ಹುಟ್ಟೂರ ಸಂಮಾನ ಸಮಾರಂಭ

ಕಿನ್ನಿಗೋಳಿ : ಯಕ್ಷಗಾನದ ಮೂಲ ಚೌಕಟ್ಟಿಗೆ ದಕ್ಕೆಯಾಗದಂತೆ ಪರಂಪರೆಯನ್ನು ಉಳಿಸಿ ಬೆಳಸುವ ಹೊಣೆಗಾರಿಕೆ ಕಲಾವಿದನಲ್ಲಿದೆ ಎಂದು ಗುರುಪುರ ಗೋಳಿದಡಿಗುತ್ತು ಗಡಿಕಾರರು ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಯಕ್ಷಲಹರಿ, ಯುಗಪುರುಷ, ಮತ್ತು ವಿಜಯಕಲಾವಿದರು ಸಂಘಟನೆಯ ಆಶ್ರಯದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ಇದೀಗ 60 ವರ್ಷವನ್ನು ಪೂರೈಸಿರುವ ಯಕ್ಷಗಾನದ ತೆಂಕು ಹಾಗೂ ಬಡಗು ತಿಟ್ಟುಗಳ ಹಾಸ್ಯ ವಿಶಾರದ ಸೀತಾರಾಮ ಕುಮಾರರ ಹುಟ್ಟೂರ ಸಂಮಾನ ಸಮಾರಂಭದಲ್ಲಿ ಮಾತಾನಡಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳದ ಅರ್ಚಕ ಕೆ ಲಕ್ಷ್ಮೀನಾರಾಯಣ ಆಸ್ರಣ್ಣರು ಶುಭ ಹಾರೈಸಿದ್ದರು. ವಿದ್ವಾನ್ ಪಂಜ ಭಾಸ್ಕರ ಭಟ್ ಅಭಿನಂದನಾ ಭಾಷಣಗೈದರು.
ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರಿ, ಶ್ರೀ ಕ್ಷೇತ್ರ ಎಳತ್ತೂರಿನ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಮುಂಬಯಿ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ, ಬೆಂಗಳೂರು ಹೆಗ್ಡೆ ಸೇವಾ ಸಂಘದ ಅಧ್ಯಕ್ಷ ದೇವೇಂದ್ರ ಹೆಗ್ಡೆ, ತೋಕೂರು ಎಂ ಆರ್ ಎಚ್. ಪೂಂಜ ಐಟಿಐ ನ ಪ್ರಾಚಾರ್ಯ ವೈಎನ್ ಸಾಲಿಯಾನ್, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಂಘ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಯಕ್ಷಲಹರಿ ಪಶುಪತಿ ಶಾಸ್ತ್ರೀ, ಶ್ರೀವತ್ಸ, ಉಮೇಶ್ ನೀಲಾವರ, ಸುಧಾಕರ ಕುಲಾಲ್, ಅಶೋಕ್ ಆಚಾರ್ಯ, ವಿಜಯಕಲಾವಿದ ಕಲಾವಿದರಾದ ಸುಧಾಕರ ಸಾಲ್ಯಾನ್, ರಾಜೇಶ್ ಕೆಂಚನಕೆರೆ, ಸೀತಾರಾಮ ಶೆಟ್ಟಿ , ಜಗದೀಶ ಶೆಟ್ಟಿ ಕೆಂಚನಕೆರೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಸೀತಾರಾಮ ಕುಮಾರ್ ಅವರ ವತಿಯಿಂದ ಮಡಾಮಕ್ಕಿ ಮೇಳದ ಅಶಕ್ತ ಕಲಾವಿದ ಚಂದ್ರಶೇಖರ ಅವರಿಗೆ ವೈದ್ಯಕೀಯ ನೆರೆವಿಗಾಗಿ ರೂ ೧೫, ೦೦೦ ನೀಡಲಾಯಿತು. ಕಿನ್ನಿಗೋಳಿ ಯುಗಪುರುಷದ ಕೆ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಸ್ವಾಗತಿಸಿದರು. ಕಿನ್ನಿಗೋಳಿ ವಿಜಯ ಕಲಾವಿದರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ ವಂದಿಸಿದರು. ಯಕ್ಷ ಲಹರಿ ಸಂಸ್ಥೆ ಕಾರ್ಯದರ್ಶಿ ವಸಂತ ದೇವಾಡಿಗ, ರಘುನಾಥ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-21061601

Comments

comments

Comments are closed.

Read previous post:
Kinnigoli-18061606
6ನೇ ವರ್ಷದ ತುಳುನಾಡು ಕೃಷಿ ಜಾನಪದೋತ್ಸವ

ಹಳೆಯಂಗಡಿ: ಕೃಷಿ ಪ್ರಧಾನ ತುಳುನಾಡಿನಲ್ಲಿ ಕೃಷಿಯೇ ನಾಶವಾಗುತ್ತಿದೆ, ಕ್ರೀಡೋತ್ಸವಗಳಿಂದ ಕೃಷಿ ಬದುಕಿನತ್ತ ಜನರು ಮತ್ತೆ ಬರುವಂತಗಲಿ, ಕೆ.ಎಸ್ ನಿತ್ಯಾನಂದ ಸ್ವಾಮಿಯವರು ಪ್ರಾರಂಬಿಸಿದ ಈ ಕ್ರೀಡೋತ್ಸವ ಇಂದು ಉಭಯ...

Close