ಋಣ ಮುಕ್ತತೆಯಿಂದ ಸಮಾಜ ಬಲಿಷ್ಠ

ಬೆಳ್ಮಣ್ಣು : “ಸಮಾಜದಿಂದ ಸಹಾಯ ಪಡೆದವರು ತಾವು ಶಕ್ತಿವಂತರಾದಾಗ ತಮ್ಮ ಹಿಂದಿನ ಬದುಕನ್ನು ಮರೆಯದೇ ತಮಗೆ ಸಮಾಜ ನೀಡಿದ ಶಕ್ತಿಯನ್ನು ಸಂಕಷ್ಟದಲ್ಲಿ ಇರುವ ಇತರರ ಏಳಿಗೆಗೆ ಬಳಸುವ ಮೂಲಕ ಸಮಾಜದ ಋಣ ತೀರಿಸಬೇಕು. ಈ ಪ್ರಕ್ರಿಯೆ ನಿರಂತರವಾದಾಗ ದಾರಿದ್ರ್ಯ ಮುಕ್ತಸಮಾಜದ ನಿರ್ಮಾಣ ಸಾಧ್ಯ” ಎಂದು ಕಾರ್ಕಳ ಹೊಸ ಸಂಜೆ ಬಳಗ ಅಧ್ಯಕ್ಷ ಆರ್, ದೇವರಾಯ ಪ್ರಭು ನುಡಿದರು.
ಅವರು ಶನಿವಾರ ಬೆಳ್ಮಣ್ಣು ಜಂತ್ರದ ನಿವಾಸಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕ್ಯಾನ್ಸರ್ ನಿಂದ ಬಳಲುತ್ತಿರುವ 73 ವರ್ಷ ಪ್ರಾಯದ ಬಡ ಮಹಿಳೆ ಪದ್ಮಾವತಿ ಕಾಮತ್ ಅವರಿಗೆ ಮಂಗಳೂರಿನ ಗ್ರೂಪ್ ಜಿ,ಎಸ್, ಬಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 45 ಸಾವಿರ ರೂಪಾಯಿ, ನೆರವಿನ ಚೆಕ್ ಹಸ್ತಾಂತರಿಸಿ ಮಾತನಾಡಿದರು.
“ಸೇವಾ ಸಂಸ್ಥೆಗಳು ನೀಡುವ ನೆರವು ಅರ್ಹ ವ್ಯಕ್ತಿ ಮತ್ತು ನೈಜ ಅಗತ್ಯಗಳಿಗೆ ಬಳಕೆಯಾಗುವುದನ್ನು ಖಾತರಿ ಪಡಿಸಿಕೊಳ್ಳಬೇಕು. ಅದೇ ರೀತಿ ಸಂಘ ಸಂಸ್ಥೆಗಳು ಬಡವರಿಗೆ ಮಾಡುವ ಸೇವೆಗೆ ಲಾಭ ಪಡೆದು ಕೊಳ್ಳುವ ಯೋಚನೆ ಇಲ್ಲದೆ ನಿಸ್ವಾರ್ಥತೆಯಿಂದ ಕೂಡಿರಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಪ್ರಮೋದ್ ಜಿ, ಕಾಮತ್, ಕಾರ‍್ಯದರ್ಶಿ ಹೇಮಂತ್ ಭಟ್, ಜತೆ ಕಾರ‍್ಯದರ್ಶಿ ನಿತೇಶ್ ಭಟ್, ಸೇವಾ ಕಾರ್ಯಕರ್ತೆ ಅಕ್ಷತಾ ಶೆಣೈ, ಮತ್ತು ಸದಸ್ಯರು ಗಣ್ಯರು ಉಪಸ್ಥಿತರಿದ್ದರು.

Belman-16061601

Comments

comments

Comments are closed.

Read previous post:
Kinnigoli-15061602
ನೆನೆಗುದಿಗೆ ಬಿದ್ದ ಮೂಲ್ಕಿ-ಮೂಡಬಿದ್ರಿ ರಾಜ್ಯ ಹೆದ್ದಾರಿ

ಮೂಲ್ಕಿ: ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅರ್ಧಂಬರ್ಧ  ಕಾಮಗಾರಿಯಿಂದ ನೆನೆಗುದಿಗೆ ಬಿದ್ದ ಮೂಲ್ಕಿ-ಮೂಡಬಿದ್ರಿ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆ. ಕಳೆದ ವರ್ಷ ಮೂಲ್ಕಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಫಥ...

Close