ಕಡಿಮೆ ಶ್ರಮದಿಂದ ಹೆಚ್ಚಿನ ಲಾಭ ಪಡೆಯಬಹುದು

ಕಿನ್ನಿಗೋಳಿ: ನಗರದಲ್ಲಿನ ಆಕರ್ಷಿಕ ಉದ್ಯೋಗ, ಕೃಷಿ ಕಾರ್ಮಿಕರ ಕೊರತೆ, ನೀರಿನ ಆಭಾವದಿಂದ ರೈತರು ಕಡಿಮೆ ಲಾಭದ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ವೈಜ್ಞಾನಿಕವಾಗಿ ಯಾಂತ್ರಿಕೃತ ಕೃಷಿಯಿಂದ ಕಡಿಮೆ ಶ್ರಮದಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ಹಿರಿಯ ಸಹಾಯಕ ಕೃಷಿ ನಿರ್ದೇಶಕ ಡಾ. ಮುನಿಗೌಡ ಹೇಳಿದರು.
ಭಾನುವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರೈತರರೊಂದಿಗೆ ಸಂವಾದ, ತಾಂತ್ರಿಕ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಯುವ ಕೃಷಿಗೆ ಹೆಚ್ಚಿನ ಮಹತ್ವನೀಡಿ, ಮಳೆ ನೀರು ಇಂಗಿಸುವ ಯೋಜನೆಗೆ ಪ್ರತಿಯೊಬ್ಬ ಕೃಷಿಕ ಮನ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಮಣ್ಣು ಮಾದರಿ ತಪಾಸಣೆ, ಹಾಗೂ ಮೂಲ್ಕಿ ಪರಿಸರದಲ್ಲಿ ಯಂತ್ರೋಪಕರಣಗಳನ್ನು ಕಡಿಮೆ ದರದ ಬಾಡಿಗೆ ಯಲ್ಲಿ ರೈತರಿಗೆ ಒದಗಿಸುವ ಕೇಂದ್ರ ಆರಂಭಿಸುವ ಬಗ್ಗೆ ಯೋಚನೆ ಯೋಜನೆ ಇದೆ ಎಂದು ಹೇಳಿದರು.
ಕೆ. ವಿ.ಕೆ. ವಿಜ್ಞಾನ ಕೇಂದ್ರದ ಡಾ| ಹರೀಶ್ ಶೆಣೈ ಮಾತನಾಡಿ ಕೃಷಿಕರಿಗೆ ಮಾಹಿತಿ ಕೊರತೆಯಿದ್ದು ಕಾಲ ಕಾಲಕ್ಕೆ ತಜ್ಞರಿಂದ ಮಾಹಿತಿ ನೀಡುವ ಅಗತ್ಯವಿದೆ. ಎಂದು ಹೇಳಿದರು.
ತಾ. ಪಂ. ಸದಸ್ಯೆ ಶುಭಲತಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್. ನಾಗರಾಜ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಉಪಾಧ್ಯಕ್ಷೆ ಮಮತಾ, ಪಿಡಿಓ ರಮೇಶ್ ರಾಠೋಡ್, ಸುರತ್ಕಲ್ ಕೃಷಿ ಅಧಿಕಾರಿ ಬಶೀರ್, ರವೀಂದ್ರ ಬಳ್ಳಾಲ್, ರಕ್ಷಿತಾ, ಶೈಲಾಜಾ, ಜಯಶ್ರೀ, ಎಲ್ಲಣ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು. ಮೂಲ್ಕಿ ಹೋಬಳಿ ಕೃಷಿ ಅಧಿಕಾರಿ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Kinnigoli-70051604

Comments

comments

Comments are closed.

Read previous post:
Kinnigoli-70051603
ಉಚಿತ ಪುಸ್ತಕ , ವಿದ್ಯಾರ್ಥಿ ವೇತನ ವಿತರಣೆ

ಕಿನ್ನಿಗೋಳಿ: ತಾಳಿಪಾಡಿ-ಪುನರೂರು ಶ್ರೀವೀರಭದ್ರ ಯುವಕ ಮಂಡಲ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ 24 ನೇ ವರ್ಷದ ಉಚಿತ ಪುಸ್ತಕ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಭನುವಾರ...

Close