ಕಟೀಲು ತಾಳಮದ್ದಲೆ ಸಪ್ತಾಹ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ವತಿಯಿಂದ ನಡೆಯುತ್ತಿರುವ 12ನೇ ವರ್ಷದ ತಾಳಮದ್ದಲೆ ಸಪ್ತಾಹ “ಯಜ್ಞಾರ್ಥ ಸಂಪ್ರಾಪ್ತಿ” ಶೀರ್ಷಿಕೆಯಲ್ಲಿ ಜೂನ್ 13  ರಿಂದ 19ರ ತನಕ ದಿನಂಪ್ರತಿ ಸಂಜೆ 4ರಿಂದ 8ಗಂಟೆಯವರೆಗೆ ನಡೆಯಲಿದೆ.
ತಾ. 13ರಂದು ದಕ್ಷ ಯಜ್ಞದಲ್ಲಿ ಕುಬಣೂರು ಶ್ರೀಧರ ರಾವ್, ಪದ್ಯಾಣ ಗೋವಿಂದ ಭಟ್ಟ, ಸತೀಶ ಬೋಂದೆಲ್, ಡಾ|ಕೋಳ್ಯೂರು, ಶಂಭು ಶರ್ಮ, ವಿಶ್ವೇಶ್ವರ ಭಟ್ಟ, ದಿನೇಶ ಶೆಟ್ಟಿ, ರವಿಶಂಕರ ವಳಕ್ಕುಂಜ, ಪಕಳಕುಂಜ, ಸುಬ್ರಹ್ಮಣ್ಯ ಬೈಪಾಡಿತ್ತಾಯ, ಈಶ್ವರಪ್ರಸಾದ,
ವಿಜಯಾನಂದ ಭಾಗವಹಿಸಲಿದ್ದಾರೆ.
ತಾ. 14ರಂದು  ಚ್ಯವನ ಯಜ್ಞದಲ್ಲಿ ರಾಮಕೃಷ್ಣ ಮಯ್ಯ, ಪ್ರಫುಲ್ಲಚಂದ್ರ, ಗೋವಿಂದ ಭಟ್ಟ, ವಾಸುದೇವ ಸಾಮಗ, ಭಾಸ್ಕರ ರೈ, ಕೃಷ್ಣ ಕುಮಾರ, ಜಯಪ್ರಕಾಶ ಶೆಟ್ಟಿ, ಶಶಿಕಾಂತ ಶೆಟ್ಟಿ, ಸದಾಶಿವ ಆಳ್ವ, ಗಾಳಿಮನೆ ವಿನಾಯಕ ಭಟ್ಟ ಇದ್ದಾರೆ.
ತಾ. 15ಕ್ಕೆ ಪೃಥು ಯಜ್ಞದಲ್ಲಿ ದಿನೇಶ ಅಮ್ಮಣ್ಣಾಯ, ಶ್ರೀನಿವಾಸ ಬಳ್ಳಮಂಜ, ಎಂ.ಎಲ್. ಸಾಮಗ, ಈಶ್ವರ ಭಟ್ಟ, ಶಾಂತಾರಾಮ ಪ್ರಭು, ಶ್ರೀಹರಿ ಆಸ್ರಣ್ಣ, ವಿಷ್ಣು ಶರ್ಮ, ಮಾಧವ ಬಂಗೇರ, ಬಾಲಕೃಷ್ಣ ಭಟ್ಟ ಇದ್ದಾರೆ.
ತಾ. 16ಕ್ಕೆ ಗಯ ಯಜ್ಞದಲ್ಲಿ ಪದ್ಯಾಣ ಗಣಪತಿ ಭಟ್ಟ, ಗಿರೀಶ ರೈ, ಎಂ.ಎ. ಹೆಗಡೆ ಸಿದ್ಧಾಪುರ, ಉಮಾಕಾಂತ ಭಟ್ಟ, ಸೇರಾಜೆ ಸೀತಾರಾಮ ಭಟ್ಟ, ಪ್ರಸಾದ ಆಸ್ರಣ್ಣ, ರವಿರಾಜ ಪನೆಯಾಲ, ಹರೀಶ ಬಳಂತಿಮೊಗರು, ತಾರಾನಾಥ ವರ್ಕಾಡಿ, ಸೀತಾರಾಂ ಕುಮಾರ, ಸಾವಿತ್ರೀ ಶಾಸ್ತ್ರಿ ಇದ್ದಾರೆ.
ತಾ. 17 ನಿಮಿ ಯಜ್ಞದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ದೇವೀಪ್ರಸಾದ ಆಳ್ವ, ಹಿರಣ್ಯ ವೇಂಕಟೇಶ ಭಟ್ಟ, ರಾಧಾಕೃಷ್ಣ ಕಲ್ಚಾರ್, ಪ್ರಸಾದ ಆಸ್ರಣ್ಣ, ಶ್ರೀರಮಣ ಆಚಾರ್ಯ ಇದ್ದಾರೆ.
ತಾ. 18ಕ್ಕೆ ತ್ರಿಶಂಕು ಯಜ್ಞದಲ್ಲಿ ಬಲಿಪ ನಾರಾಯಣ ಭಾಗವತ, ರಮಾನಂದ ರಾವ್, ರಮಾನಂದ ಬನಾರಿ, ಪಂಜ ಭಾಸ್ಕರ ಭಟ್ಟ, ಗಣರಾಜ ಕುಂಬ್ಳೆ, ವಾಸುದೇವ ರಂಗಾಭಟ್ಟ, ವಿನಯ ಆಚಾರ್ಯ ಭಾಗವಹಿಸಲಿದ್ದಾರೆ
ತಾ. 19ರಂದು  ಬೆಳಿಗ್ಗೆ 9.30ರಿಂದ ರಾತ್ರಿ ವರೆಗೆ ನಡೆಯಲಿರುವ ಅಶ್ವಮೇಧ ಯಜ್ಞದಲ್ಲಿ ರಘುರಾಮ ಹೊಳ್ಳ, ಪ್ರಸಾದ ಬಲಿಪ, ವಿದ್ವಾನ್ ಗಣಪತಿ ಭಟ್ಟ, ಪಟ್ಲ ಸತೀಶ ಶೆಟ್ಟಿ, ಗೋಪಾಲಕೃಷ್ಣ ಶಾಸ್ತ್ರೀ, ಗೋವಿಂದ ಭಟ್ಟ, ವಿಶ್ವೇಶ್ವರ ಭಟ್ಟ, ನಾ.ಕಾರಂತ, ಪಶುಪತಿ ಶಾಸ್ತ್ರಿ, ವಾದಿರಾಜ ಕಲ್ಲೂರಾಯ, ಗಣೇಶ ಶೆಟ್ಟಿ, ಉಡುವೆಕೋಡಿ ಸುಬ್ಬಪ್ಪಯ್ಯ, ಕೇಶವ ಭಟ್ಟ, ಶ್ರೀಹರಿ ಆಸ್ರಣ್ಣ, ವಾಸುದೇವ ರಂಗಾಭಟ್ಟ, ಸಂಕದಗುಂಡಿ ಗಣಪತಿ ಭಟ್ಟ, ರಾಮ ಜೋಯಿಸ, ರವಿ ಅಲೆವೂರಾಯ ಭಾಘವಹಿಸಲಿದ್ದಾರೆ ಎಂದು ಕಟೀಲು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ ಹಾಗೂ ಡಾ. ಕೆ. ರವೀಂದ್ರನಾಥ ಪೂಂಜ ತಿಳಿಸಿದ್ದಾರೆ.

Comments

comments

Comments are closed.

Read previous post:
Mulki-11061604
ಸ್ತನ ಕ್ಯಾನ್ಸರ್ ಕುರಿತ ಜಾಗೃತಿ

ಮೂಲ್ಕಿ: ದೇಶದಲ್ಲಿ ಪ್ರತಿ 22 ಮಹಿಳೆಯಲ್ಲಿ ಒರ್ವರಿಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ನಿಖರ ಅಂಕಿ ಅಂಶಗಳಿಂದ ತಿಳಿದು ಬಂದಿದ್ದು ಸೂಕ್ತ ಮಾಹಿತಿಯ ಕೊರತೆಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರು...

Close