ಮೂಲ್ಕಿಯಲ್ಲಿ ಏರ್ ಟೆಲ್ 4 ಜಿ ಸೇವೆ

ಮೂಲ್ಕಿ: ಏರ್ ಟೆಲ್ ಸಂಸ್ಥೆಯು ಮೊಬೈಲ್ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದು ಇದೀಗ ಮೂಲ್ಕಿಯಲ್ಲಿ ೪ ಜಿ ಸೇವೆಯನ್ನು ಆರಂಭಿಸುವ ಮೂಲಕ ಮೂಲ್ಕಿಯ ಜನತೆಗೆ ಉತ್ತಮ ಅವಕಾಶವನ್ನು ನೀಡಿದೆ.೪ ಜಿ ಯ ಸದುಪಯೋಗವನ್ನು ಪಡೆಯುವಂತೆ ಮೂಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ ಹೇಳಿದರು.
ಏರ್ ಟೆಲ್ ಸಂಸ್ಥೆಯು ಮೂಲ್ಕಿಯಲ್ಲಿ ಆರಂಭಿಸಿರುವ 4 ಜಿ ಸೇವೆಗೆ ಮೂಲ್ಕಿಯ ಪುನರೂರು ಟೂರಿಸ್ತ್ ಹೋಂ ನ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.ಏರ್ ಟೆಲ್ ಸಂಸ್ತೆಯ ವಲಯ ವ್ಯವಹಾರ ಪ್ರಬಂಧಕ ಅಜಯ್ ಕುಮಾರ್ 4 ಜಿ ಸೇವೆಯ ಬಗ್ಗೆ ಮಾಹಿತಿ ನೀಡಿದರು.ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ವಾಣಿ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಕಿನ್ನಿಗೋಳಿ ಪಂಚಾಯತ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು,ಪಡಪಣಂಬೂರು ಪಂಚಾಯತ್ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್,ಎರ್ ಟೆಲ್ ಸಂಸ್ಥೆಯ ವಲಯ ಮಾರಾಟ ಪ್ರಬಂಧಕ ದೀಪಕ್ ತಿಮ್ಮಯ್ಯ,ಸಂಸ್ತೆಯ ಬೆಂಗಳೂರಿನ ಡಾಟಾ ಮುಖ್ಯಸ್ತ ರಾಹುಲ್ ಝಾ ಹಾಗೂ ಏರ್ ಟೆಲ್ ಸಂಸ್ತೆಯ ಮೂಲ್ಕಿಯ ವಿತರಕ ಗಣೇಶ್ ಭಟ್ ಉಪಸ್ತಿತರಿದ್ದರು.
ಪ್ರಜ್ವಲ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

Kinnigoli-700516018

Comments

comments

Comments are closed.

Read previous post:
Kinnigoli-700516014
ಕಿನ್ನಿಗೋಳಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶವಾದ ಕಿನ್ನಿಗೋಳಿ ಪರಿಸರದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಇಲ್ಲಿನ ಶಿಕ್ಷಣ ಸಂಸ್ಥೆಗಳು ಕೋಮು ಸಾಮರಸ್ಯ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ದ.ಕ....

Close