ಶಿಮಂತೂರು: ದೃಢಕಲಶ ಸಂಪನ್ನ

ಮೂಲ್ಕಿ: ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಸೋಮವಾರ ದೃಢಕಲಶಾಭಿಶೇಕ ನಡೆಯುದರೊಂದಿಗೆ ಬಹ್ಮಕಲಶೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಭಾನುವಾರ ಕ್ಷೇತ್ರದಲ್ಲಿ ವಾಸ್ತು ಪೂಜಾ ವಿಧಿಗಳು ನಡೆದು ಸೋಮವಾರ ಮುಂಜಾನೆ ಕಲಶ ಸ್ಥಾಪನೆ ಪೂಜಾ ಪುನಸ್ಕಾರಗಳು ಮತ್ತು ಲಕ್ಷ್ಮೀ ಜನಾರ್ಧನ ದೇವರಿಗೆ ಕಲಶಾಭಿಶೇಕ ಬಳಿಕ ಆದಿಜನಾರ್ದನದೇವರಿಗೆ ಕಲಶಾಭಿಶೇಕ ಬಳಿಕ 108 ಕಾಯಿಗಳ ಗಣಹೋಮ ಹಾಗೂ ಇನ್ನಿತರ ಯಾಜ್ಞಿಕ ವಿಧಿ ವಿಧಾನಗಳು ನಡೆದವು ಬಳಿಕ ಪ್ರಸನ್ನ ಪೂಜೆ ಮಹಾಪೂಜೆ ಫಲ ಮಂತ್ರಕ್ಷತೆ ಭೂರಿ ಸಮಾರಾಧನೆಯೊಂದಿಗೆ ನಡೆದು ಕಾರ್ಯಕ್ರಮ ಸಂಪನ್ನಗೊಂಡಿತು.

Mulki-29061601

Comments

comments

Comments are closed.

Read previous post:
Kinnigoli-29061602
ಕಿಲೆಂಜೂರು ಬೈಲು ಜಲಾವೃತ

ಕಿನ್ನಿಗೋಳಿ : ಸೋಮವಾರ ರಾತ್ರಿ ಸುರಿದ ಬಾರೀ ಮಳೆಗೆ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಬೈಲು ಜಲಾವೃತವಾಗಿದ್ದು, ಅತ್ತೂರು ಬೈಲು ಮಹಾಗಣಪತಿ ಮಂದಿರದ ಸಂಪರ್ಕ ಕಡಿದಿದೆ.

Close