ಸ್ವ-ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

ಕಿನ್ನಿಗೋಳಿ : ಆರ್ಥಿಕ ಸ್ವಾವಲಂಬನೆ ಹಾಗೂ ಪರಸ್ಪರ ಸಹಕಾರ ಮನೋಭಾವನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಬಳ್ಕುಂಜೆ ಸಂತ ಪೌಲರ ಚರ್ಚ್ ಧರ್ಮಗುರು ಫಾ. ಮೈಕಲ್ ಡಿಸಿಲ್ವಾ ಹೇಳಿದರು.
ಬಳ್ಕುಂಜೆ ಸಂತ ಪೌಲರ ಚರ್ಚ್ ಸಭಾಭವನದಲ್ಲಿ ಭಾನುವಾರ ನಡೆದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳ್ಕುಂಜೆ- ಕರ್ನಿರೆ, ಕೊಲ್ಲೂರು- ಕವತ್ತಾರು ಬಳ್ಕುಂಜೆ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಬಳ್ಕುಂಜೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು, ಕಟೀಲು ಪದವಿ ಕಾಲೇಜು ಉಪನ್ಯಾಸಕ ಸೋಂದಾ ಭಾಸ್ಕರ ಭಟ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಉಮರಬ್ಬ , ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಒಕ್ಕೂಟದ ನೂತನ ಅಧ್ಯಕ್ಷೆ ಮಮತಾ ಪೂಂಜಾ, ಜಯಲಕ್ಷ್ಮೀ, ಉಷಾ, ಗೀತಾ ಎಸ್, ಮಾಲತಿ, ಸಂಗೀತಾ, ಲಲಿತಾ ಮತ್ತಿತರರು ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಉದಯ ಸ್ವಾಗತಿಸಿ ಸುನೀತಾ ವರದಿ ವಾಚಿಸಿದರು. ಹರಿಣಾಕ್ಷಿ ವಂದಿಸಿದರು. ಮೇಲ್ವಿಚಾರಕಿ ಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-14061602

Comments

comments

Comments are closed.

Read previous post:
Kinnigoli-14061601
ಕಟೀಲು ತಾಳಮದ್ದಲೆ ಸಪ್ತಾಹ

ಕಿನ್ನಿಗೋಳಿ: ಯಕ್ಷಗಾನ ಕ್ಷೇತ್ರದ ಒಲವು, ಅಭಿಮಾನ ತುಳುನಾಡಿನ ಜನರಲ್ಲಿದೆ. ನಾವೆಲ್ಲರೂ ಸಾಮೂಹಿಕವಾಗಿ ಯಕ್ಷಗಾನ ತಾಳಮದ್ದಳೆ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಮಂಗಳೂರು ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದರು....

Close