ಗುತ್ತಕಾಡು ಶಾಲೆ ಪ್ರಾರಂಭೋತ್ಸವ

ಕಿನ್ನಿಗೋಳಿ; ಕಿನ್ನಿಗೋಳಿ ಸಮೀಪದ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ತಾಳಿಪಾಡಿ ಗುತ್ತು ಧನಪಾಲ್ ವಿ.ಶೆಟ್ಟಿ ಮತ್ತು ಭಾಸ್ಕರ ಎಂ. ಶೆಟ್ಟಿ ಅವರು ಕೊಡಮಾಡಿದ ಉಚಿತ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡಲಾಯಿತು. ಕಿನ್ನಿಗೋಳಿ ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯೆ ವಾಣಿ, ದಿನೇಶ್ ಶೆಟ್ಟಿ ತಾಳಿಪಾಡಿ ಗುತ್ತು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಸಲಹೆಗಾರ ಚಂದ್ರಶೇಖರ್, ಬಾಲಕೃಷ್ಣ ಡಿ. ಸಾಲ್ಯಾನ್, ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೇಸಾ, ಸಹಶಿಕ್ಷಕರಾದ ಅನುರಾಧ ಸಿ.ಎನ್.,ಯಶೋಧಾ, ಸುಷ್ಮಾ, ಸಂತೋಷ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-30051601

Comments

comments

Comments are closed.

Read previous post:
Kinnigoli-30051608
ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ – ಶೇ100 ಫಲಿತಾಂಶ

ಕಿನ್ನಿಗೋಳಿ : ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ಡಾ. ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸಿಬಿಎಸ್‌ಇ ಪಠ್ಯಕ್ರಮದ 10 ನೇ ತರಗತಿಯಲ್ಲಿ ಶೇ.100 ಫಲಿತಾಂಶ ಪಡೆದಿದೆ. 36...

Close