ಅಮ್ಮುಂಜೆ ರಜತ ಪರ್ವ, ಸನ್ಮಾನ

ಕಟೀಲು : ಯಕ್ಷಗಾನ ಅಧ್ಯಯನಕ್ಕಾಗಿ ಅಕಾಡೆಮಿಯಲ್ಲಿ ರೂ. ಒಂದು ಲಕ್ಷಕ್ಕೂ ಹೆಚ್ಚು ಫೆಲೋಶಿಪ್ ನೀಡುತ್ತಿದ್ದು ಆಸಕ್ತರು ಯಕ್ಷಗಾನ ಅಧ್ಯಯನ ಸಂಶೋಧನೆಗೆ ಮುಂದಾಗಬೇಕು. ಮೋಹನ್ ಅಮ್ಮುಂಜೆ ಅವರ ೨೫ ವರ್ಷಗಳ ಕಲಾಸೇವೆ ಅಭಿನಂದನೀಯ. ಮುಂದಿನ ವರ್ಷದಲ್ಲಿ ಇನ್ನು ೨೫ ಹೊಸ ಕಲಾವಿದರು ಸೃಷ್ಠಿಯಾಗಬೇಕು ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ನಾಲ್ಕು ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಹೇಳಿದರು.

ಶನಿವಾರ ಕಟೀಲು ದೇವಳ ಪದವಿ ಪೂರ್ವ ಕಾಲೇಜು ಬಯಲು ರಂಗಮಂಟಪದಲ್ಲಿ ನಡೆದ ಯಕ್ಷಗಾನ ಕಲಾವಿದ ಬಿ. ಮೋಹನ್ ಕುಮಾರ್ ಅಮ್ಮುಂಜೆ ರಜತಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಮ್ಮುಂಜೆಯವರನ್ನು ರಂಗದಲ್ಲಿ ಬೆಳೆಸಿದ ಹಿರಿಯ ಕಲಾವಿದರಾದ ನಿಡ್ಲೆ ಗೋವಿಂದ ಭಟ್, ಡಾ. ಶ್ರೀಧರ ಭಂಡಾರಿ ಪುತ್ತೂರು, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಮುಂಡ್ಕೂರು ಜಯರಾಮ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಪುಂಡರೀಕಾಕ್ಷ ಉಪಾಧ್ಯಾಯ, ಕೈರಂಗಳ ಕೃಷ್ಣ ಮೂಲ್ಯ, ಗುಂಡಿಮಜಲು ಗೋಪಾಲ ಭಟ್, ದಿವಾಣ ಶಿವಶಂಕರ ಭಟ್ ಅವರನ್ನು ಅಭಿನಂದಿಸಲಾಯಿತು.

ಅಮ್ಮುಂಜೆಯವರ ಕಲಾಬದುಕಿನ ಶಿಲ್ಪಿಗಳಾದ ಕುರಿಯ ಗಣಪತಿ ಶಾಸ್ತ್ರಿ, ಗುಂಡಿಲಗುತ್ತು ಶಂಕರ ಶೆಟ್ಟಿ, ಡಾ. ಕೋಳ್ಯೂರು ರಾಮಚಂದ್ರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ, ಪಟ್ಲ ಸತೀಶ್ ಶೆಟ್ಟಿ, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ, ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶರಾವ್, ಗಣೇಶ್ ಕೊಲಕಾಡಿ, ನರೇಂದ್ರ ಮಾಸ್ಟರ್ ಧರ್ಮಸ್ಥಳ, ವಿಷ್ಣುಶರ್ಮ ವಾಟೆಪಡ್ಪು ಹಾಗೂ ಕಟೀಲು ಆಸ್ರಣ್ಣ ಬಂದುಗಳಾದ ವಾಸುದೇವ ಆಸ್ರಣ್ಣ , ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರನ್ನು ಸನ್ಮಾನಿಸಲಾಯಿತು.

ಅಮ್ಮುಂಜೆ ಅವರ ವೈಯಕ್ತಿಕ ಬದುಕಿಗೆ ಬೆಳಕಾದವರಾದ ಡಾ. ರಾಮ ಭಟ್, ರಘುರಾಮ ಶೆಟ್ಟಿ, ಪ್ರಭಾಕರ ಡಿ. ಸುವರ್ಣ, ಬಾಲಕೃಷ್ಣ ಅಮೀನ್, ಅಬೂಬಕ್ಕರ್ ಡಿ.ಎ. ಅಮ್ಮುಂಜೆ ಶ್ರೀನಾಥ್ ಕದ್ರಿ, ದಾಮೋದರ್ ಬಜಪೆ, ಪ್ರಶಾಂತ ಪೂಜಾರಿ, ರಘು ಶೆಟ್ಟಿ ನಾಳ ಅವರನ್ನು ಅಭಿನಂದಿಸಲಾಯಿತು. ರಚನ್‌ಕುಮಾರ್ ಎಕ್ಕಾರು ಗೌರವಾರ್ಪಣೆ ಹಾಗೂ ದಿ. ನಾಳ ಮೋಹನ್ ಶೆಟ್ಟಿ ಅವರನ್ನು ಮರಣೋತ್ತರ ನೆಲೆಯಲ್ಲಿ ಅವರ ಪತ್ನಿಗೆ ಗೌರವಾರ್ಪಣೆ ಮಾಡಲಾಯಿತು.

ರಜತ ಪರ್ವ ಸಮಿತಿ ಹಾಗೂ ಅಮ್ಮುಂಜೆ ಅಭಿಮಾನಿ ವೃಂದ (ವಾಟ್ಟಾಪ್ ಬಳಗ)ದವರಿಂದ ಅಮ್ಮುಂಜೆ ದಂಪತಿಗೆ ರಜತಾಭಿನಂಧನ ಹಾಗೂ ನಿಧಿ ಸಮರ್ಪಣೆ ನಡೆಯಿತು. ಯಕ್ಷದ್ಯುಮಣಿ ಬಿರುದು ನೀಡಲಾಯಿತು. ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ನುಡಿಯನ್ನಾಡಿದರು.

ಸನ್ಮಾನ, ಗೌರವಾರ್ಪಣೆ, ಅಭಿನಂದನೆ ಹಾಗೂ ಹಿರಿಯ ಕಲಾವಿದರು, ಕಲಾ ಬದುಕಿನ ರೂವಾರಿಗಳಿಗೆ ಸಹಿತ 100 ಮಂದಿಯನ್ನು ಗೌರವಿಸಲಾಯಿತು.

ಅಮ್ಮುಂಜೆ ದಶಶ್ರೀ ಸಿಡಿಯನ್ನು ಕಟೀಲು ದೇವಳ ಅನುವಂಶೀಯ ಅರ್ಚಕ ವಾಸುದೇವ ಆಸ್ರಣ್ಣ ಬಿಡುಗಡೆಗೊಳಿಸಿದರು.
ಈ ಸಂದರ್ಭ ದ.ಕ. ಸಂಸದ ಸಂಸದ ನಳಿನ್‌ಕುಮಾರ್ ಕಟೀಲು, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸಸಿಹಿತ್ಲು ದೇವಳ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಚೆಂದ್ರಶೇಖರ ಬೆಲ್ಚಡ, ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಮಾಜಿ ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಡಾ| ಶಶಿಕುಮಾರ್ ಕಟೀಲು, ಮಣಿಪಾಲದ ಪ್ರಾಧ್ಯಾಪಕಿ ಡಾ.  ಶೈಲಜಾ ಎಸ್, ಕಟೀಲು ಗ್ರಾ. ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ವಿ. ಶ್ರೀನಿವಾಸ ರಾವ್ ಮೈಸೂರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಯಗಪುರುಷದ ಕೆ. ಭುವನಾಭಿರಾಮ ಉಡುಪ, ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಲೀಲಾಕ್ಷ ಕರ್ಕೇರ, ಭುಜಬಲಿ ಧರ್ಮಸ್ಥಳ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಅಮ್ಮುಂಜೆ ರಜತ ಪರ್ವ ಸಮಿತಿಯ ಗೌರವ ಸಲಹೆಗಾರ ಶ್ರೀ ಹರಿನಾರಾಯಣ ಆಸ್ರಣ್ಣ, ಅಧ್ಯಕ್ಷ ರಾಜೀವ ಕೆ. ಕೈಕಂಬ, , ಅಮ್ಮುಂಜೆ ಅಭಿಮಾನಿವೃಂದ ಅಧ್ಯಕ್ಷ ಸತೀಶ್ ಭಟ್ ಬೆಂಗಳೂರು, ಸತೀಶ್ ಭಟ್ ಬೆಂಗಳೂರು, ರವಿ ಅಲೆವೂರಾಯ, ಸತೀಶ್ ಭಂಡಾರಿ ಕಟೀಲು ಉಪಸ್ಥಿತರಿದ್ದರು.
ಅಮ್ಮುಂಜೆ ರಜತ ಪರ್ವ ಸಮಿತಿ ಸಂಚಾಲಕ ಬಿ. ಜನಾರ್ಧನ ಅಮ್ಮುಂಜೆ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಂದ್ರಪ್ರಸಾದ್ ಎಕ್ಕಾರು ವಂದಿಸಿದರು. ದಯಾನಂದ ಕತ್ತಲಸಾರ್ ಕಾರ್ಯಕ್ರಮ ನಿರೂಪಿಸಿದರು.
ಅಮ್ಮುಂಜೆ ಜೀವನವನ್ನು ಆಧರಿಸಿದ ಸಾಕ್ಷ ಚಿತ್ರ ಮೋಹನಾಂತರಂಗ ಪ್ರದರ್ಶನ ನಡೆಯಿತು. ಬಳಿಕ ಯಕ್ಷಲೋಕದ ದಿಗ್ಗಜರಿಂದ ಶ್ರೀ ಕೃಷ್ಣ ಲೀಲಾಮೃತಂ ಬಯಲಾಟ ನಡೆಯಿತು

Kateel-26061601 Kateel-26061602 Kateel-26061603 Kateel-26061604 Kateel-26061605

 

Comments

comments

Comments are closed.

Read previous post:
Kinnigoli--25061602
ಕಿಲೆಂಜೂರು ಮನೆ ಕುಸಿತ ಹಾನಿ

ಕಿನ್ನಿಗೋಳಿ: ಶುಕ್ರವಾರ ಸುರಿದ ಭಾರಿ ಮಳೆಗೆ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರು ಗ್ರಾಮದ ಬಲವಿನಗುಡ್ಡೆ ನಿವಾಸಿ ಭವಾನಿ ಆಚಾರ್ಯ ಅವರ ಮನೆ ಕುಸಿದು ಸುಮಾರು ಒಂದೂವರೆ ಲಕ್ಷ...

Close