ಏಕಾಗ್ರತೆ ಹೆಚ್ಚಿಸಲು ಯೋಗ ಅವಶ್ಯಕ

ಕಿನ್ನಿಗೋಳಿ: ದೇಹ ಮತ್ತುಮನಸ್ಸಿನ ನಡುವೆ ಹೊಂದಾಣಿಕೆ ಸಾಧಿಸಲು ಯೋಗ ಅತ್ಯಗತ್ಯ. ಸದೃಡ ಆರೋಗ್ಯ ಮತ್ತು ಏಕಾಗ್ರತೆ ಸಾಧಿಸಲು ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ ಮಾಡಬೇಕು ಎಂದು ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಹೇಳಿದರು.
ಐಕಳ ಪೊಂಪೈ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಎನ್.ಸಿ.ಸಿ ನೌಕಾ ದಳದ ಘಟಕವು ಹಮ್ಮಿಕೊಂಡ ವಿಶ್ವಯೋಗ ದಿನಾಚರಣೆ ಸಂದರ್ಬ ಮಾತನಾಡಿದರು. ಯೋಗ ತರಬೇತುದಾರ ಹರಿರಾಜ್ ಯೋಗದ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಿದರು.
ಎನ್.ಸಿ.ಸಿ ಅಧಿಕಾರಿ ಲೆಪ್ಟಿನೆಂಟ್ ಪುರುಷೋತ್ತಮ ಕೆ.ವಿ. ಪ್ರಸ್ತಾವನೆಗೈದರು. ಈ ಸಂದರ್ಭ ಉಪನ್ಯಾಸಕರಾದ ಪ್ರೊ.ನೇಮಿಚಂದ್ರಗೌಡ, ಚಂದ್ರಕಾಂತ್ ಮತ್ತು ವಿನಯ ಸಿಕ್ವೇರ ಉಪಸ್ಥಿತರಿದ್ದರು. ಎನ್ ಸಿ ಸಿ ಕೆಡೆಟ್ ದೀಕ್ಷಾ ಕೆ ವಂದಿಸಿದರು.

Kinnigoli-22061603

Comments

comments

Comments are closed.

Read previous post:
Mulki-22061602
ಗುರುವಪ್ಪ ಕೋಟ್ಯಾನ್ ಆಯ್ಕೆ

ಮೂಲ್ಕಿ: ಮೂಲ್ಕಿ ವ್ಯಾಪ್ತಿಯ ಒಡೆಯರಬೆಟ್ಟು, ಬಪ್ಪನಾಡು, ಮಾನಂಪಾಡಿ, ಚರಂತಿಪೇಟೆ, ಚಿತ್ರಾಪು,ಲಚ್ಚಿಲ್, ಕೋಟೆಕೊಪ್ಲ ಮೊಗವೀರ ಗ್ರಾಮಸಭೆಗಳನ್ನೊಳಗೊಂಡ ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭೆಯ ನೂತನ ಅಧ್ಯಕ್ಷರಾಗಿ ಮುಂದಿನ 3ವರ್ಷಗಳ ಅವಧಿಗೆ ಚರಂತಿಪೇಟೆ...

Close