ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಥಾನ

ಮೂಲ್ಕಿ: ವಿಜಯ ಬ್ಯಾಂಕ್ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಥಾನದ ಮೂಲಕ ಕೃಷಿಕರಿಗೆ ಕೃಷಿ,ಪಶು ಸಂಗೋಪನೆ ಹಾಗೂ ಸ್ವ ಉದ್ಯೋಗಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ನಾಲ್ಕು ಕೋಟಿ ದೇಣಿಗೆಯನ್ನು ನೀಡಿದ್ದು ಬ್ಯಾಂಕ್ ಈಗಾಗಲೇ 2 ಲಕ್ಷ ಕೋಟಿ ವ್ಯವಹಾರವನ್ನು ಹೊಂದಿದ್ದು ಪ್ರತಿಷ್ಥಾನದ ಮೂಲಕ ಮಾಹಿತಿಯನ್ನು ನೀಡುವ ಕಾರ್ಯ ಮಾಡುತ್ತಿದೆಯೆಂದು ವಿಜಯ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕ ನಾಗೇಶ್ವರ್ ರಾವ್ ವೈ ಹೇಳಿದರು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನ್ನ ಪೂರ್ಣೇಶ್ವರಿ ಸಭಾಗೃಹದಲ್ಲಿ ಜರಗಿದ ವಿಜಯ ಬ್ಯಾಂಕ್ ನಿಂದ ಪ್ರವರ್ತಿಸಲ್ಪಟ್ಟಿರುವ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಥಾನದ ಬೆಳ್ಳಿ ಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಷ್ಥಾನದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸಮಿತಿ ರಚಿಸಿ ಕೃಷಿಯಲ್ಲಿ ನೂತನ ಅವಿಷ್ಕಾರದ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆಯೆಂದು ಹೇಳಿದರು.ಅಧ್ಯಕ್ಷತೆಯನ್ನು ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಥಾನದ ಉಪಾಧ್ಯಕ್ಷ ಪ್ರೇಮ್ ನಾಥ್ ಆಳ್ವ ವಹಿಸಿದ್ದು ಕಾರ್ಯಕ್ರಮದಲ್ಲಿ ರೇಡಿಯೋ ತರಗತಿ ಮೂಲಕ ಎಸ್ ಎಸ್ ಎಲ್ ಸಿ ಯಲ್ಲಿ ಗಣಿತ ಮತ್ತು ಇಂಗ್ಲೀಷ್ ನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು ಹಾಗೂ 10 ಮಂದಿ ಫಲಾನುಭವಿಗಳಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಯಾಂಕರ‍್ಸ್ ಗ್ರಾಮೀಣ ಅಭಿವೃದ್ದಿ ಸಂಸ್ತೆಯ ಜಂಟಿ ನಿರ್ದೇಶಕಿ ಶ್ರೀಮತಿ ಕಾಮಾಕ್ಷಿ ಪೈ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ವಿಜಯ ಬ್ಯಾಂಕಿನ ಮಹಾ ಪ್ರಬಂಧಕ ಸತೀಶ್ ಬಲ್ಲಾಳ್, ಭಾರತೀಯ ವಿಕಾಸ ಟ್ರಸ್ತ್ ನ ಆಡಳಿತ ಟ್ರಸ್ತಿ ಕೆ ಎಂ ಉಡುಪ,ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಆಡಳಿತ ನಿರ್ದೇಶಕ ವಿ ಕೆ ಶೆಟ್ಟಿ,ಕೃಷಿ ವಿಜ್ಞಾನ ಕೇಂದ್ರ ಮಂಗಳೂರಿನ ವಿಷಯ ತಜ್ಞ ಡಾ ಹರೀಶ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೂಲ್ಕಿಯ ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ, ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಥಾನದ ಕಾರ್ಯದರ್ಶಿ ಬಿ ರಾಜೇಂದ್ರ ರೈ, ಕಾರ್ಯ ನಿರ್ವಾಹಕ ಅಧಿಕಾರಿ ಉದಯ ಹೆಗ್ಡೆ ಉಪಸ್ಥಿತರಿದ್ದರು.
ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಥಾನದ ಉಪ ಮಹಾ ಪ್ರಬಂಧಕ ಸುರೇಂದ್ರ ಹೆಗ್ಡೆ ಸ್ವಾಗತಿಸಿದರು,ಸಹಾಯಕ ಮಹಾ ಪ್ರಬಂಧಕ ನಾಗರಾಜ್ ಎಂ ಜೆ ವಂದಿಸಿದರು,ಬಸಪಾ ಮುಧೋಳ ನಿರೂಪಿಸಿದರು.

Mulki-30051601

Comments

comments

Comments are closed.

Read previous post:
Sasihithlu-29051611
ರಾಷ್ಟ ಮಟ್ಟದ ಸರ್ಪಿಂಗ್ ಕ್ರೀಡಾಕೂಟ

ಸುರತ್ಕಲ್ ಸಮೀಪದ ಸಸಿಹಿತ್ಲು ಮುಂಡ ಬೀಚ್ ನಲ್ಲಿ ನಡೆಯುತಿರುವ ರಾಷ್ಟ ಮಟ್ಟದ ಸರ್ಪಿಂಗ್ ಕ್ರೀಡಾಕೂಟ.

Close