ಅತ್ತೂರು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ಜನರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಂಘಟಶಾ ಶಕ್ತಿ ಬೆಳೆಸಿ ಉಳಿತಾಯ ಮನೋಭಾವನೆದಿಂದ ಆರ್ಥಿಕ ಪ್ರಗತಿ ಹೊಂದುತ್ತಿದ್ದಾರೆ. ಎಂದು ಮಂಗಳೂರು ಜನಜಾಗೃತಿ ವೇದಿಕೆ ಸದಸ್ಯ ಧನಂಜಯ ಶೆಟ್ಟಿಗಾರ್ ಹೇಳಿದರು.
ಭಾನುವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಅತ್ತೂರು ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಿನ್ನಿಗೋಳಿ ವಲಯದಿಂದ ವರ್ಗಾವಣೆಗೊಂಡ ಧ.ಗ್ರಾ. ಯೋಜನಾ ಮೇಲ್ವಿಚಾರಕ ಸತೀಶ್ ಅವರನ್ನು ಗೌರವಿಸಲಾಯಿತು.
ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಆನಂದ ಬಂಗೇರ, ನೂತನ ಅಧ್ಯಕ್ಷ ಆನಂದ ಶೆಟ್ಟಿ, ಸುರಗಿರಿ ದೇವಳದ ಪ್ರಧಾನ ಅರ್ಚಕ ವಿಶ್ವೇಶ ಭಟ್, ಕೆಮ್ರಾಲ್ ಗ್ರಾ. ಪಂ. ಪಿಡಿಒ ರಮೇಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.
ದಯಾನಂದ ಸ್ವಾಗತಿಸಿ ಸೇವಾ ಪ್ರತಿನಿಧಿ ವಿನಯಲತಾ ವರದಿ ವಾಚಿಸಿದರು. ಸೌಮ್ಯ ವಂದಿಸಿದರು. ಮೇಲ್ವಿಚಾರಕಿ ಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-27061601

Comments

comments

Comments are closed.

Read previous post:
Kateel-26061605
ಅಮ್ಮುಂಜೆ ರಜತ ಪರ್ವ, ಸನ್ಮಾನ

ಕಟೀಲು : ಯಕ್ಷಗಾನ ಅಧ್ಯಯನಕ್ಕಾಗಿ ಅಕಾಡೆಮಿಯಲ್ಲಿ ರೂ. ಒಂದು ಲಕ್ಷಕ್ಕೂ ಹೆಚ್ಚು ಫೆಲೋಶಿಪ್ ನೀಡುತ್ತಿದ್ದು ಆಸಕ್ತರು ಯಕ್ಷಗಾನ ಅಧ್ಯಯನ ಸಂಶೋಧನೆಗೆ ಮುಂದಾಗಬೇಕು. ಮೋಹನ್ ಅಮ್ಮುಂಜೆ ಅವರ ೨೫...

Close