ಕೆಂಚನಕೆರೆ :ವಿಶ್ವ ಯೋಗ ದಿನಾಚರಣೆ

ಕಿನ್ನಿಗೋಳಿ : ದೈಹಿಕ ಕ್ಷಮತೆ, ಮಾನಸಿಕ ಕ್ಷಮತೆ ಹಾಗೂ ಏಕಾಗ್ರತೆಗೆ ಯೋಗ ಸಹಕಾರಿಯಾಗಿದೆ. ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿದಾಗ ಸಂಪೂರ್ಣ ರೋಗ ಮುಕ್ತರಾಗಬಹುದು ಎಂದು ಹಿರಿಯ ಸಾಹಿತಿ ಹಾಗೂ ಯೋಗ ಗುರು ಎನ್. ಪಿ. ಶೆಟ್ಟಿ ಹೇಳಿದರು.
ಮಂಗಳವಾರ ಕೆಂಚನಕೆರೆಯ ಯೋಗಕೇಂದ್ರದಲ್ಲಿ ವಿಶ್ವಯೋಗ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ವಿಶ್ವನಾಥ ರಾವ್, ಉಪೇಂದ್ರ ಆಚಾರ್ಯ ಹಾಗೂ ಮಧು ಆಚಾರ್ಯ ಯೋಗದಿಂದ ತಮ್ಮ ದೈಹಿಕ ಜೀವನದಲ್ಲಿ ಆದ ಲಾಭಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಯೋಗ ಕೇಂದ್ರದ ಮುಖ್ಯಸ್ಥ ಜಯ ಎಮ್ . ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು.

Kinnigoli-21061603

Comments

comments

Comments are closed.

Read previous post:
Kinnigoli-21061602
ವಿಜಯಾ ಬ್ಯಾಂಕ್ ಕೃಷಿಸಾಲ ಅಭಿಯಾನ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ಕೃಷಿಕರಿಗೆ ಕೃಷಿ ಸಾಲ ಅಭಿಯಾನ ಯೋಜನೆ ಹಮ್ಮಿಕೊಂಡು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಮೂಡುವಂತೆ ಬ್ಯಾಂಕ್ ಪ್ರಯತ್ನಿಸುತ್ತಿದೆ. ಕೃಷಿಕರು ಸದುಪಯೋಗ ಪಡಿಸಿ ಅಭಿವೃದ್ಧಿ ಹೊಂದಬೇಕು...

Close