ಮಳೆನೀರು ಕೊಯಿಲು, ಸಾವಯವ ಗೊಬ್ಬರ ಮಾಹಿತಿ

ಮೂಲ್ಕಿ : ಉತ್ತಮ ಜೀವನ ನಿರ್ವಹಣೆ ಆರೋಗ್ಯಪೂರ್ಣ ಶಾಂತಿಯುತ ವಾಗಿ ಬಾಳಲು ಉತ್ತಮ ಪ್ರಕೃತಿ ಅಗತ್ಯ ಎಂದು ಸಿ.ಒ.ಡಿ.ಪಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಡೆನಿಸ್ ಡಿಸೋಜ ಹೇಳಿದರು.
ಮೂಲ್ಕಿ ಕ್ರಿಸ್ತಜ್ಯೋತಿ ಸ್ವ ಸಹಾಯ ಸಂಘದ ವತಿಯಿಂದ ನಡೆದ ಮಳೆ ನೀರು ಕೊಯಿಲು ಮತ್ತು ಸಾವಯವ ಗೊಬ್ಬರ ಬಳಕೆ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕೃಷಿಯಲ್ಲಿ ಗಳಿಕೆಯ ಬಗ್ಗೆ ಅಪಾರ ದುರಾಸೆಯಿಂದ ರಾಸಾಯನಿಕಗಳ ಬಳಕೆ ಹೆಚ್ಚಾಗಿ ಭೂಮಿ ಸಾರಕಳೆದುಕೊಂಡು ಬರಡಾಗುವ ಜೊತೆಗೆ ಆರೋಗ್ಯದ ಮೇಲೆ ಪ್ರಕಿಕೂಲ ಪರಿಣಾಮ ಬೀರುತ್ತದೆ. ಸಾವಯವ ಗೊಬ್ಬರ ಬಳಸಿ ನಡೆಸಿದ ಕೃಷಿಯಿಂದ ಉತ್ತಮ ಇಳುವರಿಯ ಜೊತೆಗೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಸಾಧ್ಯ. ಮಳೆನೀರು ಇಂಗಿಸುವ ಪರಿಣಾಮ ಭೂಮಿಯಲ್ಲಿ ಅಂತರ್ಜಲ ವೃದ್ಧಿ ಹಾಗೂ ಮಳೆ ನೀರನ್ನು ಶೇಖರಿಸಿ ಇಡುವ ಮೂಲಕ ಬೇಸಿಗೆಯಲ್ಲಿ ನೀರನ್ನು ಉಪಯೋಗಿಸಲು ಸಾಧ್ಯ ಎಂದು ಪ್ರಾತ್ಯಕ್ಷಿತೆಗಳ ಮೂಲಕ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮಗುರುಗಳಾದ ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ವಹಿಸಿದ್ದರು. ಸಿಒಡಿಪಿ ಕಾರ್ಯಕರ್ತರಾದ ಪುಷ್ಪವೇಣಿ, ಸಂಘದ ಅಧ್ಯಕ್ಷ ಫೆಲಿಕ್ಸ್ ತಾವ್ರೋ, ಕಾರ್ಯದರ್ಶಿ ರೋಕಿ ಸಲ್ಡಾನಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು,

ರೇಮಂಡ್ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

Mulki--16061603

Comments

comments

Comments are closed.

Read previous post:
Belman-16061601
ಋಣ ಮುಕ್ತತೆಯಿಂದ ಸಮಾಜ ಬಲಿಷ್ಠ

ಬೆಳ್ಮಣ್ಣು : "ಸಮಾಜದಿಂದ ಸಹಾಯ ಪಡೆದವರು ತಾವು ಶಕ್ತಿವಂತರಾದಾಗ ತಮ್ಮ ಹಿಂದಿನ ಬದುಕನ್ನು ಮರೆಯದೇ ತಮಗೆ ಸಮಾಜ ನೀಡಿದ ಶಕ್ತಿಯನ್ನು ಸಂಕಷ್ಟದಲ್ಲಿ ಇರುವ ಇತರರ ಏಳಿಗೆಗೆ ಬಳಸುವ...

Close