ವಿಶ್ವ ಪರಿಸರ ದಿನಾಚರಣೆ

ಮೂಲ್ಕಿ: ಪ್ರಕೃತಿಯ ವಿರುದ್ದವಾಗಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ವಿದ್ಯಾರ್ಥಿಗಳು ಪ್ರಕೃತಿ ರಕ್ಷಣೆಯ ಜೊತೆಗೆ ಪರಿಸರ ಸ್ವಚ್ಚತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ನಾಗರೀಕರಾಗಿ ಬೆಳೆಯನೇಕು ಎಂದು ಮೂಲ್ಕಿ ವಿಜಯಾ ಕಾಲೇಜು ನಿಯೋಜಿತ ಪ್ರಾಂಶುಪಾಲ ಪ್ರೊ.ನಾರಾಯಣ ಪೂಜಾರಿ ಹೇಳಿದರು.
ಮೂಲ್ಕಿ ಕಾರ್ನಾಡು ಸಿ.ಎಸ್.ಐ ಆಂಗ್ಲ ಮಾದ್ಯಮ ಶಾಲೆ ಮತ್ತು ಯು.ಬಿ.ಎಂ.ಸಿ ಕನ್ನಡ ಮಾದ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡನೆಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಅವುಗಳ ಪೋಷಣೆಯ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕಾರಣೀಭೂತರಾಗಬೇಕು ಎಂದರು.
ಸಮಾರಂಭವನ್ನು ಗಿಡಗಳನ್ನು ನೆಡುವ ಮೂಲಕ ಉದ್ಘಾಟಿಸಿದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸರ್ವೋತ್ತಮ ಅಂಚನ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶದ ಪರಿಣಾಮ ಈ ಬಾರಿಯ ಬರಗಾಲದಿಂದ ಎಲ್ಲರಿಗೂ ಅರಿಕೆಯಾಗಿದೆ ಮನೆಗೊಂದು ಮರ ಎಂಬಂತೆ ಮನೆಯ ಸುತ್ತ ಖಾಲಿ ಪ್ರದೇಶಗಳಲ್ಲಿ ಕೈ ತೋಟಗಳು ಮಳೆ ನೀರು ಇಂಗಿಸುವ ಮೂಲಕ ಅಂತರ್ಜಲ ವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳು ಪರಿಸರ ರಕ್ಷಣೆ ಬಗ್ಗೆ ಬರೆದ ಪ್ರಭಂಧ ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸಿ.ಎಸ್.ಐ ಯುನಿಟಿ ಚರ್ಚಿನ ಸಭಾಪಾಲಕರಾದ ಎಡ್ವರ್ಡ್ ಕರ್ಕಡ ರವರು ವಹಿಸಿದ್ದರು.
ಶಾಲೆಯ ಸಂಚಾಲಕ ಸ್ಯಾಮ್ ಮಾಬೆನ್,ಸಿ.ಎಸ್.ಐ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕ ನೀರಜ್ ಪುನೀತ್,ಯುಬಿಎಂಸಿ ಮುಖ್ಯ ಶಿಕ್ಷಕಿ ಗ್ಲಾಡಿಸ್ ಸುಕುಮಾರಿ ನಿವೃತ್ತ ಶಿಕ್ಷಕ ರಂಜನ್ ಜತ್ತನ್ನಾ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಡೆಲ್ಸಿ ಮಾಬೆನ್ ಸ್ವಾಗತಿಸಿದರು. ಶಿಕ್ಷಕ ಹರಿಶ್ಚಂದ್ರ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಶಾಲೆಯ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು.

Kinnigoli-70051602

Comments

comments

Comments are closed.

Read previous post:
Kinnigoli-70051601
ಟೈಲರ‍್ಸ್ ಎಸೋಸಿಯೇಶನ್ ಕಾರ್ಯ ಸಾಧನೆ

ಮೂಲ್ಕಿ: ಅಸಂಘಟಿತ ಕಾರ್ಮಿಕರಾಗಿ ಸಂಘಟನೆಯ ಮೂಲಕ ಏಕತೆಯನ್ನು ಪಡೆದುಕೊಂಡು ಮಕ್ಕಳ ಶೈಕ್ಷಣಿಕ ಸಾಧನೆಗೆ ಸಹಕರಿಸುವ ಟೈಲರ‍್ಸ್ ಎಸೋಸಿಯೇಶನ್ ಕಾರ್ಯ ಸಾಧನೆ ಸ್ತುತ್ಯರ್ಹ ಎಂದು ಮೂಲ್ಕಿ ಬಿಲ್ಲವ ಸಮಾಜ...

Close