ಐಕಳ ಮುಂಚಿಗುಡ್ಡೆ ಗುಡ್ಡೆ ಕುಸಿತ

ಕಿನ್ನಿಗೋಳಿ : ಮಂಗಳವಾರ ಸುರಿದ ಭಾರೀ ಮಳೆಗೆ ಕಿನ್ನಿಗೋಳಿ ಸಮೀಪದ ಐಕಳ ಗ್ರಮ ಪಂಚಾಯಿತಿ ವ್ಯಾಪ್ತಿಯ ಮುಂಚಿಗುಡ್ಡೆ ಕುಂರ್ಬಿಲ್ ಗುತ್ತು ಬಳಿ ಗುಡ್ಡ ಕುಸಿದು ಮಣ್ಣಿನ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದು ಕೆಲವು ಮೀಟರ್‌ಗಳಷ್ಟು ದೂರ ರಿಕ್ಷಾವನ್ನು ಕೆಸರು ಮಣ್ಣಿನೊಂದಿಗೆ ಎಳೆದೊಯ್ದ ಘಟನೆ ನಡೆದಿದೆ.
ರಿಕ್ಷಾ ಪ್ರಯಾಣಿಕ ಕುರುಂಬಿಲ್ ಗುತ್ತು ನಿವಾಸಿ ದೊಡ್ಡಣ್ಣ ಶೆಟ್ಟಿ ಹಾಗೂ ರಿಕ್ಷಾ ಚಾಲಕ ಜೋಯ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ರಿಕ್ಷಾ ಬಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಪಂಚಾಯಿತಿ ಸದಸ್ಯ ಕಿರಣ್ ಐಕಳ ಮತ್ತಿತರರು ಬೇಟಿ ನೀಡಿ ಪರಿಶೀಲಿಸಿದ್ದಾರೆ.

Kinnigoli-21061605 Kinnigoli-21061606

Comments

comments

Comments are closed.