ಶಿಸ್ತು ಸಂಸ್ಕಾರ ಮಕ್ಕಳಲ್ಲಿ ಮೂಡಿಸಬೇಕು

ಕಿನ್ನಿಗೋಳಿ: ಮೌಲ್ಯಾಧಾರಿತ ಶಿಕ್ಷಣ, ಶಿಸ್ತು ಸಂಸ್ಕಾರ ಮಕ್ಕಳಲ್ಲಿ ಮೂಡಿಸುವ ಸೇವಾ ಮನೋಭಾವನೆಯ ಶಿಕ್ಷಕ ಹುದ್ದೆಯು ಅತ್ಯಂತ ಶ್ರೇಷ್ಠ ಎಂದು ದರ್ಬೆ ಪುತ್ತೂರು ಲಿಟ್ಲ್ ಫ್ಲವರ್ ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ಪಿ. ಜೊಸೆಫ್ ಹೇಳಿದರು.
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅರುಣಾ ಬಿ.ಎಸ್ ಅವರ ನಿವೃತ್ತಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗಿನಿ ಡಿವಿನಾ ಬಿ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೇರಿವೇಲ್ ಕಾನ್ವೆಂಟ್ ಸುಪೀರಿಯರ್ ಭಗಿನಿ ವಿತಾಲಿಸ್ ಲೋಬೊ, ಸಂಚಾಲಕಿ ಭಗಿನಿ ಸಿಬಿಲ್ ಬಿ.ಎಸ್. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಸಿಂತಿಯಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಅಬ್ದುಲ್ ರೆಹಮಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-03061602

Comments

comments

Comments are closed.