ಜೂ. 6 ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ಕ್ಯಾಥೋಲಿಕ್ ಬೋರ್ಡ್ ಶಿಕ್ಷಣ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟಿರುವ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಶಾಲಾ ಕಟ್ಟಡದ ಮೊದಲ ಅಂತಸ್ತು, ಸಿ. ಬಿ. ಎಸ್. ಇ ೮ ನೇ ತರಗತಿ ಮತ್ತು ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಜೂ. 6 ಸೋಮವಾರ ದಂದು ನಡೆಯಲಿದೆ ಎಂದು ಶಾಲಾ ಸಂಚಾಲಕ ಫಾ. ವಿನ್ಸೆಂಟ್ ಪ್ರಾನ್ಸಿಸ್ ಮೊಂತೆರೂ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಿ ಆಶೀರ್ವಚನ ನೀಡಲಿರುವರು. ಯುವಜನ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕ್ಯಾಥೋಲಿಕ್ ಬೋರ್ಡ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಫಾ. ಜೆರಾಲ್ಡ್ ಡಿಸೋಜ, ಫಾ. ಆಲ್ಫ್ರೆಡ್ ಜೆ. ಪಿಂಟೊ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಳೀಯ ಜನಪ್ರತಿನಿಧಿಗಳು, ಧರ್ಮಗುರುಗಳು ಭಾಗವಹಿಸಲಿದ್ದಾರೆ ಎಂದು ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಶಾಲಾ ಪ್ರಿನ್ಸಿಪಾಲ್ ಫಾ. ಸುನಿಲ್ ಡಿಸೋಜ ಹೇಳಿದರು
ಸುದ್ದಿಗೋಷ್ಠಿಯಲ್ಲಿ ಕಿನ್ನಿಗೋಳಿ ಚರ್ಚ್ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಶಾಲಾ ಸಮಿತಿಯ ಲೈನಲ್ ಪಿಂಟೋ, ರಫಾಯಲ್ ರೆಬೆಲ್ಲೊ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-03061601
ಲೆತಿಶಾ ರೊಡ್ರಿಗಸ್

ಕಿನ್ನಿಗೋಳಿ: ಐಕಳ ನೆಲ್ಲಿಗುಡ್ಡೆ ದಿ. ಜೊಸೆಫ್ ರೊಡ್ರಿಗಸ್ ಅವರ ಧರ್ಮಪತ್ನಿ ಲೆತಿಶಾ ರೊಡ್ರಿಗಸ್ (88 ವರ್ಷ) ಅಲ್ಪ ಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ ನಾಲ್ಕು ಗಂಡು ಮತ್ತು...

Close