ಪಾದೂರು ಪೈಪ್ ಲೈನ್ : ಕೃಷಿ ಭೂಮಿ ಹಾನಿ

ಕಿನ್ನಿಗೋಳಿ: ಪಾದೂರು ಪೈಪ್ ಲೈನ್ ಯೋಜನೆ ಅನ್ವಯ ಉಡುಪಿ ತಾಲೂಕಿನ ಪಾದೂರು ಗ್ರಾಮದಲ್ಲಿ ನಿರ್ಮಿಸಲಾಗುವ ಕಚ್ಚಾತೈಲ ದಾಸ್ತಾನು ಸ್ಥಾವರಕ್ಕೆ ಕಚ್ಚಾತೈಲ ಸಾಗಿಸುವ ಸಲುವಾಗಿ ನೆಲದಡಿ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು ತೋಕೂರು-ಪಾದೂರು ಪಾದೂರು ಕಚ್ಚಾತೈಲ ಘಟಕದ ಅಧಿಕಾರಿಗಳ ನಿರ್ಲಕ್ಷಕ್ಕೆ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ-ಉಲ್ಯ ಗ್ರಾಮದ ಕೃಷಿಕರು ಕಂಗಾಲಾಗಿದ್ದು ಮಳೆಗಾಲದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಪರದಾಟ ಪಡಬೇಕಾಗಿದೆ. ಪಾದೂರು ಪೈಪ್‌ಲೈನ ಬೇಕಾಬಿಟ್ಟಿ ಕಾಮಗಾರಿಯಿಂದ ರಸ್ತೆ ಕಡಿತ, ಕುಡಿಯುವ ನೀರಿನ ಸಮಸ್ಯೆ, ಕೃಷಿ ಭೂಮಿಗಳು ಹಾನಿಗೀಡಾಗಿದೆ.
ಇದೀಗ ಮಳೆ ನೀರಿನೊಂದಿಗೆ ಅಗೆದು ತೆಗೆದ ಮಣ್ಣು ಪಕ್ಕದ ಕೃಷಿಭೂಮಿಗಳಿಗೂ ಹರಡಿ ಯಾವ ಗದ್ದೆಯಲ್ಲೂ ಕೃಷಿ ಚಟುವಟಿಕೆ ನಡೆದ ಸ್ಥಿತಿ ನಿರ್ಮಾಣಗೊಳ್ಳುವ ದಿನ ಬಂದಿದೆ.
ಕಳೆದ ಮಾರ್ಚ ತಿಂಗಳಿನಲ್ಲಿ ಪಂಜ ಉಲ್ಯ ಪರಿಸರದಲ್ಲಿ ಪೈಪ್‌ಲೈನ್ ಕಾಮಗಾರಿ ಆರಂಭವಾಗಿದ್ದು ಹಲವಾರು ಎಕರೆ ಪ್ರದೇಶದಲ್ಲಿ ಈ ಸಲ ಬೇಸಾಯ ಮಾಡುವಂತಿಲ್ಲ, ದನಕರುಗಳನ್ನು ಹೊರತರುವಂತಿಲ್ಲ ಗ್ರಾಮಸ್ಥರು ಕೆಲಸಕ್ಕೆ ತೆರಳಲು ಹಾಗೂ ಶಾಲಾ ಮಕ್ಕಳು ಶಾಲೆಗೆ ಹೋಗಲು ಸುಮರು ನಾಲ್ಕು ಕಿಲೇಮೀಟರ್ ಸುತ್ತು ಬಳಸಿ ಹೋಗಬೇಕಾದ ಪ್ರಮೇಯ ಬಂದಿದೆ. ಕೆಮ್ರಾಲ್ ಗ್ರಾಮ ಪಂಚಾಯಿತಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಪೈಪ್‌ಲೈನ್ ಹಾಕಿ ಕೊಟ್ಟಿದ್ದು ಪಾದೂರು ಪೈಪ್‌ಲೈನ್ ಕಾಮಗಾರಿ ಸಂದರ್ಭ ಕುಡಿಯುವ ನೀರಿನ ಪೈಪ್ ತಂಡು ಮಾಡಿರುವುದರಿಂದ 2 ತಿಂಗಳಿನಿಂದ ಉಲ್ಯ ಪರಿಸರದಲ್ಲಿ ಕುಡಿಯುವ ನೀರನ್ನು 2 ಮೈಲ್ ದೂರದಿಂದ ಹೊತ್ತು ತರಬೇಕಾದ ಪರಿಸ್ಥಿತಿ ಎದುರಾಗಿದೆ ಮಳೆಗಾಲದಲ್ಲಿ ನೆರೆಯ ನೀರನ್ನು ಉಪಯೋಗಿಸುವಂತಿಲ್ಲ ಎಂದು ಸ್ಥಳೀಯ ಮಹಿಳೆಯರು ಬೇಸರಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪಂಜ ಉಲ್ಯ ಗ್ರಾಮಸ್ಥರ ಕಷ್ಟಗಳನ್ನು ತ್ವರಿತವಾಗಿ ಸ್ಪಂದಿಸಿ ಗ್ರಾಮೀಣ ಕೃಷಿಕರ ಹಿತ ಕಾಪಾಡಬೇಕಾಗಿದೆ.

ಕೃಷಿಗೆ ಆತಂಕ:
ಭೂಮಿಯಲ್ಲಿ ಗುಂಡಿ ತೋಡಿದಾಗ ಶೇಡಿ ಮಣ್ಣು ಮೇಲೆ ಬಂದು ಕೃಷಿ ಭೂಮಿಯನ್ನು ಪಸರಿಸಿದರೆ ನಂತರ ಜಮೀನಿನಲ್ಲಿ ಯಾವುದೇ ಕೃಷಿ ಕಾರ್ಯಕ್ಕೆ ಸಮಸ್ಯೆ ಉಂಟಾಗಲಿದೆ.

ಪಂಜ ಉಲ್ಯ ತಡೆಗೋಡೆಯ ಆತಂಕ
ಪಂಜ ಉಲ್ಯ ತಡೆಗೋಡೆಯನ್ನು ತುಂಡರಿಸಿ ಅದರ ಅಡಿಯಲ್ಲಿಯೇ ಪೈಪ್‌ಲೈನ್ ಸಾಗಿದೆ. ಈಗ ಬೇರೆ ತಡೆಗೋಡೆ ಕಟ್ಟಿದರೂ (ಸಿಮೆಂಟ್ ಹಾಕದೆ )ಸೂಕ್ತ ಭದ್ರತಾ ವೈಪಲ್ಯ ಕಂಡು ಬರುತ್ತಿದೆ. ಎರಡು ದಿನ ಸತತ ಮಳೆ ಬಂದರೆ ನೆರೆ ಬಂದು ತಿರುವುನಲ್ಲಿರುವ ತಡೆಗೋಡೆ ಮುರಿದು ಹಲವಾರು ಜಮೀನುಗಳಿಗೆ ನೆರೆ ನುಗ್ಗಿ ಅಪಾರ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.

18 ಮೀಟರ್ ಮಾತ್ರ ಕಾಮಗಾರಿಗೆ ಉಪಯೋಗಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರೂ ಹೆಚ್ಚಿನ ಜಾಗ ಕ್ರಮಿಸಿ ಗದ್ದೆಯಲ್ಲಿಯೇ ಕಾಮಾಗಾರಿಯಿಂದ ತೆಗೆದ ಮಣ್ಣು ಹಾಕಿ ಕೃಷಿ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಿದ್ದಾರೆ. ಈಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಕೆಮ್ರಾಲ್ ಪಂಚಾಯಿತಿಯಲ್ಲಿ ಗ್ರಾಮಸ್ಥರ ಹಿತ ಮನಗಂಡು ನಿರ್ಣಯ ಕೈಗೊಂಡು ಮನವಿ ಮಾಡಿದ್ದೇವೆ. ಜಿಲ್ಲಾಡಳಿತದಿಂದ ಇದುವರೆಗೂ ಯಾವುದೇ ಮಾರುತ್ತರ ಬಂದಿಲ್ಲ
ಸುರೇಶ್ ಪಂಜ
ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯ

ಕಾಮಗಾರಿಯ ಬದಿಯ ಗದ್ದೆಯಲ್ಲಿ ಬಿತ್ತನೆ ಮಾಡಿದ್ದು ನೆರೆ ನೀರು ತುಂಬಿ ಕೊಳೆತು ಹೋಗಿದೆ ಮಣ್ಣು ಸಮತಟ್ಟು ಮಾಡದೇ ಇರುವುದರಿಂದ ನೀರು ಹರಿದು ಹೋಗಲು ಸಾಧ್ಯವಿಲ್ಲ. ಉಲ್ಯ ರಸ್ತೆ ಕಡಿದು ಹಾಕಿದ್ದು ಶಾಲಾ ಮಕ್ಕಳು ಶಾಲೆಗೆ ಹೋಗಲು, ಕೃಷಿಕರು ಹಾಲಿನ ಡೈರಿಗೆ ಹಾಲು ಕೊಡಲು ಅಲ್ಲದೆ ದಿನಸಿ ಅಂಗಡಿ ಹಗೂ ಇನ್ನಿತರ ಸಾಮಾಗ್ರಿಗಳನ್ನು ತರಲು ಕಷ್ಟ ಸಾದ್ಯವಾಗಿದೆ.
ವೇದಾವತಿ ಉಲ್ಯ
ಪಂಜ ನವಜ್ಯೋತಿ ಮಹಿಳಾ ಮಂಡಲ ಪಂಜ

ಕೆಲವು ದಿನಗಳ ಹಿಂದೆ ಅತಿಕಾರಿಬೆಟ್ಟು ಗ್ರಾಮಪಂಚಾಯತಿ ವ್ಯಾಪ್ತಿಯ ಅಂಗರಗುಡ್ಡೆಯಿಂದ ಮೂಲ್ಕಿ-ಕಿನ್ನಿಗೋಳಿ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ತುಂಡರಿಸಿ ಪೈಪುಲೈನು ಹಾಕಲು ಗುತ್ತಿಗೆದಾರರು ನಿರ್ಧರಿಸಿದಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಮಳೆಗಾಲದಲ್ಲಿ ಪೈಪು ಹಾಕಿದರೆ ಪರಿಸರವಿಡೀ ಕೆಸರುಮಯ ವಾತಾವರಣ ಸೃಷ್ಠಿಯಾಗುತ್ತದೆ. ರಸ್ತೆಯೂ ಕೆಟ್ಟು ಹೋಗುತ್ತದೆ ರಸ್ತೆ ಅಡಿ ಭಾಗದಲ್ಲಿ ಸುರಂಗ ಮೂಲಕ ಅಥವಾ ಕಾಂಕ್ರೀಟು ರಸ್ತೆ ಮೂಲಕ ಸಮರ್ಪಕ ಕಾಮಗಾರಿ ನಡೆಸುವುದಾದರೆ ಮಾತ್ರ ಕಾಮಗಾರಿಗೆ ಅವಕಾಶ ನೀಡಲಾಗುವುದು ಎಂದು ಗುತ್ತಿಗೆದಾರರೊಡನೆ ವಾಗ್ವಾದ ನಡೆದ ಘಟನೆ ನಡೆದಿತ್ತು.

Kinnigoli-01071605 Kinnigoli-01071606

Comments

comments

Comments are closed.

Read previous post:
Kinnigoli-01071604
ಕೃಷಿ ಪ್ರದೇಶಗಳು ಜಲಾವೃತ

ಕಿನ್ನಿಗೋಳಿ : ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಕಿನ್ನಿಗೋಳಿ ಸಮೀಪದ ಪಂಜ ಉಲ್ಯದ ಕೃಷಿ ಪ್ರದೇಶಗಳು ಜಲಾವೃತ ಗೊಂಡಿದೆ.  

Close