6ನೇ ವರ್ಷದ ತುಳುನಾಡು ಕೃಷಿ ಜಾನಪದೋತ್ಸವ

ಹಳೆಯಂಗಡಿ: ಕೃಷಿ ಪ್ರಧಾನ ತುಳುನಾಡಿನಲ್ಲಿ ಕೃಷಿಯೇ ನಾಶವಾಗುತ್ತಿದೆ, ಕ್ರೀಡೋತ್ಸವಗಳಿಂದ ಕೃಷಿ ಬದುಕಿನತ್ತ ಜನರು ಮತ್ತೆ ಬರುವಂತಗಲಿ, ಕೆ.ಎಸ್ ನಿತ್ಯಾನಂದ ಸ್ವಾಮಿಯವರು ಪ್ರಾರಂಬಿಸಿದ ಈ ಕ್ರೀಡೋತ್ಸವ ಇಂದು ಉಭಯ ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಈ ಕಾರ್ಯ ಸಾರ್ಥಕವಾಗಿದೆ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ ಸಾವಂತರು ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವರ ಬಾಕಿಮಾರು ಗದ್ದೆಯಲ್ಲಿ ಶನಿವಾರ ಆರನೇ ವರ್ಷದ ತುಳುನಾಡು ಕೃಷಿ ಜಾನಪದೋತ್ಸವ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಪಾವಂಜೆ ಕೃಷಿಕ ವಿಠಲ ದೇವಾಡಿಗ ಕೆಸರು ಗದ್ದೆಗೆ ತೀರ್ಥ ಕಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಸತ್ಯಜಿತ್ ಸುರತ್ಕಲ್, ಚಿಕ್ಕ ಮಗಳೂರು ವೇದ ವಿಜ್ಞಾನ ಮಂದಿರದ ವೇದ ಕೃಷಿಕ ಕೆ. ಎಸ್. ನಿತ್ಯಾನಂದ, ಹಳೆಯಂಗಡಿ ಪಂಚಾಯಿತಿ ಅದ್ಯಕ್ಷೆ ಜಲಜ, ಕಟೀಲು ದೇವಳ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ, ಪಾವಂಜೆ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಡಾ. ಯಾಜಿ ನಿರಂಜನ ಭಟ್, ಮಂಗಳೂರು ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಗುರುಪುರ ಗೋಳಿದಡಿಗುತ್ತು ಗುರಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರತಿಭಾ ಕುಳಾಯಿ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಚಂದ್ರಶೇಖರ ನಾನಿಲ್, ರಾಮಚಂದ್ರ ಶಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-18061601
Kinnigoli-18061602 Kinnigoli-18061603 Kinnigoli-18061605 Kinnigoli-18061604 Kinnigoli-18061607 Kinnigoli-18061606

Comments

comments

Comments are closed.

Read previous post:
Kinnigoli--17061602
ಕಿನ್ನಿಗೋಳಿ – ಸಿ. ಸಿ. ಕ್ಯಾಮರ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿ ಮುಖ್ಯ ರಸ್ತೆಯ ಬಸ್ ಸ್ಟಾಂಡ್ ಗೆ ತಿರುಗುವ ಸರ್ಕಲ್ ನಲ್ಲಿ ಮೂರು ಸಿ.ಸಿ ಕ್ಯಾಮರ ಅಳವಡಿಸಿದ್ದು ಉದ್ಘಾಟನೆಯನ್ನು ಮಂಗಳೂರು ಸಂಚಾರಿ ವಿಭಾಗದ ಎಸಿಪಿ. ಉದಯ್ ನಾಯಕ್...

Close