ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿ ಸಂಸತ್ತು

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ನಾಯಕತ್ವದ ಗುಣಗಳ ಅಭಿವೃದ್ಧಿಗಾಗಿ ಶಾಲಾ ವಿದ್ಯಾರ್ಥಿ ಸಂಸತ್ತು ಬಹಳ ಪೂರಕವಾಗಿದೆ ಎಂದು ಪತ್ರಕರ್ತ ಜೆಸಿಐ ರಾಜ್ಯ ತರಬೇತುದಾರ ಹರೀಶ್ ಕುಮಾರ್ ಹೆಜ್ಮಾಡಿ ಹೇಳಿದರು.
ಕಾರ್ನಾಡು ಸಿ.ಎಸ್.ಐ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಎಳೆ ವಯಸ್ಸಿನಲ್ಲಿಯೇ ಮುಂದಿನ ಗುರಿ ನಿರ್ಧರಿತವಾಗಿ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ. ವಿಜ್ಞಾನ ಶಿಕ್ಷಣದಲ್ಲಿ ಮುಂದುವರಿದು ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಎಂದು ಒಂದೆರಡು ವಿಭಾಗಗಳನ್ನು ಆರಿಸದೆ ಉನ್ನತ ವ್ಯಾಸಂಗ ಹಾಗೂ ಆರ್ಥಿಕ ಉನ್ನತಿ ಸಾಧ್ಯವಾಗುವ ಬಹಳಷ್ಟು ವಿಭಾಗಗಳ ಬಗ್ಗೆ ತಿಳಿದುಕೊಂಡು ರಾಷ್ಟ್ರೀಯ ಪ್ರತಿಭಾ ಪರೀಕ್ಷೆಗಳನ್ನು ಬರೆಯುವ ಮೂಲಕ ಉನ್ನತಿಗಳಿಸಲು ಸಾಧ್ಯ ಎಂದರು.
ಶಾಲಾ ಸಂಚಾಲಕರಾದ ಪ್ರೊ.ಸ್ಯಾಮ್ ಮಾಬೆನ್ ಮಾತನಾಡಿ, ಶಿಕ್ಷಣಗಳಿಕೆಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಶೃಜನಾತ್ಮಕ ಬೆಳವಣಿಗೆ ಸಾಧ್ಯವಿದ್ದು ವಿದ್ಯಾರ್ಥಿ ಸಂಸತ್ ಪ್ರೇರಕವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರೆ.ಎಡ್ವರ್ಡ್ ಕರ್ಕಡ ರವರು ಮಾತನಾಡಿ, ನಿದ್ಯಾರ್ಥಿಗಳ ಶೃಜನಶೀಲತೆಗೆ ವಿದ್ಯಾರ್ಥಿ ಸಂಸತ್ತು ಪ್ರಮುಖ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸಕ್ರೀಯರಾಗಿ ಭಾಗವಹಿಸುವ ಮೂಲಕ ಉಪಯೋಗಿಸಿಕೊಂಡು ಆಂತರಿಕವಾಗಿ ಸದೃಡತೆಯನ್ನು ಗಳಿಸಿಕೊಳ್ಳಲು ಸಾಧ್ಯ ಎಂದರು.
ಸಿ.ಎಸ್.ಐ ಆಂಗ್ಲ ಮಾದ್ಯಮಶಾಲಾ ವಿದ್ಯಾರ್ಥಿ ಸಂಸತ್ತು ಅಧ್ಯಕ್ಷೆ ಆಯೆಶಾ ರಮೀಳಾ ಮತ್ತು ಸಿ.ಎಸ್.ಐ ಕನ್ನಡ ಮಾದ್ಯಮ ಶಾಲೆಯ ಸಂಸತ್ತು ಅಧ್ಯಕ್ಷರಾಗಿ ಸೌಂದರ್ಯ ತಮ್ಮ ತಂಡಗಳೋಂದಿಗೆ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಕರಾದ ಹರಿಶ್ಚಂದ್ರ ಮತ್ತು ಜೇನ್ ಹೆಲೆನ್ ಪ್ರಮಾಣವಚನ ಭೋಧಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ರಂಜನ್ ಜತ್ತನ್ನಾ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಉಮಾವತಿ ಸ್ವಾಗತಿಸಿದರು.ಶಿಕ್ಷಕಿ ಝೀಟಾ ಮೆಂಡೋನ್ಸಾ ನಿರೂಪಿಸಿದರು.ಪ್ಲಾವಿಯಾ ಡಿಸೋಜಾ ವಂದಿಸಿದರು.

Mulki-01071601 Mulki-01071602

 

Comments

comments

Comments are closed.

Read previous post:
Kinnigoli-30061605
ವಿನೋದ ಶೆಟ್ಟಿ

ಕಿನ್ನಿಗೋಳಿ: ಕಿನ್ನಿಗೋಳಿಯ ಕೊಡೆತ್ತೂರು ಬಾಕ್ಯಾರಕೋಡಿ ಕಾವೇರಿ ಧಾಮ ನಿವಾಸಿ ಜಯರಾಮ ಶೆಟ್ಟಿ ಅವರ ಧರ್ಮ ಪತ್ನಿ ವಿನೋದ ಶೆಟ್ಟಿ (62 ವರ್ಷ) ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ....

Close