ಭಾರತೀಯ ಮುಕ್ತ ಸರ್ಫಿಂಗ್ -2016

ಹಳೆಯಂಗಡಿ: ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಅನೇಕ ಅವಕಾಶಗಳಿದ್ದು ಕೇಂದ್ರ ಸರಕಾರದ ಸ್ವದೇಶಿ ದರ್ಶನ್ ಯೋಜನೆ ಮೂಲಕ ಕರಾವಳಿ ಜಿಲ್ಲೆಯ ಬೀಚ್ ಅಭಿವೃದ್ದಿಗೆ 92 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕರಾವಳಿ ಜಿಲ್ಲೆಯ ಮುರ್ಡೇಶ್ವರ ಮರವಂತೆ, ತ್ರಾಸಿ, ಮಾವಿನಕುರ್ವೆ, ಸೋಮೇಶ್ವರ, ಸುರತ್ಕಲ್, ಮಲ್ಪೆ, ಓಂ ಬೀಚ್ ಸೇರಿದಂತೆ ಸುಮಾರು 9 ಬೀಚ್ ಗಳನ್ನು ಅಭಿವೃದ್ದಿ ಪಡಿಸಲಾಗುವುದು. ಸ್ವಚ್ಚತೆಗಾಗಿ, ಪ್ರವಾಸೋದ್ಯಮ, ಭದ್ರತೆ ಮತ್ತು ಬೀಚ್ ಅಭಿವೃದ್ದಿಗಳಿಗೆ ಅನುದಾನ ವಿನಿಯೋಗಿಸಲಾಗುವುದು ಎಂದು ಕರ್ನಾಟಕ ಸರಕಾರದ ಪ್ರವಾಸೋದ್ಯಮ ಮತ್ತು ಭಾರಿ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಆಲ್ ಕಾರ್ಗೋ ಸಂಸ್ಥೆ, ಮಂತ್ರ ಸರ್ಫಿಂಗ್ ಕ್ಲಬ್ ಮೂಲ್ಕಿ, ಕೆನರಾ ಸರ್ಫಿಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಪ್ರಮೋಶನಲ್ ಕೌನ್ಸಿಲ್, ಮತ್ತು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸಸಿಹಿತ್ಲು ಸಮೀಪದ ಮುಂಡ ಬೀಚ್ ನಲ್ಲಿ ಮೂರು ದಿನಗಳ ಕಾಲ ಜರಗಲಿರುವ ರಾಷ್ಟ್ರ ಮಟ್ಟದ ಭಾರತೀಯ ಮುಕ್ತ ಸರ್ಫಿಂಗ್ -2016 ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು
ಜಿಲ್ಲೆಯಲ್ಲಿ ಸರ್ಫಿಂಗ್ ಸ್ಪರ್ಧೆ ಪ್ರಥಮ ಬಾರಿ ಆಯೋಜಿಸಿದೆ ಮುಂದಿನ ದಿನಗಳಲ್ಲಿ ಇಕೋ ಟೂರಿಸಂ, ಹೆರಿಟೇಜ್ ಮೂಲಕ ಕರಾವಳಿಯ ಬೀಚ್ ಗಳಲ್ಲಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾದ್ಯವಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ದ.ಕ.ಜಿಲ್ಲೆಯಲ್ಲಿ ಕರಾವಳಿ ಉತ್ಸವ, ಬೀಚ್ ಉತ್ಸವ ಹಾಗೂ ಸರ್ಫಿಂಗ್ ಸ್ಪರ್ಧೆ ಸೇರಿದಂತೆ ಎಲ್ಲಾ ಸ್ಪರ್ಧೆಗಳನ್ನು ಪ್ರತಿ ವರ್ಷ ನಿಗದಿತ ದಿನಾಂಕದಂದು ಆಯೋಜಿಸಿದರೆ ದೇಶ ವಿದೇಶದಿಂದ ಬರುವವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಲಭ ಸಾಧ್ಯವಾಗಲಿದೆ. ಜಿಲ್ಲಾಡಳಿತ ಹಾಗೂ ಸರಕಾರ ಪ್ರತಿವರ್ಷ ನಿಗದಿತ ದಿನಾಂಕದಂದು ನಡೆಸಬೇಕು ಎಂದು ಹೇಳಿದರು.
ಈ ಬಗ್ಗೆ ಜಿಲ್ಲಾಡಳಿತ ಆಸಕ್ತಿ ವಹಿಸಬೇಕು,ಪ್ರ್ರವಾಸೋದ್ಯಮ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡುವುದಾಗಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕ್ರೀಡಾ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಬೀಚ್ ಅಭಿವೃದ್ದಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದ್ದು, ಸಿ ಆರ್ ಝಡ್ ವಲಯವನ್ನು ನೂರು ಮೀಟರ್ ಗೆ ಸೀಮಿತಗೊಳಿಸಿದಲ್ಲಿ ಸಮುದ್ರ ತೀರದಲ್ಲಿ ಹೆಚ್ಚಿನ ಅಭಿವೃದ್ದಿ ನಡೆಸಲು ಸಾಧ್ಯವಿದೆ ಎಂದು ಜಿಲ್ಲಾ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ಮಂಗಳೂರು ಉತ್ತರ ಶಾಸಕ ಬಿ ಎ ಮೊಯಿದಿನ್ ಬಾವಾ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್‌ ಮೋನು, ತಾ.ಪಂ ಸದಸ್ಯ ಜೀವನ್ ಪ್ರಕಾಶ್, ಪೋಲಿಸ್ ಕಮಿಷನರ್ ಎಂ ಚಂದ್ರಶೇಖರ್, ಉದ್ಯಮಿ ರೊನಾಲ್ಡ್ ಕೊಲಾಸೋ, ಮಂತ್ರ ಸರ್ಫಿಂಗ್ ಕ್ಲಬ್ ನ ಸ್ಥಾಪಕ ಸರ್ಫಿಂಗ್ ಸ್ವಾವಿ ಸ್ವಾಮಿ ನರಸಿಂಗ, ಯತೀಶ್ ಬೈಕಂಪಾಡಿ, ಧನ್ ರಾಜ್ ಶೆಟ್ಟಿ, ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜಾ ಮತ್ತಿತರರು ಉಪಸ್ಥಿತರಿದ್ದರು.

Sasihithlu-27051601 Sasihithlu-27051602 Sasihithlu-270516002 Sasihithlu-270516003 Sasihithlu-270516004 Sasihithlu-27051603 Sasihithlu-27051604 Sasihithlu-27051605 Sasihithlu-27051606 Sasihithlu-27051607 Sasihithlu-27051608 Sasihithlu-27051609 Sasihithlu-270516005 Sasihithlu-270516010 Sasihithlu-270516011 Sasihithlu-270516012 Sasihithlu-270516013 Sasihithlu-270516014 Sasihithlu-270516015

 

Comments

comments

Comments are closed.

Read previous post:
Mulki-270516012
ಸ್ವಚ್ಚತಾ ಕಾರ್ಯಕ್ರಮ

ಮೂಲ್ಕಿ: ಬೆಳೆಯುತ್ತಿರುವ ನಗರವಾಗಿರುವ ಮೂಲ್ಕಿ ಮತ್ತು ಪರಿಸರದ ಗ್ರಾಮಗಳ ಜನರಿಗಾಗಿ ರೈಲ್ವೇ ನಿಲ್ದಾಣ ಬಹಳ ಅಗತ್ಯವಾಗಿದ್ದು ಇಲ್ಲಿನ ಎರಡನೇ ಪ್ಲಾಟ್‌ಪಾಂ ಬಹಳ ಅಗತ್ಯವಿದೆ ಎಂದು ಮೂಲ್ಕಿ ಅಮಲೋದ್ಭವ...

Close