ಕಟೀಲು ಅನುವಂಶಿಕ ಮೊಕ್ತೇಸರ ಡಾ. ಕೆ. ರವೀಂದ್ರನಾಥ ಪೂಂಜಾ

ಕಟೀಲು : ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರರಾಗಿ ಕೊಡೆತ್ತೂರು ಗುತ್ತಿನ ಡಾ.ಕೆ.ರವೀಂದ್ರನಾಥ ಪೂಂಜಾ ನ್ಯಾಯಾಲಯದ ಆದೇಶದಂತೆ ನಿಯುಕ್ತಿಗೊಂಡಿದ್ದು ಬುಧವಾರ ದೇವಳದ ಆಡಳಿತಾಧಿಕಾರಿ ಗೋಕುಲದಾಸ ನಾಯಕ್ ಅವರು ಅಧಿಕಾರ ಹಸ್ತಾಂತರಿಸಿದರು.
ಕಟೀಲು ದೇವಳ ಹಾಗೂ ಕೊಡೆತ್ತೂರು ಗುತ್ತಿನವರಿಗೂ ಹಿಂದಿನಿಂದಲೂ ಅಧಿಕಾರದ ಗೌರವವಿದ್ದು, 1888 ರಿಂದ 1998ರವರೆಗೂ ಕೊಡೆತ್ತೂರು ಗುತ್ತಿನ ಮನೆತನಕ್ಕೆ ಆಡಳಿತ ಮೊಕ್ತೇಸರಿಕೆಯ ಗೌರವವಿತ್ತು. ಕಾರಣಾಂತರದಿಂದ ಕಳೆದ 16 ವರ್ಷದ ಹಿಂದೆ ಈ ಅಧಿಕಾರದ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿ ನಿರಂತರವಾಗಿ ನ್ಯಾಯಾಲಯದಲ್ಲಿ ವಾದ ಪ್ರತಿವಾದವನ್ನು ಆಲಿಸಿದ ಉಚ್ಚ ನ್ಯಾಯಾಲಯ ಮೇ 3ರಂದು ತೀರ್ಪು ನೀಡಿದ್ದರಿಂದ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ನೀಡಿದ ಆದೇಶದಂತೆ ಬುಧವಾರ ಕೊಡೆತ್ತೂರು ಗುತ್ತಿನ ಹಿರಿಯರಾದ ಡಾ.ಕೆ.ರವೀಂದ್ರನಾಥ ಪೂಂಜಾರವರು ಅಧಿಕಾರ ಪಡೆದಿದ್ದಾರೆ

ನೂತನ ಅನುವಂಶಿಕ ಮೊಕ್ತೇಸರ ಡಾ. ಕೆ. ರವೀಂದ್ರನಾಥ ಪೂಂಜಾ ದೇವಳದ ಅಭಿವೃದ್ದಿಗಳ ಬಗ್ಗೆ ಮಾತನಾಡಿ ವಾಹನ ನಿಲುಗಡೆ, ಘನ ತ್ಯಾಜ್ಯ ಸಮಸ್ಯೆ, ಯಾತ್ರಿಕರ ಕೇಂದ್ರ, ಕಲ್ಯಾಣ ಮಂಟಪ, ರಸ್ತೆ ಅಗಲೀಕರಣ ಹಾಗೂ ಏಲಂ ಆಗದ ಅಂಗಡಿಗಳ ಬಗ್ಗೆ ಮುಂದಿನ ದಿನಗಳಲ್ಲಿ ಮುರ್ತುವರ್ಜಿ ವಹಿಸಲಾಗುವುದು ಎಂದರು.

ಕಟೀಲು ದೇವಳ ಆಡಳಿತಾಧಿಕಾರಿಯಾಗಿದ್ದ ಗೋಕುಲದಾಸ್ ನಾಯಕ್ ಮಾತನಾಡಿ ಕಳೆದ 16 ವರ್ಷದಿಂದ ವಿವಿಧ ಅಧಿಕಾರಿಗಳು ತಮ್ಮ ಆಡಳಿತದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯವನ್ನು ನಡೆಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಸರ್ಕಾರವು ಗೌರವಿಸಿದೆ. ಮುಂದೆ ದೇವಳದಲ್ಲಿ ಕಾರ್ಯನಿರ್ವಾಹಣ ಅಧಿಕಾರಿಯ ನೇಮಕವನ್ನು ಸರ್ಕಾರವೇ ನಿರ್ಧರಿಸಲಿದೆ ಎಂದು ಹೇಳಿದರು.
ಕಟೀಲು ದೇವಳದ ಪ್ರಧಾನ ಅರ್ಚಕ ಹಾಗೂ ಮೊಕ್ತೇಸರ ವಾಸುದೇವ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ , ಮಾಜಿ ಸಚಿವ ಅಮರನಾಥ ಶೆಟ್ಟಿ , ಅಂತರಾಷ್ಟ್ರೀಯ ಖ್ಯಾತಿಯ ಕ್ರೀಡಾ ಪಟು, ಚಲನಚಿತ್ರ ನಟ ರೋಹಿತ್‌ಕುಮಾರ್‌ಕಟೀಲು, ಸುಧೀರ್ ಶೆಟ್ಟಿ ಅಜಾರು, ಕಿಶೋರ್ ಶೆಟ್ಟಿ , ಹಿರ್ಗಾನ ದೇವಳದ ಆಡಳಿತ ಮೊಕ್ತೇಸರ ಭವಾನಿ ಶಂಕರ್, ಪ್ರವೀಣ್ ಶೆಟ್ಟಿ , ಕಿರಣ್ ಶೆಟ್ಟಿ , ದಯಾಕರ ಭಂಡಾರಿ, ಶ್ರೀಕಾಂತ್ ಹೆಗ್ಡೆ , ತೀರ್ಥಲ್ ರೈ, ಲತಾಮಣಿ ರೈ, ಮಲ್ಲಿಕಾ ರೈ, ಪ್ರಸಾದ್ ಶೆಟ್ಟಿ, ಸಂಜೀವ ಮಡಿವಾಳ, ಅನಂತರಾಜ ಭಟ್, ಡೊಡ್ಡಯ್ಯ ಕಟೀಲು ಮತ್ತಿತರರು ಉಪಸ್ಥಿತರಿದ್ದರು.

Kateel-01061602 Kateel-01061603 Kateel-01061604 Kateel-01061605

Comments

comments

Comments are closed.

Read previous post:
Kinnigoli-01061603
ಅಭಿವೃದ್ದಿಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ

ಕಿನ್ನಿಗೋಳಿ: ಕಿನ್ನಿಗೋಳಿ ಮತ್ತು ಹಳೆಯಂಗಡಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಗ್ರಾಮಗಳಾಗಿದ್ದು ಇಲಾಖಾ ಹಾಗೂ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸದುಪಯೋಗಪಡಿಸಿದಾಗ ಗ್ರಾಮದ ಅಭಿವೃದ್ಧಿ...

Close