ಭ್ರಾಮರೀ ಮಹಿಳಾ ಸಮಾಜ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಜನಪರ ಯೋಜನೆಗಳನ್ನು ಹಮ್ಮಿಕೊಂಡು ತೆರೆಯ ಮರೆಯಲ್ಲಿರುವರನ್ನು ಗುರುತಿಸುವ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮೂಲಕ ಶಿಕ್ಷಣಕ್ಕೆ ಮಹತ್ವಕೊಡುವ ಕಾರ್ಯ ಮಾಡಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜದ 9 ನೇ ವಾರ್ಷಿಕೋತ್ಸವ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳಾ ಸಂಘ ಸಂಸ್ಥೆಗಳು ಸಂಘಟನಾ ಶಕ್ತಿಯಿಂದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಸಮಾಜದ ಮುಂಚೂಣಿಗೆ ಆರ್ಥಿಕ ಪ್ರಗತಿ ಹೊಂದಲು ಪ್ರೇರಣೆ ನೀಡಬೇಕು ಎಂದರು. ಈ ಸಂದರ್ಭ ಸಮಾಜ ಸೇವಕಿ ವನಜ ಶೆಟ್ಟಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಾದ ಮನು ಕಶ್ಯಪ್, ಶರಣ್ಯ ಡಿ. ಕಟೀಲ್, ಅಂಕಿತಾ ಬಂಗೇರ, ಅನ್ನಪೂರ್ಣ ಶೆಣೈ , ಸುಶ್ಮಿತಾ, ಜೀವನ್ ಶೆಟ್ಟಿ ಅವರನ್ನು ಸಸ್ಮಾನಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉಲ್ಲಂಜೆ ಹಿ.ಪ್ರಾ. ಶಾಲೆಗೆ ಫ್ಯಾನ್ ಕೊಡುಗೆ ನೀಡಲಾಯಿತು. ತಾ. ಪಂ. ಸದಸ್ಯೆ ಶುಭಲತಾ ಶೆಟ್ಟಿ , ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಸುಧಾಕರ್, ಉಪನ್ಯಾಸಕ ಸೋಂದಾ ಭಾಸ್ಕರ ಭಟ್, ಮೂಲ್ಕಿ ಲಯನ್ಸ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸುನಂದ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಭ್ರಾಮರೀ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್ ಸ್ವಾಗತಿಸಿದರು. ಕಾರ್ಯದರ್ಶಿ ಅನುಷಾ ಕಕೇರ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-13051603

Comments

comments

Comments are closed.

Read previous post:
Kinnigoli-13051602
ಪದ್ಮನೂರು – ಬ್ಯಾಗ್ ವಿತರಣೆ

ಕಿನ್ನಿಗೋಳಿ: ಪದ್ಮನೂರು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿನ್ನಿಗೋಳಿ ದಿ. ಕಮಲಾಕ್ಷಿ ಶ್ರೀಧರ್‌ಆಚಾರ್ಯ ಸ್ಮರಣಾರ್ಥ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆಯನ್ನು ಶುಕ್ರವಾರ ಅನಿತಾ ಪ್ರಥ್ವಿರಾಜ್...

Close