“ಆಯುರ್ವೇದ ದ್ರವ್ಯಗುಣ” ಕೃತಿ ಬಿಡುಗಡೆ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಡಾ. ಕಿದಿಯೂರು ಗುರುರಾಜ ಭಾಗವತರು ರಚಿತ “ಆಯುರ್ವೇದ ದ್ರವ್ಯಗುಣ ಸಾರ ಸಂಗ್ರಹ” ಕೃತಿಯನ್ನು ಜೂನ್ 29ರಂದು ಸಾಯಂ. ಗಂಟೆ 5ಕ್ಕೆ ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪೇಜಾವರ ಹಿರಿಯ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಹಾಗೂ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಬಿಡುಗಡೆಗೊಳಿಸಲಿರುವರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರುರವರು ಉಪಸ್ಥಿತರಿರುವರು ಎಂದು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Comments

comments

Comments are closed.