ಅಭಿವೃದ್ದಿ ಕಾಮಗಾರಿ ಪರಿಶೀಲನಾ ಸಭೆ

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ನ ನೂತನ ಬಸ್ಸು ನಿಲ್ದಾಣಕ್ಕೆ ಭೂ ಸ್ವಾಧೀನಕ್ಕೆ ಮುಖ್ಯ ಮಂತ್ರಿಯವರು ಎಸ್ ಎಫ್ ಸಿ ಯ ವಿಶೇಷ ಅನುದಾನದಲ್ಲಿ 3 ಕೋಟಿ ಮಂಜೂರು ಮಾಡಿದ್ದು ಶೀಘ್ರದಲ್ಲಿ ಭೂ ಸ್ವಾಧೀನ ಕಾರ್ಯ ನಡೆದು ಮೂಲ್ಕಿಗೆ ಸುಸಜ್ಜಿತ ಬಸ್ಸು ನಿಲ್ದಾಣ ಹಾಗೂ ವಾಣಿಜ್ಯ ಸಂರ್ಕೀಣದ ನಿರ್ಮಾಣವಾಗಲಿದೆಯೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ನಗರ ಪಂಚಾಯತ್ ನ ಸಭಾ ಭವನದಲ್ಲಿ ಜರಗಿದ ಮೂಲ್ಕಿ ನಗರ ಪಂಚಾಯತ್ ನ ಅಭಿವೃದ್ದಿ ಕಾಮಗಾರಿಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಮುಖ್ಯ ಮಂತ್ರಿಯವರು ತನ್ನ ಮನವಿಯ ಮೇರೆಗೆ ಎಸ್ ಎಫ್ ಸಿ ಯ ವಿಶೇಷ ಅನುದಾನದಲ್ಲಿ ೩ ಕೋಟಿ ಮಂಜೂರಾಗಿದ್ದು ಅ ಹಣವನ್ನು ಭೂ ಸ್ವಾಧೀನಕ್ಕೆ ವಿನಿಯೋಗಿಸಲಾಗುವುದು. ಮೂಡಬಿದ್ರಿ ರೀತಿಯಲ್ಲಿ ಮೂಲ್ಕಿಯಲ್ಲಿ ಕೂಡ ವಾಣಿಜ್ಯ ಸಂಕೀರ್ಣದ ಜೊತೆಗೆ ಬಸ್ಸು ನಿಲ್ದಾಣ ನಿರ್ಮಿಸುವಂತೆ ತಿಳಿಸಿದರು.ಬಸ್ಸು ನಿಲ್ದಾಣಕ್ಕೆ ಕೇಂದ್ರದ ಹಾಗೂ ಸಂಸದರ ಅನುದಾನ ಬಗ್ಗೆ ಕೂಡ ಸಂಸದರಲ್ಲಿ ಚರ್ಚಿಸಲಾಗುವುದು.ಮೂಲ್ಕಿಯಲ್ಲಿ ಸುಸಜ್ಜಿತವಾದ ವಿಶೇಷ ತಹಶೀಲ್ದಾರ್ ಕಚೇರಿ ನಿರ್ಮಾಣವಾಗಿದ್ದು ವಿಶೇಷ ತಹಶೀಲ್ದಾರ್ ರವರು ಆಕಸ್ಮಿಕವಾಗಿ ನಿಧನ ಹೊಂದಿದ ಬಳಿಕ ವಿಶೇಷ ತಹಶೀಲ್ದಾರ್ ಹುದ್ದೆಗೆ ಮುಂದಿನ ಒಂದು ತಿಂಗಳ ಒಳಗೆ ವಿಶೇಷ ತಹಶೀಲ್ದಾರ್ ನೇಮಕ ಮಾಡಲಾಗುವುದು. ಮೂಲ್ಕಿಯಲ್ಲಿ ರಾಷ್ತ್ರೀಯ ಹೆದ್ದಾರಿಯ ಅರ್ಧದಲ್ಲಿ ನಿಲ್ಲಿಸಿದ ಸರ್ವಿಸ್ ರಸ್ತೆ,ಚರಂಡಿ ನಿರ್ಮಾಣ ಮತ್ತಿತರ ಕಾಮಗಾರಿಗಳ ಬಗ್ಗೆ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಶೀಘ್ರದಲ್ಲಿ ಅವರು ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆಂದು ಸಚಿವರು ತಿಳಿಸಿದರು.ಮೂಲ್ಕಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಸಂಕೀರ್ಣಗಳು ತಲೆಯೆತ್ತುತ್ತಿದ್ದು ಒಳ ಚರಂಡಿ ಹಾಗೂ ಜುಡಿಯುವ ನೀರಿನ ಸಮಸ್ಯೆಯಿದ್ದು ಮೂಲ್ಕಿ ಪರಿಸರದಲ್ಲಿರುವ ಕೆರೆಗಳ ಹೂಳೆತ್ತುವ ಮೂಲಕ ಶಾಸ್ವತವಾಗಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.ಒಳ ಚರಂಡಿ ಯೋಜನೆಗೆ ಹಂತ ಹಂತವಾಗಿ ಪ್ರಸ್ತಾವನೆ ಸಲ್ಲಿಸಿದಲ್ಲಿ ನಗರಾಭಿವೃದ್ದಿ ಸಚಿವರ ಮೂಲಕ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಮೂಲ್ಕಿಯಲ್ಲಿ 11 ಕೆ ವಿ ಯ ವಿದ್ಯುತ್ ಉಪ ವಿಭಾಗ ಆರಂಭಗೊಂಡಿದ್ದು ಇದರಿಂದ ಇಲ್ಲಿನವರಿಗೆ ತುಂಬಾ ಪ್ರಯೋಜನವಾಗಲಿದ್ದು ಮೂಲ್ಕಿಗೆ ನಂದಿಕೂರಿನಿಂದ ನೇರ 11 ಕೆ ವಿ ವಿದ್ಯುತ್ ಸಂಪರ್ಕದ ಕಾಮಗಾರಿಯು ಕುಂಠುತಾ ಸಾಗುತ್ತಿದ್ದು ಕೂಡಲೇ ಇದನ್ನು ಪೂರ್ಣಗೊಳಿಸಿ ಮೂಲ್ಕಿಗೆ ನಂದಿಕೂರಿನಿಂದ ನೇರ ವಿದ್ಯುತ್ ಸಂಪರ್ಕ ನೀಡಿ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದೆಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಹಿಸಿದ್ದು ಉಪಾಧ್ಯಕ್ಷೆ ವಸಂತಿ ಭಂಡಾರಿ, ಮಾಜಿ ಅಧ್ಯಕ್ಷ ಬಿ ಎಂ ಆಸೀಫ್ ಮತ್ತು ಸದಸ್ಯರು ಉಪಸ್ಥಿತರಿದ್ದರು
ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ವಾಣಿ ಆಳ್ವ ಸ್ವಾಗತಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ ವಂದಿಸಿದರು.

Mulki--24051604

Comments

comments

Comments are closed.

Read previous post:
Mulki--24051603
ಮೂಲ್ಕಿ: ರೂಪಾ ಅಯ್ಯರ್ ಭೇಟಿ

ಮೂಲ್ಕಿ: ಸಮಾಜದಲ್ಲಿನ ಸಮಸ್ಯೆಗಳನ್ನು ಚಲನ ಚಿತ್ರಗಳ ಮೂಲಕ ಜನರಿಗೆ ತಲುಪಿಸಲು ಉತ್ತಮ ವೇದಿಕೆಯಾಗಿದ್ದು ಇದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಿಸಬೇಕೆಂದು ಅಂತರಾಷ್ಟ್ರೀಯ...

Close