ಶಿಕ್ಷಕ/ಪೋಷಕರ ಸಮಾವೇಶ

ಸೂರಿಂಜೆ: ಮಗುವಿನ ಆರೈಕೆಯೊಂದಿಗೆ ಉತ್ತಮ ಸಂಸ್ಕಾರ, ಜ್ಞಾನ ವಿಕಾಸಕ್ಕೆ ಪೂರಕ ವಾತಾವರಣ, ಕುಟುಂಬ, ಸಂಬಂಧಗಳ ಅನುಬಂಧವನ್ನು ಸಾಕ್ಷಾತ್ಕರಿಸುವ ವಿಶೇಷ ಶಕ್ತಿ ತಾಯಿಯಲ್ಲಿದೆ. ಬದಲಾಗುತ್ತಿರುವ ಸನ್ನಿವೇಶಗಳಿಗೆ ಪೂರಕವಾಗಿ ಮಗುವಿನ ಭವಿಷ್ಯದ ಬಗ್ಗೆ ತಾಯಿ ವೈಯುಕ್ತಿಕವಾಗಿ ನೀಡುವ ಕಾಳಜಿ ಅತ್ಯಮೂಲ್ಯವಾದುದು. ಮಗುವಿನ ಶೈಕ್ಷಣಿಕ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಚಿಂತಕ/ಪತ್ರಕರ್ತ ಬಿ.ಪುಂಡಲೀಕ ಮರಾಠೆ ಶಿರ್ವ ನುಡಿದರು.
ಕಿನ್ನಿಗೋಳಿ ಸಮೀಪದ ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಫ್ರೌಢ ಶಾಲಾ ಶಿಕ್ಷಕ/ಪೋಷಕರ ಸಮಾವೇಶದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ, ಎಲೆಕ್ಟ್ರಾನಿಕ್ ಮಾಧ್ಯಮಗಳು ಮಕ್ಕಳ ಮೇಲೆ ವಿಶೇಷ ಪ್ರಭಾವ ಬೀರುತ್ತಿದ್ದು, ಮಕ್ಕಳ ಮೇಲೆ ಅತಿಯಾದ ಮಮತೆ, ಇತರರೊಂದಿಗೆ ಹೋಲಿಕೆಗಳಿಗೆ ಆಸ್ಪದ ಕೊಡದೆ, ಪ್ರಾರ್ಥನೆ, ದೇಶಪ್ರೇಮ, ಪರಸ್ಪರ ಸಹಕಾರ, ಪ್ರೀತಿ, ಕೊಡುವಗುಣ, ಉಪಕಾರಸ್ಮರಣೆ ಮುಂತಾದ ಮೌಲ್ಯಗಳೊಂದಿಗೆ ಮಕ್ಕಳ ನೈಜ ಪ್ರತಿಭೆಗಳನ್ನು ಗುರುತಿಸಿ ಧನಾತ್ಮಕವಾಗಿ ಪ್ರೋತ್ಸಾಹಿಸುವ ಗುಣ ಬೆಳೆಸಬೇಕು. ಮಕ್ಕಳಿಗೆ ಯಾವತ್ತೂ ಆಸ್ತಿಯನ್ನು ಮಾಡಿ ಇಡದೆ, ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸಿದಾಗ ಹೆತ್ತತಂದೆತಾಯಿಗಳ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಕೆ.ಮಾತನಾಡಿ ವಿದ್ಯಾರ್ಥಿಗಳ ಪೋಷಕರು ಪ್ರತೀ ದಿನ ಕನಿಷ್ಟ ಅರ್ಥ ಗಂಟೆಯಾದರೂ ಮಕ್ಕಳ ಬಗ್ಗೆ ವೈಯುಕ್ತಿಕ ಗಮನ ನೀಡಿ ಶಿಕ್ಷಣದ ಪ್ರಗತಿ ಹಾಗೂ ಅವರ ಅಗತ್ಯತೆಯ ಬಗ್ಗೆ ಗಮನ ನೀಡುವುದು ಹಾಗೂ ತಿಂಗಳಿಗೆ ಕನಿಷ್ಟ ಒಮ್ಮೆಯಾದರೂ ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಬಗ್ಗೆ ವಿಚಾರಿಸಿದಾಗ ಮಗುವಿನ ಶೈಕ್ಷಣಿಕ ಸಾಧನೆಯಲ್ಲಿ ಪ್ರಗತಿಯಾಗುತ್ತದೆ ಎಂದರು. ಶಾಲಾ ಸಂಚಾಲಕ ಕೆ.ಎ.ಅಬ್ದುಲ್ಲಾ ಪ್ರಾಸ್ತಾವಿಕ ಮಾತುಗಳಲ್ಲಿ ಕಳೆದ 25 ವರ್ಷಗಳಿಂದ ಸಂಸ್ಥೆಯ ಸಾಧನೆಯನ್ನು ವಿವರಿಸಿ ಪ್ರಸ್ತುತ ವರ್ಷ 601 ಅಂಕಗಳಿಸಿದ ಬಿಬಿ ಜೆಝಿಲ್ಲಾರನ್ನು ಅಭಿನಂದಿಸಿ, ನೂತನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 601 ಅಂಕಗಳಿಗಿಂತ ಹೆಚ್ಚು ಅಂಕ ಗಳಿಸುವ ಪ್ರತೀಯೊಬ್ಬ ವಿದ್ಯಾರ್ಥಿಗೂ ರೂ. ಹತ್ತು ಸಾವಿರ ನಗದು ಪುರಸ್ಕಾರ ನೀಡಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಉಪಾಧ್ಯಕ್ಷ ಖಾದರ್ ಮಿಲನ್ ವಹಿಸಿದ್ದರು.

ಟಿ.ಇಸ್ಮಾಯಿಲ್, ಟಿ.ಸಯೀದ್, ಅನಿವಾಸಿ ಭಾರತೀಯರಾದ ಮೊಹಮ್ಮದ್ ಫೈಸಲ್ ದುಬಾ, ಮೊಹಮ್ಮದ್ ರಫೀಕ್ ಪಾಂಜಾ ಜುಬೈಲ್, ಅಬ್ದುಲ್ ಮಲಿಕ್ ಕಟ್ಟಾಹುನಿ ಕುವೈಟ್, ಯಾಕೂಬ್ ಮಿಲನ್ ಅರೇಬಿಯಾ, ಸೈಯದ್ ಅಬ್ದುಲ್ ಹಮೀದ್ ಜುಬೈಲ್, ಸೈಯದ್ ಶರೀಫ್ ಜೆಡ್ಡಾ, ಕಾರ್ಯದರ್ಶಿ ಬಿ.ಎಚ್.ಸೂರಿಂಜೆ,ಜತೆ ಕಾರ್ಯದರ್ಶಿ ಕೆ.ಎಮ್.ಉಸ್ಮಾನ್, ಕೋಶಾಧಿಕಾರಿ ಎ.ಕೆ.ತೋಕೂರ್, ಶಾಲಾ ಶಿಕ್ಷಕ,ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಮಲ್ಲಿಕಾ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿದರು. ದಯಾವತಿ ಪರಿಚಯಿಸಿದರು. ಮಂಗಳಾ ಧನ್ಯವಾದವಿತ್ತರು.

Surinje-22061601

Comments

comments

Comments are closed.

Read previous post:
Mulki-21061608
ಮೆಸ್ಕಾಂ ಇಲಾಖೆ ಅವಾಂತರ ರಿಕ್ಷಾ ಪಲ್ಟಿ

ಮೂಲ್ಕಿ:ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರೋಡಿನಲ್ಲಿ ಲಾರಿ ನಿಲ್ಲಿಸಿ ಲಾರಿಯಿಂದ ವಿದ್ಯುತ್ ಕಂಬಕ್ಕೆ ಬಿಗಿಯಲಾದ ಹಗ್ಗಕ್ಕೆ ರಿಕ್ಷಾ ಡಿಕ್ಕಿಯಾಗಿ ಚಾಲಕ ಗಾಯಗೊಂಡಿದ್ದಾರೆ. ಮೂಲ್ಕಿ ಕೊಕ್ಕರಕಲ್ ಬಳಿ ರಾಷ್ಟ್ರೀಯ ಹೆದ್ದಾರಿ...

Close