ಜೂ.19 ಸೀತಾರಾಮ ಕುಮಾರ್ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಯಕ್ಷ ಲಹರಿ, ಯುಗಪುರುಷ ಮತ್ತು ವಿಜಯ ಕಲಾವಿದರು ಸಂಘಟನೆಯ ಸಂಯೋಜನೆಯಲ್ಲಿ ಹಾಗೂ ಕಿನ್ನಿಗೋಳಿ ಪರಿಸರದ ಅಭಿಮಾನಿ ಬಳಗದವರಿಂದ 60 ವರ್ಷವನ್ನು ಪೂರೈಸಿ ತೆಂಕು ಹಾಗೂ ಬಡಗು ತಿಟ್ಟು ಯಕ್ಷಗಾನದಲ್ಲಿ ಪಳಗಿದ ಹಾಸ್ಯ ವಿಶಾರದ ಸೀತಾರಾಮ ಕುಮಾರ್ ಹುಟ್ಟೂರ ಸನ್ಮಾನ ಜೂನ್ 19 ರಂದು ಕಿನ್ನಿಗೋಳಿ ಯುಗಪುರುಷದ ಸಭಾ ಭವನದಲ್ಲಿ ನಡೆಯಲಿದೆ ಎಂದು ಕಿನ್ನಿಗೋಳಿ ಯಕ್ಷ ಲಹರಿ ಅಧ್ಯಕ್ಷ ಪಿ ಸತೀಶ್ ರಾವ್ ಹೇಳಿದರು.
ಜೂನ್ 19 ರ ಮಧ್ಯಾಹ್ನ 2 ಗಂಟೆಗೆ ಕಿನ್ನಿಗೋಳಿಯ ಗಣೇಶ ಮಂಟಪದಿಂದ ಸೀತಾರಾಮ ಕುಮಾರ್ ಸೇರಿದಂತೆ ಗಣ್ಯರನ್ನು ಮೆರವಣಿಗೆಯಲ್ಲಿ ಯುಗಪುರುಷದ ಸಭಾಭವನಕ್ಕೆ ಕರೆತರಲಾಗುವುದು. ಮದ್ಯಾಹ್ನ 3.30ಕ್ಕೆ ಕಲಾ ಕುಸುಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲು ದೇವಳ ಅರ್ಚಕ ಕೆ ಹರಿನಾರಾಯಣ ದಾಸ ಆಸ್ರಣ್ಣ ನೆರವೇರಿಸಲಿದ್ದಾರೆ. ಬಳಿಕ “”ಅಂಬಾ ಶಪಥ ” ತಾಳ ಮದ್ದಳೆ ಪ್ರದರ್ಶನ ನಡೆಯಲಿದೆ. ಸಂಜೆ 4.15 ಕ್ಕೆ ಸೀತಾರಾಮ ಕುಮಾರ್ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ವಹಿಸಲಿದ್ದಾರೆ. ಕಟೀಲು ದೇವಳ ಅರ್ಚಕ ಕೆ ಲಕ್ಷ್ಮೀ ನಾರಾಯಣ ಆಸ್ರಣ್ಣರು ಆಶೀರ್ವಚನ ನೀಡಲಿದ್ದು ಕ.ಸಾಪ. ಮಾಜಿ ರಾಜ್ಯಾದ್ಯಕ್ಷ ಹರಿಕೃಷ್ಣ ಪುನರೂರು ಶುಭಾ ಶಂಸನೆಗೈಯಲಿದ್ದಾರೆ. ಸೀತಾರಾಮ ಕುಮಾರ್ ಅವರನ್ನು ಗುರುಪುರ ಗೋಳಿದಡಿಗುತ್ತು ವಿನ ಗಡಿಕಾರರಾದ ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಸನ್ಮಾನಿಸಲಿದ್ದು ವಿದ್ವಾನ್ ಪಂಜ ಭಾಸ್ಕರ ಭಟ್ ಅಭಿನಂದನಾ ಭಾಷಣಗೈಯಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರಿ, ಸುರಗಿರಿ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಎಳತ್ತೂರು ದೇವಳ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ಮಂಗಳೂರು ಮಹಾ ನಗರ ಪಾಲಿಕೆ ಮಾಜಿ ಮೇಯರ್ ದಿವಾಕರ, ಬೆಂಗಳೂರಿನ ಹೆಗ್ಡೆ ಸೇವಾ ಸಂಘ್ ಅಧ್ಯಕ್ಷ ದೇವೇಂದ್ರ ಹೆಗ್ಡೆ, ತೋಕೂರು ಎಂ ಆರ್ ಎಂ ಪೂಂಜ ಐಟಿಐ ಪ್ರಿನ್ಸಿಪಾಲ್ ವೈ ಎನ್ ಸಾಲ್ಯಾನ್, ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ” ಬಲರಾಮ ಭಕ್ತಿ ” ತಾಳ ಮದ್ದಳೆ ಹಾಗೂ “”ಚಂದ್ರಾವಳಿ ವಿಲಾಸ “”, ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ ಭುವನಾಭಿರಾಮ ಉಡುಪ ತಿಳಿಸಿದರು.
ಕಿನ್ನಿಗೋಳಿ ವಿಜಯ ಕಲಾವಿದರು ಸಂಸ್ಥೆ ಅಧ್ಯಕ್ಷ ಶರತ್ ಶೆಟ್ಟಿ, ದೇವಪ್ರಸಾದ್ ಪುನರೂರು, ಯಕ್ಷ ಲಹರಿ ಕಾರ್ಯದರ್ಶಿ ವಸಂತ ದೇವಾಡಿಗ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli--17061601
ಉಚಿತ ಪುಸ್ತಕ

ಕಿನ್ನಿಗೋಳಿ : ಕೆಂಚನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ. ಕಲ್ಯಾಣಿ ಬೂಬ ಶೆಟ್ಟಿ ಹಾಗೂ ದಿ. ಪ್ರಭಾಕರ ಶೆಟ್ಟಿ ಸ್ಮರಣಾರ್ಥ ಶ್ರೀಕಾಂತ್ ಶೆಟ್ಟಿ ಅವರು ಶಾಲಾ...

Close