ಸ್ವಚ್ಚತಾ ಕಾರ್ಯಕ್ರಮ

ಮೂಲ್ಕಿ: ಬೆಳೆಯುತ್ತಿರುವ ನಗರವಾಗಿರುವ ಮೂಲ್ಕಿ ಮತ್ತು ಪರಿಸರದ ಗ್ರಾಮಗಳ ಜನರಿಗಾಗಿ ರೈಲ್ವೇ ನಿಲ್ದಾಣ ಬಹಳ ಅಗತ್ಯವಾಗಿದ್ದು ಇಲ್ಲಿನ ಎರಡನೇ ಪ್ಲಾಟ್‌ಪಾಂ ಬಹಳ ಅಗತ್ಯವಿದೆ ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮಗುರುಗಳಾದ ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ಹೇಳಿದರು. ಕೇಂದ್ರದ ಮೋದಿ ಸರ್ಕಾರ ಎರಡನೇ ವರ್ಷ ಪೂರೈಸಿದ ಸುಸಂಧರ್ಭದಲ್ಲಿ ರೈಲ್ವೇ ನಿಲ್ದಾಣಗಳ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಬಹಳ ಜನ ನಿಭಿಡತೆಯ ಸಂದರ್ಭ ರೈಲುಗಳನ್ನು ನಿಲ್ದಾಣದ ಪೂರ್ವದ ಹಳಿಗಳಲ್ಲಿ ರೈಲು ನಿಲ್ಲಿಸಿದ ಸಂದರ್ಭ ವಯೋವೃದ್ಧರು ರೈಲಿನಿಂದ ಇಳಿಯಲು ಹರ ಸಾಹಸ ಪಡಬೇಕಾಗುತ್ತಿರುವುದರಿಂದ ರೈಲ್ವೇ ಇಲಾಖೆ ಸೂಕ್ತ ಪ್ಲಾಟ್‌ಫಾಂ ನಿರ್ಮಿಸದಿದ್ದಲ್ಲಿ ಸಾರ್ವಜನಿಕರೇ ಸಂಘಟಿತರಾಗಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.
ಈ ಸಂದರ್ಭ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಕೇಂದ್ರ ಸರ್ಕಾರ ಬಹಳಷ್ಟು ಜನಪರ ಯೋಜನೆಗಳ ಮುಖಾಂತರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದು ಸ್ವಚ್ಚ ಭಾರತ ಪರಿಕತಲ್ಪನೆಯಲ್ಲಿ ಸಾರ್ವಜನಿಕರ ಸಹಕಾರ ಬಹು ಮುಖ್ಯ ಎಂದರು.
ಈ ಸಂದರ್ಭ ರೈಲ್ವೇ ಪ್ಲಾಟ್‌ಫಾಂ ಬದಿಗಳು ಮತ್ತು ನಿಲ್ದಾಣದ ಹೋರಗೆ ಸ್ವಚ್ಚತಾ ಕಾರ್ಯಕ್ರಮವನ್ನು ರೈಲ್ವೇ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ನೆರವೇರಿಸಿದರು.
ಈ ಸಂದರ್ಭ ತಾಪಂ ಸದಸ್ಯ ಶರತ್ ಕುಬೆವೂರು,ಮೂಲ್ಕಿ ನಗರ ಪಂಚಾಯತಿ ಸದಸ್ಯ ಶೈಲೇಶ್, ನವೀನ್ ರಾಜ್,ವಿಠಲ, ಕೊಂಕಣ ರೈಲ್ವೇ ಅಧಿಕಾರಿಗಳಾದ ದಿಲೀಪ್ ಭಟ್,ಗಣೇಶ್ ಭಟ್, ನಿರ್ಮಲಾ, ಶಂಕರ್ ಭಟ್ ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Mulki-270516012

Comments

comments

Comments are closed.

Read previous post:
Kateel-26051604
ಕಟೀಲು: ಸಹಾಯ ಹಸ್ತ

ಕಟೀಲು: ಕಟೀಲು ಯಕ್ಷಗಾನ ಎರಡನೇ ಮೇಳದ ಕಲಾವಿದ ವಸಂತ ಪೆರ್ಲ ಅವರು ಆಕಸ್ಮಿಕವಾಗಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಸಹಾಯ ಹಸ್ತವಾಗಿ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು...

Close