ಕಿನ್ನಿಗೋಳಿ ರೋಟರಿ ಪದಗ್ರಹಣ

ಕಿನ್ನಿಗೋಳಿ: ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆಗಳು ಸ್ಥಳೀಯ ಸಂಘ ಸಂಘಟನೆಗಳೊಂದಿಗೆ ಸೇರಿ ಸಮಾಜದ ಅಭಿವೃದ್ದಿಪರ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಬೇಕು. ಎಂದು ರೋಟರಿ ಜಿಲ್ಲೆ 3181 ರ 2018-19 ಸಾಲಿನ ಗವರ್ನರ್ ರೋಹಿನಾಥ್ ಪಿ ಹೇಳಿದರು.
ಸೋಮವಾರ ಕಿನ್ನಿಗೋಳಿ ರೋಟರಿಯ ರಜತ ಭವನದಲ್ಲಿ ನಡೆದ ಕಿನ್ನಿಗೋಳಿ ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ರಮಾನಂದ ಪೂಜಾರಿ ತಂಡಕ್ಕೆ ಪದಗ್ರಹಣ ನಡೆಸಿ ಮಾತನಾಡಿದರು.
ರೋಟರಿ ಜಿಲ್ಲೆ 3181 ರ ವಲಯ ೧ರ ಸಹಾಯಕ ಗವರ್ನರ್ ಜಿನರಾಜ್ ಸಿ. ಸಾಲ್ಯಾನ್ ಕಿನ್ನಿಗೋಳಿ ರೋಟರಿ ಮುಖವಾಣಿ ಸಿಂಚನ ಬಿಡುಗಡೆಗೊಳಿಸಿದರು. ರೋಟರಿಯ ವಲಯ ಸೇನಾನಿ ಜಯರಾಮ ಪೂಂಜಾ ಮಲೇರಿಯಾ, ಡೆಂಗ್ಯೂ ಬಗ್ಗೆ ಜಾಗೃತಿ ಸಾರುವ ಕರಪತ್ರ ಬಿಡುಗಡೆಗೊಳಿಸಿದರು. ನೂತನ ಅಧ್ಯಕ್ಷ ರಮಾನಂದ ಪೂಜಾರಿ ಮುಂದಿನ ವರ್ಷದ ಯೋಜನೆಗಳನ್ನು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಜೆರಾಲ್ಡ್ ಮಿನೇಜಸ್ ಗತ ವರ್ಷದ ವರದಿ ವಾಚಿಸಿದರು. ರೋಟರಿ ನೂತನ ಕಾರ್ಯದರ್ಶಿ ದೇವಿದಾಸ ಶೆಟ್ಟಿ ವಂದಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-29061603 Kinnigoli-29061604

Comments

comments

Comments are closed.

Read previous post:
Mulki-29061601
ಶಿಮಂತೂರು: ದೃಢಕಲಶ ಸಂಪನ್ನ

ಮೂಲ್ಕಿ: ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಸೋಮವಾರ ದೃಢಕಲಶಾಭಿಶೇಕ ನಡೆಯುದರೊಂದಿಗೆ ಬಹ್ಮಕಲಶೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಭಾನುವಾರ ಕ್ಷೇತ್ರದಲ್ಲಿ ವಾಸ್ತು...

Close