ಸ್ತನ ಕ್ಯಾನ್ಸರ್ ಕುರಿತ ಜಾಗೃತಿ

ಮೂಲ್ಕಿ: ದೇಶದಲ್ಲಿ ಪ್ರತಿ 22 ಮಹಿಳೆಯಲ್ಲಿ ಒರ್ವರಿಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ನಿಖರ ಅಂಕಿ ಅಂಶಗಳಿಂದ ತಿಳಿದು ಬಂದಿದ್ದು ಸೂಕ್ತ ಮಾಹಿತಿಯ ಕೊರತೆಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಹೆಚ್ಚು ಪೀಡಿತರಾಗುತ್ತಿದ್ದಾರೆ, ಆರಂಭಿಕ ಹಂತದಲ್ಲಿ ಮುಂಜಾಗ್ರತ ವಹಿಸಿದಲ್ಲಿ ಇದನ್ನು ನಿಯಂತ್ರಿಸಲು ಸಾದ್ಯವೆಂದು ಮಣಿಪಾಲದ ಕೆ ಎಂ ಸಿ ರೇಡಿಯೋಲಾಜಿಸ್ತ್ ವಿಭಾಗದ ಡಾ ಸ್ಮಿತಿ ಶ್ರೀಪತಿ ಹೇಳಿದರು.
ಉಡುಪಿ ಸಾಯಿ ವಿಷನ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಮೂಲ್ಕಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರಗಿದ ಸ್ತನ ಕ್ಯಾನ್ಸರ್ ಕುರಿತ ಜಾಗೃತಿ ಕಾರ್ಯಕ್ರಮ ಮತ್ತು ಮಾಹಿತಿ ಶಿಬಿರದಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು. ಡಾ ಪೂಜಾ ಉಮೇಶ್ ಕುಕ್ಯಾನ್ ಮತ್ತು ಡಾ ಸ್ಮಿತಿ ಶ್ರೀಪತಿಯವರು ಪ್ರಾಜೆಕ್ಟರ್ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್, ಮೂಲ್ಕಿ ಬಿಲ್ಲವ ಸಂಘದ ಮಹಿಳಾ ಮಂಡಳಿಯ ಅಧ್ಯಕ್ಷೆ ಸರಸ್ವತಿ ಸುವರ್ಣ ಉಪಸ್ಥಿತರಿದ್ದರು.
ಸಾಯಿ ವಿಷನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಉಮೇಶ್ ಕುಕ್ಯಾನ್ ಸ್ವಾಗತಿಸಿದರು, ಆಡಳಿತ ಟ್ರಸ್ಟಿ ಪ್ರಸನ್ನ ಉಮೇಶ್ ಕುಕ್ಯಾನ್ ಪ್ರಸ್ತಾವನೆಗೈದರು, ವಿಜಯ ಕುಮಾರ್ ಕುಬೆವೂರು ವಂದಿಸಿ, ನಿರೂಪಿಸಿದರು.

Mulki-11061604

Comments

comments

Comments are closed.

Read previous post:
Mulki-11061603
ಉಚಿತ ಪುಸಕ ವಿತರಣೆ

ಮಂಗಳೂರು; ಯು.ಎ.ಇ ಮನಿಎಕ್ಸ್ ಚೇಂಜ್ ಮತ್ತು ಪೈನನ್ಸಿಯಲ್ ಸರ್ವಿಸ್ (ಲಿ), ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಡರೇಶನ್ ಮತ್ತು ಜೆಪ್ಪಿನ ಮೊಗರು ಯುವಕ ಮಂಡಲ ಇವರ ಜಂಟಿ ಅಶ್ರಯದಲ್ಲಿ...

Close