ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಬೇಕು

ಮೂಲ್ಕಿ : ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಪ್ರಜೆಗಳಾಗಿ ಕೀರ್ತಿ ತರಬೇಕೆಂದು ಶಿಕ್ಷಕ ನೋಣಯ್ಯ ರೇಂಜಾಳ ಹೇಳಿದರು.

ಮೂಲ್ಕಿ ಅಟೊರಿಕ್ಷಾ ಚಾಲಕ ಹಾಗೂ ಮಾಲಕರ ವತಿಯಿಂದ ನಡೆದ ಉಚಿತ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಮೂಲ್ಕಿ ರಿಕ್ಷಾ ಚಾಲಕ ಹಾಗೂ ಮಾಲಕ ಸಂಘದ ಗೌರವಾಧ್ಯಕ್ಷ ಭಾಸ್ಕರ ಹೆಗ್ಡೆ, ಸಂಘದ ಕಾರ‍್ಯದರ್ಶಿ ನಾಗರಾಜ ಕೊಲೆಕಾಡಿ, ಕೋಶಾಧಿಕಾರಿ ಕೃಷ್ಣಪ್ಪ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಅಶೊಕ್ ಚಿತ್ರಾಪು ಸ್ವಾಗತಿಸಿದರು, ವಿಲ್ಫಿ ಕೊಲ್ಲೂರು ಧನ್ಯವಾದ ಅರ್ಪಿಸಿದರು.

ಈ ಸಂದರ್ಭ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮನಿಷಾ, ಧನರಾಜ, ಲೆವಿನಾರವರನ್ನು ಸನ್ಮಾನಿಸಲಾಯಿತು.

Mulki-30051605

Comments

comments

Comments are closed.

Read previous post:
Mulki-30051603
ಸರ್ಫೀಂಗ್ ಸ್ಪರ್ಧಾ ಫಲಿತಾಂಶ

ಸಸಿಹಿತ್ಲು: ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಆಲ್ ಕಾರ್ಗೋ ಸಂಸ್ಥೆ ಮಂತ್ರ ಸರ್ಫಿಂಗ್ ಕ್ಲಬ್ ಮೂಲ್ಕಿ, ಕೆನರಾ ಸರ್ಫಿಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಪ್ರಮೋಶನಲ್ ಕೌನ್ಸಿಲ್, ಮತ್ತು ಸರ್ಫಿಂಗ್...

Close