ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡಬೇಕು

 ಕಿನ್ನಿಗೋಳಿ: ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡಿದಾಗ ಭವಿಷ್ಯದಲ್ಲಿ ಸತ್ಪ್ರಜೆಯಾಗುತ್ತಾರೆ. ಆಂಗ್ಲಮಾಧ್ಯಮ ಶಿಕ್ಷಣದೊಂದಿಗೆ ಕನ್ನಡದ ಬಗ್ಗೆಯೂ ಅಭಿಮಾನ ಅಭಿರುಚಿ ಮಕ್ಕಳಲ್ಲಿ ಮೂಡಿಸಬೇಕು ಎಂದು ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ನೂತನವಾಗಿ ಆರಂಭಗೊಂಡ ಕಟೀಲು ಶ್ರೀ ದುರ್ಗಾಪರಮೇಶ್ವರೀ ಆಂಗ್ಲಮಾಧ್ಯಮ ಶಾಲೆಯ ಉಧ್ವಾಟನಾ ಸಮಾರಂಭದಲ್ಲಿ ಮಾತನಾಡಿದರು.
ಡೆಕ್ಕನ್ ಕ್ರೋನಿಕಲ್ ಸಂಸ್ಥೆಯ ಮಾಲಕರಾದ ವಿನಾಯಕ ರೆಡ್ಡಿ ಮತ್ತು ಶಾಂತಿಪ್ರಿಯದರ್ಶಿನಿ ರೆಡ್ಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮಂಗಳೂರು ಕೆ.ಪಿ.ಟಿ ರಿಜಿಸ್ಟಾರ್ ರಾಜೇಂದ್ರ ಪ್ರಸಾದ್ ಹಾಗೂ ಶ್ವೇತಾ ದಯಾನಂದ್ ಮಾಡರವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಅರ್ಚಕರಾದ ಅನಂತ ಪಧ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಟೀಲು ಗ್ರಾ.ಪಂ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಲ್ಲಂಜೆ ಕ್ಲಸ್ಟರ್ ಸಿ.ಆರ್.ಪಿ ಜಗದೀಶ್ ನಾವಡ, ಜಿ.ಪಂ ಮಾಜಿ ಸದಸ್ಯ ಈಶ್ವರ್ ಕಟೀಲ್, ದೇವಿ ಪ್ರಸಾದ್ ಶೆಟ್ಟಿ ಕೊಡೆತ್ತೂರು, ಲಿಂಗಪ್ಪ ಶೇರಿಗಾರ್, ತಿಮ್ಮಪ್ಪ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಆಂಗ್ಲಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ದೇವಿಪ್ರಸಾದ್ ಬೆಳ್ಳಿಬೆಟ್ಟು ಸ್ವಾಗತಿಸಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ವೈ ಗೋಪಾಲ ಶೆಟ್ಟಿ ವಂದಿಸಿದರು. ನಿವೃತ್ತ ಶಿಕ್ಷಕ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kateel-01061601

Comments

comments

Comments are closed.

Read previous post:
Kinnigoli-30051601
ಗುತ್ತಕಾಡು ಶಾಲೆ ಪ್ರಾರಂಭೋತ್ಸವ

ಕಿನ್ನಿಗೋಳಿ; ಕಿನ್ನಿಗೋಳಿ ಸಮೀಪದ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ತಾಳಿಪಾಡಿ ಗುತ್ತು ಧನಪಾಲ್ ವಿ.ಶೆಟ್ಟಿ ಮತ್ತು...

Close