವಂಜೆಯನ್ನು ರೋಮಾಂಚಕವಾಗಿ ಸೋಲಿಸಿ ಟ್ರೋಫಿ ಹಾಗೂ ನಗದು ಬಹುಮಾನ ಪಡೆಯಿತು. ಅಂತಿಮ ಪಂದ್ಯದ ಪಂದ್ಯಶೇಷ್ಠ, ಸರಣಿ ಶ್ರೇಷ್ಠರಾಗಿ ಆಂಜನೇಯ ಸಸಿಹಿತ್ಲು ತಂಡದ ಯಶವಂತ, ಉತ್ತಮ ದಾಂಢೀಗನಾಗಿ ರಘುರಾಮ, ಉತ್ತಮ ಎಸೆತಗಾರನಾಗಿ ಓಂ ಪಾವಂಜೆಯ ಅಭಿಷೇಕ್ ಆಯ್ಕೆಯಾದರು. ಬಹುಮಾನ ವಿತರಣೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಗ್ರಾ.ಪಂ. ಆದ್ಯಕ್ಷ ಮೋಹನ್ ದಾಸ್ ವಹಿಸಿದ್ದರು. ವೇದಿಕೆಯಲ್ಲಿ ಹಳೆಯಂಗಡಿ ತಾ.ಪಂ. ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಪಂಚಾಯತಿ ಸದಸ್ಯರಾದ ವಸಂತ ಬೆರ್ನಾಡ್, ಅಬ್ದುಲ್ ಖಾದರ್ , ಅಬ್ದುಲ್ ಅಜೀಜ್, ಮಾಜಿ ಸದಸ್ಯ ಸಾಹುಲ್ ಹಮೀದ, ಉದ್ಯಮಿ ಅಬ್ಬು ಸಾಲಿ, ಪಡುಪಣಂಬೂರು ಪಂಚಾಯತಿ ಸದಸ್ಯರಾದ ಹರಿಪ್ರಸಾದ, ವಿನೋದ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಸಂಸ್ಥೆಗೆ ಕೊಡುಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.
ಸಂಘಟಕ ಅಬ್ದುಲ್ ಖಾದರ್ ಕೋಡಿಕಲ್ ಸ್ವಾಗತಿಸಿ ವಂದಿಸಿದರು.

Kinnigoli-24051601

 

Comments

comments

Comments are closed.

Read previous post:
Kinnigoli-230516012
ಎಳತ್ತೂರಿನಲ್ಲಿ ಯೂತ್ ಸಮಾಗಮ

ಕಿನ್ನಿಗೋಳಿ: ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಂಘಸಂಸ್ಥೆಗಳ ಕಾರ್ಯ ಶ್ಲಾಘನೀಯ, ವಿದ್ಯಾರ್ಥಿಗಳು ಪಡೆದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸಿಕೊಂಡು ದೇಶಕ್ಕೆ ಗೌರವ ತರಬೇಕು ಎಂದು ಗ್ಯಾನ್...

Close