ದೇಶದ ಅಭಿವೃದ್ದಿಗೆ ಧಾರ್ಮಿಕ ಪ್ರಜ್ಞೆ ಅಗತ್ಯ

ಮೂಲ್ಕಿ: ಅತೀ ಎಳೆಯ ವಯಸ್ಸಿನಲ್ಲಿ ಕಠಿಣ ಪರಿಶ್ರಮದಿಂದ ಆಧ್ಯಾತ್ಮ ಜ್ಞಾನ ಸಂಪಾದನೆ ಮಾಡಿ ಅಂತರಾಷ್ತ್ರೀಯ ಮಟ್ಟದಲ್ಲಿ ಪ್ರಾಚೀನ ಕಲೆಯಾದ ಜ್ಯೋತಿಷ್ಯ,,ವಾಸ್ತು ಮತ್ತು ಯೋಗವನ್ನು ಪಸರಿಸಿ ಆಧ್ಯಾತ್ಮಿಕ ಶಕ್ತಿಯಿಂದ ಭವಿಷ್ಯದ ಆಗು ಹೋಗುಗಳನ್ನು ತಿಳಿಸಿ ಲಕ್ಷಾಂತರ ಭಕ್ತರ ಸಮಸ್ಯೆಗಳನ್ನು ಬಗೆಹರಿಸುತ್ತಿರುವ ವಾಸ್ತು ತಜ್ಞ,ಆಧ್ಯಾತ್ಮಿಕ ಗುರು,ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ನಮ್ಮ ದೇಶದ ದೊಡ್ಡ ಆಸ್ತಿಯೆಂದು ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ೪೧ ನೇ ಪೀಠಾಧಿಪತಿ ಶ್ರೀ ಶ್ರೀ ಶ್ರೀ ನಾರಾಯಣ ರಾಮಾನುಜಾಚಾರ್ಯ ಹೇಳಿದರು.
ಬೆಂಗಳೂರಿನಲ್ಲಿರುವ ಯದುಗಿರಿ ಯತಿರಾಜ ಮಠದಲ್ಲಿ ಜರಗಿದ ಸಮಾರಂಭದಲ್ಲಿ ಆಧ್ಯಾತ್ಮಿಕ ಗುರು,ವೈಜ್ಞಾನಿಕ ಜ್ಯೋತಿಷಿ,ವಾಸ್ತು ತಜ್ಞ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಗೆ ಶ್ರೀ ರಾಮಾನುಜಾಚಾರ್ಯವಿಶ್ವ ಮಾನವ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಅವರು ಶ್ರೀ ಚಂದ್ರಶೇಖರ ಸ್ವಾಮೀಜಿಯವರಲ್ಲಿ ವಿಶಿಷ್ಠ ಶಕ್ತಿಯಿದ್ದು ಅವರು ಸಮಾಜದ ಒಳಿತಿಗೆ ಸದಾ ಚಿಂತನೆ ನಡೆಸುತ್ತಿದ್ದಾರೆ.ಅವರಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳು ಮೂಡಿ ಬರಲೆಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ದೇಶದಲ್ಲೆಡೆ ಜನರಲ್ಲಿ ಆಭದ್ರತೆ ಕಾಡುತ್ತಿದ್ದು ಒಬ್ಬರನ್ನೊಬ್ಬರು ದ್ವೇಷಿಸುವ ವಾತಾವರಣ ಮೂಡಿದೆ.ಧಾರ್ಮಿಕ ಚಿಂತನೆ ಹಾಗೂ ಕುಟುಂಬ ಸಾಮಾರಸ್ಯಗಳು ಕಡಿಮೆಯಾಗುತ್ತಿದೆ.ಮನುಷ್ಯನ ಸ್ವಾರ್ಥದಿಂದಾಗಿ ಪರಿಸರ ಅಸಮತೋಲನದಿಂದಾಗಿ ಪ್ರಕೃತಿಯಲ್ಲಿ ಏರು ಪೇರು ಉಂಟಾಗುತ್ತಿದ್ದು ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ಧಾರ್ಮಿಕ ಪ್ರಜ್ಞೆ ಮೂಡಿದಾಗ ಸರಿಯಾಗಿ ಮಳೆ ಬೆಳೆಯಾಗಿ ದೇಶ ಅಭಿವೃದ್ದಿ ಹೊಂದಲು ಸಾಧ್ಯವೆಂದು ಹೇಳಿದರು.ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಮತ್ತು ರಜನಿ ಚಂದ್ರಶೇಖರ್ ರವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರನ್ನು ಪೂರ್ಣ ಕುಂಭ ಮೂಲಕ ಸ್ವಾಗತಿಸಲಾಯಿತು.
ಸಮಾರಂಭದಲ್ಲಿ ಸರ್ಕಾರದ ವಿಶೇಷ ಅಧಿಕಾರಿ ಜೆ ಎಂ ತಿಪ್ಪೇಸ್ವಾಮಿ,ಅಡಿಗಾಸ್ ಹೋಟೇಲಿನ ಮಾಲಕರಾದ ರಾದಕೃಷ್ಣ ಅಡಿಗ,ಕಾನೂನು ಸಲಹೆಗಾರ ಎಂ ಎಸ್ ಶ್ಯಾಮಸುಂದರ್,ನಿವೃತ್ತ ಐ ಎ ಎಸ್ ಅಧಿಕಾರಿ ಡಿ ವೆಂಕಟೇಶ್ವರ ರಾವ್,ವಿಜಯ ಕುಮಾರ್,ಮಂಜುನಾಥ ಗೌಡ ಉಪಸ್ತಿತರಿದ್ದರು.
ಮಠದ ಹಿರಿಯ ವಿದ್ವಾನ್ ರಂಗಾಚಾರ್ಯರು ನಿರೂಪಿಸಿದರು.

Mulki-23061601

Comments

comments

Comments are closed.

Read previous post:
Mulki-30061604
ಐಸ್ರ ತುಳು ಸಮ್ಮೇಳನ

ಮೂಲ್ಕಿ: ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ತುಳುನಾಡಿನ ಸಂಸ್ಕೃತಿ ಸಂಸ್ಕಾರವನ್ನು ಉಳಿಸಲು ಸಾಮೂಹಿಕ ನಾಯಕತ್ವ ಅಗತ್ಯವಿದೆ, ಮಂಗಳೂರಿನಂತಹ ಪಟ್ಟಣದಲ್ಲಿ ಹುಟ್ಟಿದ ತುಳು ಭಾಷೆಯನ್ನು ಹುಟ್ಟೂರಿನಲ್ಲಿ ಬಳಸುವುದು ಕಡಿಮೆ ಆಗಿದೆ...

Close