ಅಮ್ಮುಂಜೆ ರಜತ ಪರ್ವ : ಯಕ್ಷಗಾನ ಜ್ಞಾನ ಪದ ಕಲೆ

ಕಟೀಲು : ಯಕ್ಷಗಾನ ಸಾಂಸ್ಕೃತಿಕ ಮತ್ತು ಜಾನಪದ ಕಲೆಯಾಗಿರದೆ ಜ್ಞಾನ ಪದ ಕಲೆಯಾಗಿದೆ. ಯಕ್ಷಗಾನ ಕಲಾವಿದರು ಜ್ಞಾನ ಸಂಪತ್ತು, ಶಬ್ದ ಭಂಡಾರ ಹಾಗೂ ಹೃದಯ ಶ್ರೀಮಂತಿಕೆಯನ್ನು ರೂಢಿಸಿಕೊಂಡಿರುವ ಕಾರಣ ಯಕ್ಷಗಾನ ಕ್ಷೇತ್ರ ಶ್ರೀಮಂತವಾಗಿದೆ. ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಶಿಕ್ಷಣ ನೀಡುವುದರಿಂದ ಭದ್ರವಾದ ಸಾಂಸ್ಕೃತಿಕ ನೆಲೆಗಟ್ಟು ನಿರ್ಮಾಣವಾಗುತ್ತದೆ ಎಂದು ಕಟೀಲು ದೇವಳ ಅನುವಂಶೀಯ ಅರ್ಚಕ ವೆ.ಮೂ. ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು.

ಯಕ್ಷಗಾನ ಕಲಾವಿದ ಬಿ. ಮೋಹನ್‌ಕುಮಾರ್ ಅಮ್ಮುಂಜೆ ಅವರು ಕಟೀಲು ಮೇಳದಲ್ಲಿ ೨೫ ವರ್ಷಗಳ ಸಾರ್ಥಕ ಕಲಾ ಸೇವೆ ನೀಡಿದ ಸವಿ ನೆನಪಿಗಾಗಿ ಕಟೀಲು ದೇವಳ ಪದವಿ ಪೂರ್ವ ಕಾಲೇಜು ಬಯಲು ರಂಗಮಂಟಪದಲ್ಲಿ ಶನಿವಾರ ನಡೆದ ಅಮ್ಮುಂಜೆ ರಜತ ಪರ್ವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಅಮ್ಮುಂಜೆಯವರ ಕಲಾಯಾನದ ರೂವಾರಿಗಳಾದ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಶ್ಯಾಮಲ ಗಣಪತಿ ಶಾಸ್ತ್ರಿ ದಂಪತಿಗಳು ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭ ಕುರಿಯ ಗಣಪತಿ ಶಾಸ್ತ್ರಿದಂಪತಿಗಳು ಹಾಗೂ ಯಕ್ಷಕವಿ ಗಣೇಶ ಕೊಲಕಾಡಿ ಅವರನ್ನು ಸನ್ಮಾನಿಸಲಾಯಿತು. ಸೇರಜೆ ಸೀತಾರಾಮ ಭಟ್ ಅಭಿನಂದನಾ ಭಾಷಣಗೈದರು.
ಅಮ್ಮುಂಜೆ ಜೀವನವನ್ನು ಆಧರಿಸಿದ ಸಾಕ್ಷ ಚಿತ್ರ ಮೋಹನಾಂತರಂಗ ಸಿಡಿ ಯನ್ನು ಕಮಲಾದೇವಿಪ್ರಸಾದ ಆಸ್ರಣ್ಣ ಬಿಡುಗಡೆಗೊಳಿಸಿದರು. ಸಿಡಿ ನಿರ್ಮಾಣಕ್ಕೆ ಸಹಕರಿಸಿದ ಸರಸ್ವತಿ ಎರ್ಮಾಳ್ ಹಾಗೂ ಅಮಿತ್‌ಕುಮಾರ್ ಬಜ್ಪೆ ಅವರನ್ನು ಗೌರವಿಸಲಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟೀಲು ದೇವಳ ಅನುವಂಶಿಕ ಅರ್ಚಕ ಶ್ರೀ ವೆ.ಮೂ. ಹರಿನಾರಾಯಣದಾಸ ಆಸ್ರಣ್ಣ ವಹಿಸಿದ್ದರು.
ಈ ಸಂದರ್ಭ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಎಕ್ಕಾರು, ಕಟೀಲು ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ, ಮಂಗಳೂರು ಯಕ್ಷದ್ರುವ ಪಟ್ಲ ಪೌಂಡೇಶನ್ ಉಪಾಧ್ಯಕ್ಷ ಸುಧೀಂದ್ರ ರಾವ್ ಎಕ್ಕಾರು, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಸಿವಿಲ್ ಕಂಟ್ರಾಕ್ಟರ್ ದೊಡ್ಡಯ್ಯ ಮೂಲ್ಯ, ಅಮ್ಮುಂಜೆ ರಜತ ಪರ್ವ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಬೆಳ್ಚಡ, ಅಧ್ಯಕ್ಷ ರಾಜೀವ ಕೆ. ಕೈಕಂಬ, ಪ್ರಧಾನ ಸಂಚಾಲಕ ಬಿ. ಜನಾರ್ದನ ಅಮ್ಮುಂಜೆ, ಅಮ್ಮುಂಜೆ ಅಭಿಮಾನಿವೃಂದ ಗೌರವ ಅಧ್ಯಕ್ಷ ಎಂ.ಎಲ್. ಭಟ್ ಸಾಗರ, ಅಧ್ಯಕ್ಷ ಸತೀಶ್ ಭಟ್ ಬೆಂಗಳೂರು, ಶ್ರೀನಿವಾಸ್‌ರಾವ್ ಮೈಸೂರು, ಪಟ್ಲಗುತ್ತು ಮಹಾಬಲ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಮೋಹನ್ ಕುಮಾರ್ ಅಮ್ಮುಂಜೆ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
ರಜತ ಪರ್ವ ಸಮಿತಿ ಪ್ರಧಾನ ಸಂಚಾಲಕ ಬಿ. ಜನಾರ್ದನ ಅಮ್ಮುಂಜೆ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಮಂಗಳೂರು ಹಾಗೂ ರವಿ ಅಲೆವುರಾಯ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನ ಕಟೀಲು ದೇವಳದಲ್ಲಿ ಪ್ರಾರ್ಥನೆ, ಗೆಜ್ಜೆ ಸೇವೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ನಂತರ ಹಳೆಬೇರು ಹೊಸ ಚಿಗುರು ಶೀರ್ಷಿಕೆಯಡಿ ತೆಂಕು ಬಡಗು ತಿಟ್ಟಿನ ಪ್ರಸಿದ್ಧ 6 ಭಾಗವತರಿಂದ ಯಕ್ಷಗಾನಾಮೃತ ನಡೆಯಿತು. ಬಳಿಕ ಶ್ರೀ ಕೃಷ್ಣ ಜನ್ಯ ಕಾಳಿಂಗ ಮರ್ಧನ ಶ್ರೀ ಕೃಷ್ಣ ಲೀಲೆ ಯಕ್ಷಗಾನ ಬಯಲಾಟ ನಡೆಯಿತು.

Kateel-25061601 Kateel-25061602 Kateel-25061603 Kateel-25061604

Comments

comments

Comments are closed.

Read previous post:
Kateel-24061610
ಕಟೀಲು ಪುಸ್ತಕ ಬ್ಯಾಗ್ ಕೊಡೆ ವಿತರಣೆ

ಕಟೀಲು: ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಧ್ಯಾರ್ಥಿಗಳಿಗೆ ಕಟೀಲು ಗ್ರಾ.ಪಂ ವತಿಯಿಂದ ಪುಸ್ತಕ, ಬ್ಯಾಗು, ಕೊಡೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಕಟೀಲು ಗ್ರಾ.ಪಂ...

Close