ಕಟೀಲು ತಾಳಮದ್ದಲೆ ಸಪ್ತಾಹ

ಕಿನ್ನಿಗೋಳಿ: ಯಕ್ಷಗಾನ ಕ್ಷೇತ್ರದ ಒಲವು, ಅಭಿಮಾನ ತುಳುನಾಡಿನ ಜನರಲ್ಲಿದೆ. ನಾವೆಲ್ಲರೂ ಸಾಮೂಹಿಕವಾಗಿ ಯಕ್ಷಗಾನ ತಾಳಮದ್ದಳೆ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಮಂಗಳೂರು ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದರು.
ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವತಿಯಿಂದ ಕಟೀಲು ಸರಸ್ವತಿ ಸಧನದಲ್ಲಿ ನಡೆಯುತ್ತಿರುವ 12ನೇ ವರ್ಷದ ತಾಳಮದ್ದಲೆ ಸಪ್ತಾಹ ಯಜ್ಞಾರ್ಥ ಸಂಪ್ರಾಪ್ತಿ ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಅರ್ಚಕ ವೇ.ಮೂ. ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ದೇವಳದ ಅನುವಂಶಿಕ ಮೊಕ್ತೇಸರ ಡಾ. ಕೆ. ರವೀಂದ್ರನಾಥ ಪೂಂಜ, ಕಟೀಲು ದೇವಳದ ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಉದ್ಯಮಿಗಳಾದ ರಾಮಚಂದ್ರ ಭಟ್ ಬಜಪೆ, ದೊಡ್ಡಯ್ಯ ಮೂಲ್ಯ, ಗಿರೀಶ್ ಶೆಟ್ಟಿ, ಬಿ. ಕೆ. ಸಂದೀಪ್ ಕೂಳೂರು, ಶ್ರೀಕಾಂತ್ ರಾವ್ ಮಂಗಳೂರು, ಯಾದವ ಕೋಟ್ಯಾನ್ ಪೆರ್ಮುದೆ ಉಪಸ್ಥಿತರಿದ್ದರು.
ಶ್ರೀ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-14061601

Comments

comments

Comments are closed.

Read previous post:
Kinnigoli-13051607
ಕೆಮ್ರಾಲ್ ಸ. ಪ್ರೌ. ಶಾಲೆ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯಲ್ಲಿ ಸರಕಾರದಿಂದ ಕೊಡಮಾಡಿದ ಉಚಿತ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು. ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಲೀಲಾ, ಸೇಸಪ್ಪ ಸಾಲಿಯಾನ್, ಪ್ರಮೀಳಾ...

Close