ಸಸಿಹಿತ್ಲು: ಸರ್ಫಿಂಗ್ ಫೆಸ್ಟಿವಲ್

ಮೂಲ್ಕಿ: ರಾಜ್ಯ ಪ್ರವಾಸೋದ್ಯಮ ಇಲಾಖೆ,ಆಲ್ ಕಾರ್ಗೋ ಸಂಸ್ಥೆ ಮತ್ತು ಕೆನರಾ ಸರ್ಫಿಂಗ್ ಸಂಸ್ಥೆಯ ಆಶ್ರಯದಲ್ಲಿ ಮೂಲ್ಕಿ ಮಂತ್ರ ಸರ್ಫಿಂಗ್ ಕ್ಲಬ್ ನೇತ್ರತ್ವದಲ್ಲಿ ಸಸಿಹಿತ್ಲು ಮುಂಡ ಸಮುದ್ರ ತಟದ ಅಳಿವೆ ಪ್ರದೇಶದಲ್ಲಿ ಮೇ 27 ರಿಂದ 29 ರ ವರೆಗೆ ಮೂರು ದಿನಗಳ ಕಾಲ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಓಪನ್ ಸರ್ಫಿಂಗ್ ಫೆಸ್ಟಿವಲ್ ಜರಗಲಿದೆಯೆಂದು ಕಾರ್ಯಕ್ರಮದ ಸಂಯೋಜಕ ಧನ್ ರಾಜ್ ಶೆಟ್ಟಿ ತಿಳಿಸಿದರು.
ಸಸಿಹಿತ್ಲುವಿನಲ್ಲಿ ಜರಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿ ಜಿಲ್ಲೆಯಲ್ಲಿ ಸರ್ಫಿಂಗ್ ಗೆ ಉತ್ತಮ ಅವಕಾಶವಿದ್ದು ಇಂತಹ ಕಾರ್ಯಕ್ರಮಗಳಿಂದ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಸಚಿವರುಗಳಾದ ಆರ್ ವಿ ದೇಶಪಾಂಡೆ, ಜಿ ಪರಮೇಶ್ವರ್, ಕೆ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಬಿ. ರಮಾನಾಥ ರೈ, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್, ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸುಮಾರು 150 ತಂಡಗಳು ಭಾಗವಹಿಸಲಿದ್ದು 16 ವರ್ಷಕ್ಕಿಂತ ಕೆಳಗಿನ, 17ರಿಂದ 22, 33 ರಿಂದ 28 ಹಾಗೂ 28 ರಿಂದ ಮೇಲ್ಪಟ್ಟ ವಯಸ್ಸಿನ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ, ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯು 25 ಲಕ್ಷ ಅನುದಾನ ನೀಡಿದೆ. ಜಲ ಸಾಹಸ ಕ್ರೀಡೆಗೆ ರಾಜ್ಯ ಸರ್ಕಾರವು 1 ಕೋಟಿ ಅನುದಾನ ನೀಡಿದ್ದು ಇದರಿಂದ ಇಲ್ಲಿನ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಅವಕಾಶವಿದೆ, ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ಸಿಗುವ ಸಾದ್ಯತೆಯಿದೆ. 27 ರ ಬೆಳಿಗ್ಗೆ ಉದ್ಘಾಟನಾ ಸಮಾರಂಭ ಜರಗಲಿದ್ದು 29 ರಂದು ಸಮಾರೋಪ ಸಮಾರಂಭ ಜರಗಲಿದೆ. ಕೆನರಾ ಸರ್ಫಿಂಗ್ ಸಂಸ್ಥೆಯು ಸರ್ಫಿಂಗ್, ಜಲ ಸಾಹಸ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದು ಕೆರೆ ಅಭಿವೃದ್ದಿಯಲ್ಲಿ ಕೂಡ ತೊಡಗಿಸಿಕೊಂಡಿದೆ. ಬಗ್ಗುಂಡಿ ಕೆರೆ ಅಭಿವೃದ್ದಿಗೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆಯೆಂದು ಸಂಘಟಕ ಯತೀಶ್ ಬೈಕಂಪಾಡಿ ತಿಳೀಸಿದರು. ಹಳೆಯಂಗಡಿ ಪಂಚಾಯಿತಿ ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್ ಉಪಸ್ಥಿತರಿದ್ದರು.

Mulki--24051605

Comments

comments

Comments are closed.

Read previous post:
Mulki--24051604
ಅಭಿವೃದ್ದಿ ಕಾಮಗಾರಿ ಪರಿಶೀಲನಾ ಸಭೆ

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ನ ನೂತನ ಬಸ್ಸು ನಿಲ್ದಾಣಕ್ಕೆ ಭೂ ಸ್ವಾಧೀನಕ್ಕೆ ಮುಖ್ಯ ಮಂತ್ರಿಯವರು ಎಸ್ ಎಫ್ ಸಿ ಯ ವಿಶೇಷ ಅನುದಾನದಲ್ಲಿ 3 ಕೋಟಿ ಮಂಜೂರು...

Close