ಕಲಿಕೆಯಲ್ಲಿ ಶ್ರದ್ಧೆಯಿದ್ದರೆ ಉತ್ತಮ ಫಲಿತಾಂಶ

ಕಿನ್ನಿಗೋಳಿ : ಕಲಿಕೆಯಲ್ಲಿ ಶೃದ್ಧೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನಿಗಾ ವಹಿಸಿದಾಗ ಉತ್ತಮ ಫಲಿತಾಂಶ ಕಟ್ಟಿಟ್ಟ ಬುತ್ತಿ ಎಂದು ಕಟೀಲು ದೇವಳ ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಹೇಳಿದರು.
ಬುಧವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಡಾ. ಕೆ. ರವೀಂದ್ರನಾಥ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ೨೦೧೬ ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜಾ ಸ್ವಾಗತಿಸಿದರು. ವನಿತಾ ಜೋಷಿ ವಂದಿಸಿದರು. ಗೋಪಿನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Kinnigoli--16061607

Comments

comments

Comments are closed.

Read previous post:
Kinnigoli--16061606
ಸಹಪಾಠಿಗಳನ್ನು ಒಂದುಗೂಡಿಸಿದ ವಾಟ್ಸಪ್

ಕಿನ್ನಿಗೋಳಿ: ಬರಿಗಾಲಲ್ಲಿ ಸ್ಕೂಲಿಗೆ ಹೋಗಿದ್ದು ಅಪ್ಪ ಅಮ್ಮನೊಡನೆ ತನಗೆ ಬೇಕಾದ್ದು ಸಿಗದಾಗ ಮುನಿಸಿ ದೂರ ನಿಂತು ಗಳ ಗಳ ಅತ್ತಿದ್ದು ಎಲ್ಲಾ ಬರೀ ನೆನಪುಗಳು............ ಮಗ ಡಾಕ್ಟರಾಗುತ್ತಾನೆ, ಇಂಜಿನಿಯರ್,...

Close