ಬೋರ್ ವೆಲ್ ನೀರನ್ನು ಕುಡಿಯಲು ಅಸಾಧ್ಯ

ಮೂಲ್ಕಿ: ಮೂಲ್ಕಿಯ ಗೇರುಕಟ್ಟೆಯಲ್ಲಿ ಕುಡಿಯಲು ಅಸಾಧ್ಯವಾದ ಬೋರ್ ವೆಲ್ ನೀರಿನ ಬಗ್ಗೆ,ಕುದ್ಕಪಳ್ಳದ ಮಾತಾ ಅಮೃತಾಮಯಿ ನಗರದಲ್ಲಿ ಒಳ ಚರಂಡಿ ಸಮಸ್ಯೆ ಬಗ್ಗೆ, ನಳ್ಳಿ ನೀರಿನ ಬಿಲ್ಲನ್ನು ಮನ್ನಾ ಮಾಡುವ ಬಗ್ಗೆ ಹಾಗೂ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿ ನಗರ ಪಂಚಾಯತ್ ನ ಸಭಾ ಭವನದಲ್ಲಿ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡಗಳ ಕುಂದು ಕೊರತೆಗಳ ಬಗ್ಗೆ ಜರಗಿದ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಮೂಲ್ಕಿಯ ಗೇರುಕಟ್ಟೆಯಲ್ಲಿನ ಪರಿಶಿಷ್ಟ ಪಂಗಡಗಳಿಗೆ ಅಲ್ಲಿರುವ ಬೋರ್ ವೆಲ್ ನ ನೀರನ್ನು ನೀಡುತ್ತಿದ್ದು ಇದು ಕುಡಿಯಲು ಅಸಾಧ್ಯವಾಗಿದ್ದು ಈ ಬಗ್ಗೆ ಕಳೆದ ಸಭೆಯಲ್ಲಿ ನೀರಿನ ಸ್ಯಾಂಪಲ್ ಸಮೇತ ದೂರು ನೀಡಿದ್ದು ಯಾವ ಕ್ರಮ ತೆಗೆದುಕೊಂಡಿದ್ದಿರೆಂದು ಅಲ್ಲಿನ ಗ್ರಾಮಸ್ಥರು ಸಭೆಯಲ್ಲಿ ಕೇಳಿದರು.ನೀರಿನ ಸ್ಯಾಂಪಲ್ ಅನ್ನು ಪರಿಶೀಲನೆಗೆ ಕಳುಹಿಸಿದ್ದು ಇದೀಗ ತಾತ್ಕಾಲಿಕವಾಗಿ ಕುಡಿಯಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಉಳಿದಂತೆ ಬೋರ್ ವೆಲ್ ನೀರನ್ನು ಉಪಯೋಗಿಸುವಂತೆ ಮುಖ್ಯಾಧಿಕಾರಿ ತಿಳಿಸಿದರು.ಮೂಲ್ಕಿಯ ಕುದ್ಕಪಳ್ಳದಲ್ಲಿರುವ ಮಾತಾ ಅಮೃತಾಮಯಿ ನಗರದಲ್ಲಿ ಚರಂಡಿಯಲ್ಲಿ ತ್ಯಾಜ್ಯಗಳು ತುಂಬಿ ದುರ್ನಾತ ಬೀರುತ್ತಿದ್ದು ವಾಸಿಸಲು ಅಸಾಧ್ಯವಾಗಿದೆ. ಕೆಲವು ಕಡೆ ತೆರೆದ ಚರಂಡಿಗಳಿದ್ದು ಮಕ್ಕಳು ಬಿದ್ಸಲ್ಲಿ ಹೆಚ್ಚಿನ ತೊಂದರೆಯಾಗುವ ಸಾಧ್ಯತೆಯಿದ್ದು ಕೂಡಲೇ ಸರಿ ಪಡಿಸುವಂತೆ ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದರು.ಒಳ ಚರಂಡಿಯಲ್ಲಿ ಕೇವಲ ಮಳೆ ನೀರು ಮಾತ್ರ ಹರಿದು ಹೋಗಲು ಅವಕಾಶವಿದ್ದು ಅಲ್ಲಿನ ನಿವಾಸಿಗಳು ಮನೆಯ ತ್ಯಾಜ್ಯ ನೀರನ್ನು ಚರಂಡಿಯಲ್ಲಿ ಬಿಡುತ್ತಿದ್ದು ಹಾಗೂ ಕಸ ಕಡ್ಡಿಗಳನ್ನು ಚರಂಡಿಯಲ್ಲಿ ಹಾಕುತ್ತಿರುವುದರಿಂದ ಸಮಸ್ಯೆಯಾಗಿದೆ. ಈ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಒಳ ಚರಂಡಿಗೆ ಸಂಪರ್ಕ ಕಲ್ಪಿಸಿರುವ ಮನೆಗಳ ತ್ಯಾಜ್ಯ ನೀರಿನ ಪೈಪುಗಳಿಗೆ ಎಂಡ್ ಕ್ಯಾಪ್ ಹಾಕುವುದಾಗಿ ಮುಖ್ಯಾಧಿಕಾರಿ ತಿಳಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಉಚಿತ ನೀರಿನ ಸಂಪರ್ಕ ನೀಡುತ್ತಿದ್ದು ನೀರಿನ ಮಾಸಿಕ ಬಿಲ್ಲನ್ನು ಮನ್ನಾ ಮಾಡುವಂತೆ ಮೂಲ್ಕಿಯ ಕೆ ಎಸ್ ರಾವ್ ನಗರದ ಬಿಜಾಪುರ ಕಾಲೋನಿಯ ಪರಿಶಿಷ್ಟ ಸಮಾಜದವರು ಒತ್ತಾಯಿಸಿದರು.

ಈಗಾಗಲೇ ಉಚಿತ ನೀರಿನ ಸಂಪರ್ಕವನ್ನು ನೀಡುತ್ತಿದ್ದು ನೀರಿನ ಮಾಸಿಕ ಬಿಲ್ಲನ್ನು ಮನ್ನಾ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದು ಮನ್ನಾ ಮಾಡಲು ಸಾದ್ಯವಿಲ್ಲವೆಂದು ತಿಳಿಸಿದ್ದಾರೆ, ಈಗಾಗಲೇ ಅತೀ ಬಡವರು ಸೇರಿದಂತೆ ಹೆಚ್ಚಿನವರು ನೀರಿನ ಬಿಲ್ಲನ್ನು ಕಟ್ಟಿದ್ದು ಕಟ್ಟದವರು ಕೂಡಲೇ ಬಿಲ್ಲನ್ನು ಕಟ್ಟುವಂತೆ ಮುಖ್ಯಾಧಿಕಾರಿ ತಿಳಿಸಿದರು.
ಮೂಲ್ಕಿಯ ಕೆ ಎಸ್ ರಾವ್ ನಗರದ ಬಿಜಾಪುರ ಕಾಲೋನಿಯ ನಾಗ ಬನದಲ್ಲಿನ ಉದ್ಯಾನವನಕ್ಕೆ ಬಾಬು ಜಗಜೀವನ್ ರಾಮ್ ಹೆಸರಿಡುವ ಬಗ್ಗೆ,ಅಂಬೇಡ್ಕರ್ ಜಯಂತಿ ಆಚರಿಸಲು ಮೂಲ್ಕಿ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಶಿಷ್ಟರು ಒಟ್ಟಾಗಿ ಮಾಡುವುದಾದಲ್ಲಿ ಪಂಚಾಯತ್ ವತಿಯಿಂದ ರೂ 20000 ನೀಡುವುದಾಗಿ ಮುಖ್ಯಾಧಿಕಾರಿ ತಿಳಿಸಿದರು. ಸಮುದಾಯಕ್ಕೆ ಶೌಚಾಲಯ ನಿರ್ಮಾಣ,ಮನೆ ನಿರ್ಮಾಣ,ಗ್ಯಾಸ್ ಸಂಪರ್ಕದ ಬಗ್ಗೆ ಅರ್ಜಿ ನೀಡಿದಲ್ಲಿ ಮಂಜೂರು ಮಾಡಲಾಗುವುದೆಂದು ಅವರು ತಿಳಿಸಿದರು.ಯಾವುದೇ ದೂರುಗಳಿದ್ದಲ್ಲಿ ವಾಟ್ಸಫ್ ಮೂಲಕ 8277777728 ಸಂಖ್ಯೆಗೆ ನೀಡಿದಲ್ಲಿ ಜನಹಿತ ಯೋಜನೆ ಮೂಲಕ 24 ಗಂಟೆಯ ಒಳಗೆ ದೂರನ್ನು ಬಗೆಹರಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಹಿಸಿದ್ದು ಆರೋಗ್ಯ ಇಲಾಖೆಯ ಡಾ ಕೃಷ್ಣ,ಕಂದಾಯ ನಿರೀಕ್ಷ ನಿತ್ಯಾನಂದ ದಾಸ್,ಗ್ರಾಮ ಲೆಕ್ಕಿಗ ಪ್ರದೀಪ್ ಶೆಣೈ, ಉಪಾಧ್ಯಕ್ಷೆ ವಸಂತಿ ಭಂಡಾರಿ ಉಪಸ್ತಿತರಿದ್ದರು.

Comments

comments

Comments are closed.

Read previous post:
Mangalore--16061605
ಗ್ರಾಮೀಣ ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸಿ

ಮಂಗಳೂರು: ತುಳು ರಂಗಭೂಮಿಯಿಂದ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಕಥಾನಕದ ಸಂದೇಶ ನೀಡುವ ಮೂಲಕ ವಿಶ್ವಮಟ್ಟದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಕಿನ್ನಿಗೋಳಿ ವಿಜಯಾ ಕಲಾವಿದರಂತಹ ಗ್ರಾಮೀಣ ಭಾಗದ ತುಳು...

Close