ಟೈಲರ‍್ಸ್ ಎಸೋಸಿಯೇಶನ್ ಕಾರ್ಯ ಸಾಧನೆ

ಮೂಲ್ಕಿ: ಅಸಂಘಟಿತ ಕಾರ್ಮಿಕರಾಗಿ ಸಂಘಟನೆಯ ಮೂಲಕ ಏಕತೆಯನ್ನು ಪಡೆದುಕೊಂಡು ಮಕ್ಕಳ ಶೈಕ್ಷಣಿಕ ಸಾಧನೆಗೆ ಸಹಕರಿಸುವ ಟೈಲರ‍್ಸ್ ಎಸೋಸಿಯೇಶನ್ ಕಾರ್ಯ ಸಾಧನೆ ಸ್ತುತ್ಯರ್ಹ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್ ಹೇಳಿದರು.
ಮೂಲ್ಕಿ ನಾರಾಯಣ ಗುರು ಸಭಾಗ್ರಹದಲ್ಲಿ ಬಾನುವಾರ ಜರುಗಿದ ಕರ್ನಾಟಕ ರಾಜ್ಯ ಟೈಲರ‍್ಸ್ ಎಸೋಸಿಯೇಶನ್ ಮೂಲ್ಕಿ ಮತ್ತು ಹಳೆಯಂಗಡಿ ಘಟಕದ ಸಂಯೋಜನೆಯಲ್ಲಿ ಟೈಲರ‍್ಸ್ ಕಾರ್ಮಿಕರ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ಮತ್ತು ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಶ್ಗೈಕ್ಷಣಿಕ ಸಾಧಕರಾಗಿ ಬೆಳೆಡದು ಮುಂದೆ ಹೆಚ್ಚಿನ ತಾಂತ್ರಿಕ ಮಾಹಿತಿಯೊಂದಿಗೆ ಉದ್ಯಮ ಶೀಲರಾಗಿ ಬೆಳೆದಲ್ಲಿ ನಿಮ್ಮ ಅಭಿವೃದ್ಧಿಯೊಂದಿಗೆ ಅಸಂಖ್ಯ ಕುಟುಂಬಗಳ ಅಭಿವೃದ್ಧಿಗೆ ಕಾರಣೀಬೂತರಾಗ ಬಹುದು ಎಂದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಜನಶ್ರೀ ಗುಂಪು ವಿಮಾ ಯೋಜನೆಯ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ವಲಯದ ಅಧ್ಯಕ್ಷ ರಾಜ್‌ಕುಮಾರ್ ವಹಿಸಿದ್ದರು.ಹಳೆಯಂಗಡಿ ವಲಯದ ಅಧ್ಯಕ್ಷ ಕೇಶವ ಕಾಮತ್, ಎಸೋಸಿಯೇಶನ್ ಜಿಲ್ಲಾಧ್ಯಕ್ಷ ಉದಯ ಕುಮಾರ್,ಪ್ರಧಾನ ಕಾರ್ಯದರ್ಶಿ ಜೈಶಂಕರ್, ಮಾಜಿ ರಾಜ್ಯಾಧ್ಯಕ್ಷ ಪ್ರವೀಣ ಕುಮಾರ್,ಕ್ಷೇತ್ರಾಧ್ಯಕ್ಷ ಭಾಸ್ಕರ ಶೆಟ್ಟಿಗಾರ್, ಕಾರ್ಯದರ್ಶಿ ಮೋಹನ್, ಹಳೆಯಂಗಡಿ ವಲಯ ಕಾರ್ಯದರ್ಶಿ ವನಿತಾ, ಮೂಲ್ಕಿ ವಲಯ ಕಾರ್ಯದರ್ಶಿ ಗೀತಾಂಜಲಿ, ಕೋಶಾಧಿಕಾರಿ ಹೇಮಾವತಿ ಮತ್ತಿತರರಿದ್ದರು. ಸಂಘಟನಾ ಕಾರ್ಯದರ್ಶಿ ಉದಯ ಅಮೀನ್ ಮಟ್ಟು ನಿರೂಪಿಸಿದರು.

Kinnigoli-70051601

Comments

comments

Comments are closed.

Read previous post:
ಪಂಜ ಹರಿಪಾದ ಸಿಯಾಳಾಭಿಷೇಕ

ಕಿನ್ನಿಗೋಳಿ: ಮಳೆಗಾಗಿ ಪ್ರಾರ್ಥಿಸಿ ಹಿಂದೂ ಜಾಗರಣ ವೇದಿಕೆ ಮತ್ತು ದುರ್ಗಾಶಕ್ತಿ ಕೆಮ್ರಾಲ್ ಘಟಕದ ವತಿಯಿಂದ ಪಂಜ ಹರಿಪಾದದಲ್ಲಿ ಸಿಯಾಳಾಭಿಷೇಕ ನಡೆಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ...

Close