ವಿಜಯಾ ಬ್ಯಾಂಕ್ ಕೃಷಿಸಾಲ ಅಭಿಯಾನ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ಕೃಷಿಕರಿಗೆ ಕೃಷಿ ಸಾಲ ಅಭಿಯಾನ ಯೋಜನೆ ಹಮ್ಮಿಕೊಂಡು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಮೂಡುವಂತೆ ಬ್ಯಾಂಕ್ ಪ್ರಯತ್ನಿಸುತ್ತಿದೆ. ಕೃಷಿಕರು ಸದುಪಯೋಗ ಪಡಿಸಿ ಅಭಿವೃದ್ಧಿ ಹೊಂದಬೇಕು ಎಂದು ವಿಜಯಾ ಬ್ಯಾಂಕ್ ಡಿಜಿಎಮ್ ಕೆ. ಎಸ್. ಹೆಗ್ಡೆ ಹೇಳಿದರು.
ಸೋಮವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕೃಷಿ ಸಾಲ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವರ್ಷ 300 ಕೋಟಿ ರೂ ಬ್ಯಾಂಕ್ ಮೂಲಕ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ನೀಡಿದೆ. ಬಿಪಿಎಲ್ ಕುಟುಂಬಗಳಿಗೆ ಸರಕಾರ ವಿಶೇಷ ಸಹಾಯಧನ ನೀಡುತ್ತಿದೆ. ಕೃಷಿ ಚಟುವಟಿಕೆಗಳಿಗೆ ವಾರ್ಷಿಕ ಶೇ. 7 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದರು.
ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು.
ಕಿನ್ನಿಗೋಳಿ ಪರಿಸರದ 7 ಶಾಖೆಗಳ 40 ಕುಟುಂಬಗಳಿಗೆ 1.71 ಕೋಟಿ ಸಾಲ ವಿತರಣೆ ನಡೆಯಿತು. ಈಸಂದರ್ಭ ತರಕಾರಿ ಬೀಜಗಳನು ಫಲಾನುಭಾವಿಗಳಿಗೆ ವಿತರಿಸಲಾಯಿತು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ, ಅತಿಕಾರಿ ಬೆಟ್ಟು ಶಾಖೆಯ ಬ್ಯಾಂಕ್ ಸಂದೀಪ್, ಮೂಲ್ಕಿ ಶಾಖೆಯ ದಿವ್ಯಾ ಶೆಣೈ, ನಿಡ್ಡೋಡಿ ಶಾಖೆಯ ಪವನ್ ಕುಮಾರ್, ಪಕ್ಷಿಕೆರೆ ಶಾಖೆಯ ಸೌಮ್ಯ ಶೆಟ್ಟಿ ಉಪಸ್ಥಿತರಿದ್ದರು.
ದಾಮಸಕಟ್ಟೆ ವಿಜಯಾ ಬ್ಯಾಂಕ್ ಶಾಖಾ ಪ್ರಬಂಧಕ ಸಂತೋಷ್ ಸ್ವಾಗತಿಸಿದರು. ಕಟೀಲು ಶಾಖಾ ಪ್ರಬಂಧಕ ಪ್ರಮೋದ್ ಕಾಮತ್ ವಂದಿಸಿದರು. ಕಿನ್ನಿಗೋಳಿ ವಿಜಯಾ ಬ್ಯಾಂಕ್ ಶಾಖಾ ಪ್ರಬಂದಕ ಅನಿಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-21061602

Comments

comments

Comments are closed.

Read previous post:
Kinnigoli-21061601
ಹುಟ್ಟೂರ ಸಂಮಾನ ಸಮಾರಂಭ

ಕಿನ್ನಿಗೋಳಿ : ಯಕ್ಷಗಾನದ ಮೂಲ ಚೌಕಟ್ಟಿಗೆ ದಕ್ಕೆಯಾಗದಂತೆ ಪರಂಪರೆಯನ್ನು ಉಳಿಸಿ ಬೆಳಸುವ ಹೊಣೆಗಾರಿಕೆ ಕಲಾವಿದನಲ್ಲಿದೆ ಎಂದು ಗುರುಪುರ ಗೋಳಿದಡಿಗುತ್ತು ಗಡಿಕಾರರು ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಹೇಳಿದರು. ಕಿನ್ನಿಗೋಳಿ ಯುಗಪುರುಷ...

Close