ಬಟ್ಟಕೋಡಿ ಬಲವಿನ ಗುಡ್ಡೆ ರಸ್ತೆಯಲ್ಲಿ ನೀರು

 ಕಿನ್ನಿಗೋಳಿ: ಕಿನ್ನಿಗೋಳಿಯಿಂದ ಶಿಬರೂರು ಸಂಪರ್ಕ ರಸ್ತೆಯ ಬಟ್ಟಕೋಡಿ ಕಾವೇರಿವನದ ಬಳಿ ಮಂಗಳವಾರ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಅರ್ಧದಿಂದ ಒಂದು ಅಡಿ ಮಳೆ ನೀರು ನಿಂತು, ವಾಹನ ಸಂಚಾರ, ಪಾದಾಚಾರಿ ಶಾಲಾ ಮಕ್ಕಳಿಗೆ ರಸ್ತೆಯಲ್ಲಿ ಹೋಗಲು ಸಮಸ್ಯೆ ಉಂಟಾಗಿದೆ. ಕೆಮ್ರಾಲ್ ಗ್ರಾಮ ಪಂಚಾಯಿತಿಗೆ ಒಳ ಪಡುವ ರಸ್ತೆ ಅವ್ಯವಸ್ಥೆಗಳ ಆಗಾರವಾಗಿದೆ. ರಸ್ತೆಯ ಇಕ್ಕಲಗಳಲ್ಲಿ ಸಮರ್ಪಕವಾಗ ಚರಂಡಿ ವ್ಯವಸ್ಥೆ ಇಲ್ಲದಿರುವುದು ಅಲ್ಲದೆ ಈ ಪ್ರದೇಶ ತಗ್ಗಿನಲ್ಲಿ ಇರುವುದು ಮೂಲ ಕಾರಣ. ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ನಿರಂತರ ಸಮಸ್ಯೆ ಕಾಡುತ್ತಿದ್ದು ಪ್ರತೀ ವರ್ಷ ತಾತ್ಕಾಲಿಕ ಪರಿಹಾರ ಆಗುತ್ತಿದ್ದು ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಹಾಗೂ ಜನ ಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.

Kinnigoli-21061607

Comments

comments

Comments are closed.

Read previous post:
Kinnigoli-21061606
ಐಕಳ ಮುಂಚಿಗುಡ್ಡೆ ಗುಡ್ಡೆ ಕುಸಿತ

ಕಿನ್ನಿಗೋಳಿ : ಮಂಗಳವಾರ ಸುರಿದ ಭಾರೀ ಮಳೆಗೆ ಕಿನ್ನಿಗೋಳಿ ಸಮೀಪದ ಐಕಳ ಗ್ರಮ ಪಂಚಾಯಿತಿ ವ್ಯಾಪ್ತಿಯ ಮುಂಚಿಗುಡ್ಡೆ ಕುಂರ್ಬಿಲ್ ಗುತ್ತು ಬಳಿ ಗುಡ್ಡ ಕುಸಿದು ಮಣ್ಣಿನ ರಸ್ತೆಯಲ್ಲಿ ಸಂಚರಿಸುತ್ತಿದ್ದ...

Close