ಅಭಿವೃದ್ದಿಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ

ಕಿನ್ನಿಗೋಳಿ: ಕಿನ್ನಿಗೋಳಿ ಮತ್ತು ಹಳೆಯಂಗಡಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಗ್ರಾಮಗಳಾಗಿದ್ದು ಇಲಾಖಾ ಹಾಗೂ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸದುಪಯೋಗಪಡಿಸಿದಾಗ ಗ್ರಾಮದ ಅಭಿವೃದ್ಧಿ ತ್ವರಿತವಾಗಿ ನಡೆಯುತ್ತದೆ. ಗ್ರಾಮದ ಅಭಿವೃದಿಗಾಗಿ ಜನರೂ ಕೈಗೂಡಬೇಕು. ಎಂದು ಯುವಜನ ಸೇವೆ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಅಭಯಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 57 ಲಕ್ಷ 25 ಸಾವಿರ ರೂಪಾಯಿ ವೆಚ್ಚದ ವಿವಿಧ ಕಾಮಾಗಾರಿ ಹಾಗೂ 49 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಿನ್ನಿಗೋಳಿ ಮಾರುಕಟ್ಟೆ ಬಳಿಯ ಮೊದಲನೇ ಹಂತದ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು
ಕಿನ್ನಿಗೋಳಿ ಪೇಟೆಯ ಸುಮಾರು 1 ಕಿ.ಮೀ. ರಸ್ತೆಯನ್ನು ಅಗಲೀಕರಣಗೊಳಿಸಿ ದ್ವಿಪಥ ರಸ್ತೆ ನಿರ್ಮಾಣ ಮಾಡಿ ರಸ್ತೆ ವಿಭಾಜಕ ನಿರ್ಮಿಸಿ ಮದ್ಯೆ ದಾರಿ ದೀಪಗಳನ್ನು ಅಳವಡಿಸಲು ಲೋಕೋಪಯೋಗ ಇಲಾಖೆಯ ಸಹಕಾರದೊಂದಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 95 % ಮುಗಿದಿದ್ದು ಕಿನ್ನಿಗೋಳಿ ಪರಿಸರದಲ್ಲಿ ಈಗ ನೀರು ಸರಭರಾಜು ವ್ಯವಸ್ಥೆ ಉತ್ತಮಗೊಂಡಿದೆ. ನಾದುರಸ್ತಿಯಲ್ಲಿರುವ ವೆಂಟೆಡ್ ಡ್ಯಾಮ್ ದುರಸ್ತಿಗೆ ಅನುದಾನ ಕಲ್ಪಿಸಿ ಸರಿಪಡಿಸಲಾಗುವುದು.
ಈ ಸಂದರ್ಭ ಕಿನ್ನಿಗೋಳಿ ಗ್ರಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕ ಬೊಗ್ಗು, ಕಿನ್ನಿಗೋಳಿ ಮಾರುಕಟ್ಟೆ ಬಳಿಯ ವಾಣೀಜ್ಯ ಸಂಕೀರ್ಣ ಕಟ್ಟಡದ ಗುತ್ತಿಗೆದಾರ ಗಿರೀಶ್ ಹಾಗೂ ಕಿನ್ನಿಗೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿ ಸೋಜಾ ಅವರನ್ನು ಸಚಿವರು ಸನ್ಮಾನಿಸಿ ಗೌರವಿಸಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೊಮಿನಾ ಸಿಕ್ವೇರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಾಮಸ್‌ಕಟ್ಟೆ ಚರ್ಚ್ ಧರ್ಮಗುರು ರೆ.ಫಾ. ವಿಕ್ಟರ್ ಡಿಮೆಲ್ಲೋ, ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾಂದ, ಕಿನ್ನಿಗೋಳಿ ಮಸೀದಿ ಧರ್ಮಗುರು ಅಬ್ದುಲ್ ಲತೀಫ್ ಸಖಾಫಿ, ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯ ವಿನೋದ್ ಬೊಳ್ಳೂರು, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ತಾ.ಪಂ. ಸದಸ್ಯರಾದ ದಿವಾಕರ ಕರ್ಕೇರ, ಶರತ್ ಕುಬೆವೂರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ.ಗೋಪಾಲ ಕೃಷ್ಣ ಭಟ್, ಸಹಾಯಕ ಅಭಿಯಂತರ ಸೃಜನ್ ಚಂದ್ರ, ಕಿನ್ನಿಗೋಳಿ ಗ್ರಾ.ಪಂ. ಉಪಾಧ್ಯಕ್ಷೆ ಸುಜತಾ ಪೂಜಾರಿ, ಕಿರಿಯ ಅಭಿಯಂತರ ವಿಶ್ವನಾಥ ಉಪಸ್ಥಿತರಿದ್ದರು.
ಕಿನ್ನಿಗೋಳಿ ಗ್ರಾ.ಪಂ. ಸದಸ್ಯ ಸಂತಾನ್ ಡಿ ಸೋಜ ಸ್ವಾಗತಿಸಿ , ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01061602 Kinnigoli-01061603 Kinnigoli-01061604

Comments

comments

Comments are closed.

Read previous post:
Kateel-01061601
ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡಬೇಕು

 ಕಿನ್ನಿಗೋಳಿ: ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡಿದಾಗ ಭವಿಷ್ಯದಲ್ಲಿ ಸತ್ಪ್ರಜೆಯಾಗುತ್ತಾರೆ. ಆಂಗ್ಲಮಾಧ್ಯಮ ಶಿಕ್ಷಣದೊಂದಿಗೆ ಕನ್ನಡದ ಬಗ್ಗೆಯೂ ಅಭಿಮಾನ ಅಭಿರುಚಿ ಮಕ್ಕಳಲ್ಲಿ ಮೂಡಿಸಬೇಕು ಎಂದು ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ...

Close