ಮೆಸ್ಕಾಂ ಇಲಾಖೆ ಅವಾಂತರ ರಿಕ್ಷಾ ಪಲ್ಟಿ

ಮೂಲ್ಕಿ:ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರೋಡಿನಲ್ಲಿ ಲಾರಿ ನಿಲ್ಲಿಸಿ ಲಾರಿಯಿಂದ ವಿದ್ಯುತ್ ಕಂಬಕ್ಕೆ ಬಿಗಿಯಲಾದ ಹಗ್ಗಕ್ಕೆ ರಿಕ್ಷಾ ಡಿಕ್ಕಿಯಾಗಿ ಚಾಲಕ ಗಾಯಗೊಂಡಿದ್ದಾರೆ.
ಮೂಲ್ಕಿ ಕೊಕ್ಕರಕಲ್ ಬಳಿ ರಾಷ್ಟ್ರೀಯ ಹೆದ್ದಾರಿ ಯೋಜನೆ ಸಂದರ್ಭ ಸರ್ವಿಸ್ ರೋಡ್ ಬಳಿ ನಿಲ್ಲಿಸಲಾದ ವಿದ್ಯುತ್ ಕಂಬ ಬಿರುಸಿನ ಮಳೆಗೆ ಮಣ್ಣು ಸಡಿಲಗೊಂಡು ಅಡ್ಡ ಬಿದ್ದಿತ್ತು. ಅದನ್ನು ಸರಿಪಡಿಸಲು ರಸ್ತೆಯ ಇನ್ನೊಂದು ಬದಿಯಲ್ಲಿ ಮೆಸ್ಕಾಂ ಲಾರಿ ನಿಲ್ಲಿಸಿ ಅದಕ್ಕೆ ಹಗ್ಗ ಬಿಗಿದು ಅಲ್ಲಿಂದ ಕಂಬಕ್ಕೆ ಕಟ್ಟಿ ಕಂಬ ಸರಿಪಡಿಸುವ ಅವೈಜ್ಞಾನಿಕ ಯೋಜನೆಯ ನಡೆಯುತ್ತಿರುವಾಗಲೇ ಈ ಬಗ್ಗೆ ತಿಳಿಯದ ರಿಕ್ಷಾಚಾಲಕರು ಈ ರಸ್ತೆಯಾಗಿ ಬಂದಾಗ ರಸ್ತೆಗಡ್ಡ ಕಟ್ಟಲಾಗಿದ್ದ ಹಗ್ಗ ರಿಕ್ಷಾಕ್ಕೆ ಬಡಿದು ರಿಕ್ಷಾ ಪಲ್ಟಿಯಾಗಿದೆ ರಿಕ್ಷಾ ಚಾಲಕ ವಾಮನ ಸಾಲ್ಯಾನ್ ತಲೆಗೆ ತೀವ್ರ ಗಾಯಗೊಂಡಿದ್ದಾರೆ.
ಕಾಮಗಾರಿ ಸಮಯ ರಸ್ತೆ ತಡೆ ನಿರ್ಮಿಸಬೇಕಿತ್ತು ಅಥವಾ ಆರಸ್ತೆಯಲ್ಲಿ ಬರುವವರನ್ನು ಎಚ್ಚರಿಸಲು ಕ್ರಮಕೈಗೊಳ್ಳಬೇಕಿತ್ತು ಅದು ಯಾವುದನ್ನೂ ಮಾಡದೆ ಲಾರಿಗೆ ಹಗ್ಗವನ್ನು ರಸ್ತೆಗಡ್ಡವಾಗಿ ಕಟ್ಟಿ ಕೆಲಸಮಾಡಿದರಿಂದ ಈ ಸಮಸ್ಯೆಯಾಗಿಉದೆ ಎಂದು ರಿಕ್ಷಾ ಚಾಲಕರು ಆರೋಪಿಸಿದ್ದಾರೆ.

Mulki-21061608 Mulki-21061609

Comments

comments

Comments are closed.

Read previous post:
Kinnigoli-21061607
ಬಟ್ಟಕೋಡಿ ಬಲವಿನ ಗುಡ್ಡೆ ರಸ್ತೆಯಲ್ಲಿ ನೀರು

 ಕಿನ್ನಿಗೋಳಿ: ಕಿನ್ನಿಗೋಳಿಯಿಂದ ಶಿಬರೂರು ಸಂಪರ್ಕ ರಸ್ತೆಯ ಬಟ್ಟಕೋಡಿ ಕಾವೇರಿವನದ ಬಳಿ ಮಂಗಳವಾರ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಅರ್ಧದಿಂದ ಒಂದು ಅಡಿ ಮಳೆ ನೀರು ನಿಂತು, ವಾಹನ ಸಂಚಾರ,...

Close