ಐಸ್ರ ತುಳು ಸಮ್ಮೇಳನ

ಮೂಲ್ಕಿ: ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ತುಳುನಾಡಿನ ಸಂಸ್ಕೃತಿ ಸಂಸ್ಕಾರವನ್ನು ಉಳಿಸಲು ಸಾಮೂಹಿಕ ನಾಯಕತ್ವ ಅಗತ್ಯವಿದೆ, ಮಂಗಳೂರಿನಂತಹ ಪಟ್ಟಣದಲ್ಲಿ ಹುಟ್ಟಿದ ತುಳು ಭಾಷೆಯನ್ನು ಹುಟ್ಟೂರಿನಲ್ಲಿ ಬಳಸುವುದು ಕಡಿಮೆ ಆಗಿದೆ ಆದರೆ ಹೊರರಾಜ್ಯ, ವಿದೇಶದಲ್ಲಿ ತುಳು ಭಾಷಾಭಿಮಾನ ಹೆಚ್ಚಿದೆ ಈ ಬಗ್ಗೆ ತುಳು ಸಮ್ಮೇಳನ ನಡೆಸಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಅವರು ತುಳುಪತ್ರಿಕೆ ಟೈಮ್ಸ್ ಆಫ್ ಕುಡ್ಲದ ಸಂಯೋಜನೆಯಲ್ಲಿ ಮೂಲ್ಕಿಯಲ್ಲಿ ಜುಲೈ 23 ಮತ್ತು 24ರಂದು ನಡೆಯುವ ತುಳು ಐಸಿರದ ಐಸ್ರ ತುಳು ಸಮ್ಮೇಳನದ ಶುಭವಾಗಲಿ ಕಟ್ಟಡದಲ್ಲಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮ್ಮೇಳನ ಕಾರ್ಯಾಧ್ಯಕ್ಷ ಮೂಲ್ಕಿ ಚಂದ್ರಶೇಖರ ಸುವರ್ಣ ಪ್ರಸ್ತಾವನೆಗೈದು, ತುಳು ಸಮ್ಮೇಳನವು ಭವಿಷ್ಯದಲ್ಲಿನ ತುಳುನಾಡ ಬಗ್ಗೆ ಚಿಂತನೆ ನಡೆದು, ಮುಂದಿನ ಪೀಳಿಗೆಗೆ ಇದನ್ನು ಉಳಿಸುವ ಬಗ್ಗೆ ಜುಲೈ 23 ಮತ್ತು 24ರಂದು ನಡೆಯುವ ಸಮ್ಮೇಳನ ಬೆಳಕು ಚೆಲ್ಲಲಿದೆ, ಪ್ರತೀ ಮನೆಯಿಂದ ತುಳುವಿನ ಅಭಿಮಾನ ಮೂಡುವಂತಹ ವಾತಾವರಣ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.
ಸಮಿತಿಯ ಸಂಚಾಲಕ ಎಸ್.ಆರ್.ಬಂಡಿಮಾರ್, ಕಚೇರಿ ನಿರ್ವಹಣೆ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಕುಬೆವೂರು, ವಿವಿಧ ಸಮಿತಿಯ ಕೆ.ಭುವನಾಭಿರಾಮ ಉಡುಪ, ಸಂದೀಪ್ ಶೆಟ್ಟಿ ಮರವೂರು, ಡಾ.ಜಗದೀಶ್, ಹರಿಶ್ಚಂದ್ರ ಪಿ. ಸಾಲ್ಯಾನ್, ದೇವಪ್ರಸಾದ ಪುನರೂರು, ನಾಗೇಶ್ ಬಪ್ಪನಾಡು, ರತ್ನ ರಂಜನ್, ಎನ್.ಪಿ.ಶೆಟ್ಟಿ, ಬಬಿತಾ ಶೆಟ್ಟಿ ಕಿನ್ನಿಗೋಳಿ, ದುರ್ಗಾಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್ ಸ್ವಾಗತಿಸಿದರು, ಸಮಿತಿಯ ವಿ.ಕೆ.ಯಾದವ ವಂದಿಸಿದರು, ಪ್ರಧಾನ ಕಾರ್ಯದರ್ಶಿ ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.

Mulki-30061604

Comments

comments

Comments are closed.

Read previous post:
Kinnigoli-22061607
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಿನ್ನಿಗೋಳಿ: ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ಹರಿಪಾದ ಪಕ್ಷಿಕೆರೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು. ಈ ಸಂದರ್ಭ ಕೆಮ್ರಾಲ್ ಗ್ರಾಮ ಪಂಚಾಯಿತಿ...

Close