ಕಿನ್ನಿಗೋಳಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶವಾದ ಕಿನ್ನಿಗೋಳಿ ಪರಿಸರದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಇಲ್ಲಿನ ಶಿಕ್ಷಣ ಸಂಸ್ಥೆಗಳು ಕೋಮು ಸಾಮರಸ್ಯ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ದ.ಕ. ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಸಿ. ಬಿ. ಎಸ್. ಇ ಪಠ್ಯಧಾರಿತ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಶಾಲಾ ಕಟ್ಟಡದ ಮೊದಲ ಅಂತಸ್ತು, ಸಿ. ಬಿ. ಎಸ್. ಇ 8 ನೇ ತರಗತಿ ಮತ್ತು ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಿ ಆಶೀರ್ವಚನ ನೀಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಸಂಸ್ಕಾರಭರಿತ ಶಿಕ್ಷಣ ನೀಡುವುದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೇಶವನ್ನು ಅಭಿವೃದ್ಧಿ ಪತದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು.
75 ವರ್ಷದ ಜೀವನ, 50 ವರ್ಷದ ಗುರು ದೀಕ್ಷೆ, ಹಾಗೂ 20 ವರ್ಷದ ಬಿಷಪ್ ಅಧಿಕಾರದ ಸವಿನೆನಪಿಗಾಗಿ ಬಿಷಪ್ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ಯಾಥೋಲಿಕ್ ಬೋರ್ಡ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಫಾ. ಜೆರಾಲ್ಡ್ ಡಿಸೋಜ, ಪುತ್ತೂರು ಚರ್ಚ್ ಧರ್ಮಗುರು ಫಾ. ಆಲ್ಫ್ರೆಡ್ ಜೆ. ಪಿಂಟೊ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ. ಪಂ. ಸದಸ್ಯೆ ಶುಭಲತಾ ಶೆಟ್ಟಿ , ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಗುಜರನ್, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ , ಕಿನ್ನಿಗೋಳಿ ಚರ್ಚ್ ಉಪಾಧ್ಯಕ್ಷ ವಿನ್ಸಂಟ್ ಡಿಸೋಜ ಉಪಸ್ಥಿತರಿದ್ದರು.
ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಶಾಲಾ ಸಂಚಾಲಕ ಫಾ. ವಿನ್ಸಂಟ್ ಮೊಂತೆರೊ ಸ್ವಾಗತಿಸಿದರು. ಪ್ರಿನ್ಸಿಪಾಲ್ ಫಾ. ಸುನಿಲ್ ಡಿಸೋಜ ವರದಿ ವಾಚಿಸಿದರು. ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ಅಶೋಕ ರಾಯನ್ ಕ್ರಾಸ್ತ ವಂದಿಸಿದರು. ಉಪನ್ಯಾಸಕಿ ಗ್ರೆಟ್ಟಾ ಮೊರಾಸ್ ಹಾಗೂ ಶಾಲಾ ಶಿಕ್ಷಕಿ ಸಮತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-70051605 Kinnigoli-70051606 Kinnigoli-70051607 Kinnigoli-70051608 Kinnigoli-70051609 Kinnigoli-700516010 Kinnigoli-700516011 Kinnigoli-700516012 Kinnigoli-700516013 Kinnigoli-700516014 Kinnigoli-700516015 Kinnigoli-700516016 Kinnigoli-700516017

 

Comments

comments

Comments are closed.

Read previous post:
Kinnigoli-70051604
ಕಡಿಮೆ ಶ್ರಮದಿಂದ ಹೆಚ್ಚಿನ ಲಾಭ ಪಡೆಯಬಹುದು

ಕಿನ್ನಿಗೋಳಿ: ನಗರದಲ್ಲಿನ ಆಕರ್ಷಿಕ ಉದ್ಯೋಗ, ಕೃಷಿ ಕಾರ್ಮಿಕರ ಕೊರತೆ, ನೀರಿನ ಆಭಾವದಿಂದ ರೈತರು ಕಡಿಮೆ ಲಾಭದ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ವೈಜ್ಞಾನಿಕವಾಗಿ ಯಾಂತ್ರಿಕೃತ ಕೃಷಿಯಿಂದ ಕಡಿಮೆ ಶ್ರಮದಿಂದ ಹೆಚ್ಚಿನ...

Close