ಸತ್ಯ, ಧರ್ಮ, ಸನ್ನಡತೆ – ಜೀವನದಲ್ಲಿ ಯಶಸ್ಸು

ಕಿನ್ನಿಗೋಳಿ: ಸತ್ಯ, ಧರ್ಮ, ಸನ್ನಡತೆಯಲ್ಲಿ ಸಾಗಿದರೆ ಜೀವನದಲ್ಲಿ ಯಶಸ್ಸು ಸಮಾಜದಲ್ಲಿ ಶಾಂತಿ ನೆಲಸಲು ಶಾಂತಿ ನೆಲಸಲು ಸಾಧ್ಯ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಹೇಳಿದರು.
ಕಿನ್ನಿಗೋಳಿ ನವನಗರದ ಜೋಕಿಂ ಸಿಕ್ವೇರ ಅವರ ಮನೆಯಲ್ಲಿ ನಡೆದ ಚರ್ಚ್‌ನ ಪವಿತ್ರಹೃದಯದ ವಾಳೆಯ ವಾರ್ಷಿಕ ಹಬ್ಬ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಾಯಕ ಧರ್ಮಗುರುಗಳಾದ ಫಾ. ಜಾರ್ಜ್ ಪಿಂಟೋ, ಫಾ. ಅರುಣ್ ರಾಯನ್ ಕ್ರಾಸ್ತ ಶುಭ ಹಾರೈಸಿದರು.
ಈ ಸಂದರ್ಭ ಸಾಧಕಿ ಭಗಿನಿ ಅರುಣಾಸಾವಿಯೋ ಅವರನ್ನು ಸನ್ಮಾನಿಸಲಾಯಿತು. ಮೈಕಲ್ ಪಿಂಟೊ, ರೆನ್ನಿ ಮೆಂಡೋನ್ಸಾ, ಸೆಲಿನ್ ಡಿಸೋಜ, ವಿನ್ಸೆಂಟ್ ಡಿಕೋಸ್ತ , ಜೋಕಿಂ ಸಿಕ್ವೇರ ಉಪಸ್ಥಿತರಿದ್ದರು.
ಫಿಲೋಮಿನಾ ಸಿಕ್ವೇರ ಸ್ವಾಗತಿಸಿದರು. ವಿನಿತ ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.

Kinnigoli-13051601

Comments

comments

Comments are closed.

Read previous post:
ಕಟೀಲು ತಾಳಮದ್ದಲೆ ಸಪ್ತಾಹ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ವತಿಯಿಂದ ನಡೆಯುತ್ತಿರುವ 12ನೇ ವರ್ಷದ ತಾಳಮದ್ದಲೆ ಸಪ್ತಾಹ "ಯಜ್ಞಾರ್ಥ ಸಂಪ್ರಾಪ್ತಿ" ಶೀರ್ಷಿಕೆಯಲ್ಲಿ ಜೂನ್ 13  ರಿಂದ 19ರ ತನಕ ದಿನಂಪ್ರತಿ...

Close