ವಿಭಾಗೀಯ ಮಟ್ಟದ ಕಾರ್ಯಗಾರ

ಮೂಲ್ಕಿ: ದೇಶದ ಅಭಿವೃದ್ಧಿ ಯೋಜನೆಗಳಿಗೆ ಸಿಂಹಪಾಲು ನೀಡುತ್ತಾ 60ವರ್ಷಗಳಿಂದ ನಿರಂತರವಾಗಿ ಸಾಧನೆ ಸೇವೆ ನಂಬಿಕೆಗಳಿಂದ ವಿಶ್ವಾಸಾರ್ಹವಾಗಿ ವಿಶ್ವ ಮಟ್ಟದ ಹತ್ತು ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಭಾರತೀಯ ಜೀವ ವಿಮಾ ನಿಗಮವನ್ನು ಸರ್ಕಾರ ಕಡೆಗಣಿಸುತ್ತಿರುವುದು ಖಂಡನೀಯ ಎಂದು ಎಲ್.ಐ.ಸಿಎಒಐ ಜೀವವಿಮಾ ಪ್ರತಿನಿಧಿಗಳ ಸಂಘಟಣೆಯ ದಕ್ಷಿಣ ಮಧ್ಯವಲಯದ ಅಧ್ಯಕ್ಷ ಕಾಂ| ಮಂಜುನಾಥ ಹೇಳಿದರು.

ಎಲ್.ಐ.ಸಿಎಒಐ ಜೀವವಿಮಾ ಪ್ರತಿನಿಧಿಗಳ ಸಂಘಟಣೆ ಮೂಲ್ಕಿ ಶಾಖಾ ವತಿಯಿಂದ ಮೂಲ್ಕಿ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ನಡೆದ ವಿಭಾಗೀಯ ಮಟ್ಟದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಳೆದ 13ವರ್ಷಗಳಿಂದ ಸುಮಾರು 26 ಖಾಸಗಿ ಹಾಗೂ ವಿದೇಶಿ ವಿಮಾಕಂಪೆನಿಗಳಿಂದ ತೀವ್ರ ಪೈಪೋಟಿಯನ್ನು ಎದುರಿಸಿ ಇಂದಿಗೂ ದೇಶದಲ್ಲಿ ನಂ.1 ರಲ್ಲಿ ಮುಂದುವರಿಯುತ್ತಿರುವ ಸಂಸ್ಥೆಯ ಮೇಲೆ ಐಆರ್‌ಡಿಎ ತಾರತಮ್ಯ ಹಾಗೂ ಹಲವು ಅವೈಜ್ಞಾನಿಕ ಕಾನೂನುಗಳಿಂದ ದೇಶದಲ್ಲಿರುವ ಸುಮಾರು 30ಕೋಟಿ ಪಾಲಿಸಿದಾರರು 13ಲಕ್ಷ ಪ್ರತಿನಿಧಿಗಳ ಬಗ್ಗೆ ಸರಕಾರ ಖಾಳಜಿ ವಹಿಸದೆ ಖಾಸಗಿ ಕಂಪೆನಿಗಳ ಹುನ್ನಾರಕ್ಕೆ ಮಣಿಯುವುದು ತಪ್ಪು ಈ ಬಗ್ಗೆ ಎಲ್ಲಾ ಪ್ರತಿನಿಧಿಗಳು ಐಕ್ಯತೆಯಿಂದ ಸಂಘಟನೆಗೊಂಡು ಹೋರಾಟ ಮಾಡಿದಲ್ಲಿ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಕೊಲು ಸಾಧ್ಯವಿದೆ ಎಂದರು.
ಇನೋರ್ವ ಅತಿಥಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಹಾಗೂ ಸಂಘಟನೆಯ ಗೌರವ ಕಾರ‍್ಯದರ್ಶಿ ಕಾಂ| ಸುನಿಲ್ ಕುಮಾರ್ ಬಜಾಲ್‌ರವರು ಮಾತನಾಡಿ, ಸಂಘಟಿತ ಹೋರಾಟದಿಂದ ಮಾತ್ರ ಸಮಸ್ಯೆಗಳ ಪರಿಹಾರ ಸಾಧ್ಯ ಪ್ರತಿನಿಧಿಗಳಲ್ಲರೊ ಸಂಘಟಿತರಾಗಿ ತಮ್ಮ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.. ಈ ಸಂದರ್ಭ ಎಲ್.ಐ.ಸಿಎಒಐ ಜೀವವಿಮಾ ಪ್ರತಿನಿಧಿಗಳ ಸಂಘಟಣೆಯ ದಕ್ಷಿಣ ಮಧ್ಯವಲಯದ ಅಧ್ಯಕ್ಷರಾಗಿ ಆಯ್ಕೆಯಾದ ಕಾಂ| ಮಂಜುನಾಥ ರವರನ್ನು ಮೂಲ್ಕಿ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಿಭಾಗೀಯ ಅಧ್ಯಕ್ಷ ಜರ್ನಾಧನ ಪೆರಾಜೆ ಪುತ್ತೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯಾಧ್ಯಕ್ಷರಾದ ಕಾಂ| ರಮೇಶ್‌ಕುಮಾರ್, ರಾಯಚೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಂಕದ್ ಮಂಜುನಾಥ್, ಎಲ್‌ಐಸಿಎಒಐ ನ ವಿಭಾಗೀಯ ಕಾರ್ಯದರ್ಶಿ ಪ್ರಕಾಶ ರೈ, ಕೋಶಾಧಿಕಾರಿ ಶೋಭ ಅಡ್ಯಂತಾಯ, ಸಂಘಟನಾ ಕಾರ್ಯದರ್ಶಿ ಎಮ್.ಎಸ್. ಭಟ್ ಪುತ್ತೂರು, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕಾಂ| ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು. ಮೂಲ್ಕಿ ಶಾಖಾಧಿಕಾರಿ ವಿಶ್ವನಾಥ ಶುಭ ಹಾರೈಸಿದರು. ಕಾಂ| ರಮೇಶ್‌ಕುಮಾರ್ ಪ್ರಸ್ತಾವಿಸಿದರು. ಮಾಡಿದರು. ಕಾರ್ಯಕ್ರಮದಲ್ಲಿ ಮಂಗಳೂರು, ಬಂಟ್ವಾಳ, ಪುತ್ತೂರು, ಕಾಪು, ಕಾರ್ಕಳಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಮೂಲ್ಕಿ ಶಾಖೆಯ ಪ್ರಧಾನ ಕಾರ‍್ಯದರ್ಶಿ ಗ್ರೇಸಿ ಸಿಕ್ವೇರ ನಿರೂಪಿಸಿದರು.

Kinnigoli-15061601

Comments

comments

Comments are closed.

Read previous post:
Kinnigoli-14061603
ಬಿಜೆಪಿ ಸಮಿತಿ ಕಾರ್ಯಕಾರಿಣಿ ಸಭೆ

ಕಿನ್ನಿಗೋಳಿ : ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಬಿಜೆಪಿ ಮೂಲ್ಕಿ ಮೂಡಬಿದಿರೆ ಕ್ಷೇತ್ರ ಸಮಿತಿಯ ಕಾರ್ಯಕಾರಿಣಿ ಸಭೆಯ ಸಂಧರ್ಭ ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ...

Close